ನಿದ್ದೆಗೆಡಿಸುವ ಮೊಬೈಲ್ ಜೊತೆ ಹುಷಾರಾಗಿರಿ..!

ಈ ಸುದ್ದಿಯನ್ನು ಶೇರ್ ಮಾಡಿ

Monile-2

ಪ್ರಪಂಚದಲ್ಲಿಯೇ ಮನುಷ್ಯನ ಮೇಲೆ ಪ್ರಭಾವ ಬೀರಿದ ವಸ್ತುವೆಂದರೆ ಮೊಬೈಲ್. ಇದನ್ನು ನಾವು ಜಂಗಮವಾಣಿ ಎಂದು ಕರೆಯುತ್ತೇವೆ. ಇತ್ತೀಚಿನ ದಿನಗಳಲ್ಲಿ ಎಲ್ಲ ರೀತಿಯ ಮನುಷ್ಯನ ಅವಶ್ಯಕ ಅಂಶಗಳನ್ನು ಒಳಗೊಂಡಿದೆ. ಮಾನವ ತನ್ನ ತನವನ್ನ ಮರೆತು ಇದರ ಜತೆಗೆ ಅತಿಯಾದ ಸಂಬಂಧ ಹೊಂದಿದ್ದಾನೆ. ಇತ್ತೀಚಿನ ದಿನಗಳಲ್ಲಂತೂ ಮೊಬೈಲ್‍ಗೆ ಅಂಟಿಕೊಂಡಿದ್ದಾನೆ. ಇದನ್ನು ಬಿಟ್ಟರೆ ಜೀವನವೇ ಇಲ್ಲ ಅಂತ ಅಂದುಕೊಂಡಿದ್ದಾನೆ. ಹಾಗಾಗಿ ಬಳಕೆಯ ನಿಯಂತ್ರಣ ಮನುಷ್ಯನ ಜೀವನಕ್ಕೆ ಅತೀ ಮುಖ್ಯ.

ಪ್ರತಿ ನಿಮಿಷವೂಸಂಗಾತಿಯಾಗಿರುವ ಮೊಬೈಲ್ ನಿದ್ರೆ ಸಮಸ್ಯೆ ಉಂಟು ಮಾಡುತ್ತದೆ. ಇದಕ್ಕೆ ಕಾರಣ ಮೊಬೈಲ್ ಫೋನ್..! ನಿದ್ರೆ ಮಾಡುವ ಸಮಯದಲ್ಲಿ ಮೆಸೇಜ್, ವಾಟ್ಸಪ್ ಮತ್ತು ಫೇಸ್‍ಬುಕ್ ಇವುಗಳನ್ನು ನೋಡುತ್ತೇವೆ. ಹೀಗೆ ಬಹಳ ಹೊತ್ತು ಸ್ಕ್ರೀನ್ ನೋಡುವುದರಿಂದ ನಿದ್ರೆ ಸಮಸ್ಯೆ ಉಂಟಾಗುತ್ತದೆ. ಅದೇ ರೀತಿ ಹೆಡ್‍ಫೋನ್‍ಗಳನ್ನು ಹಾಕಿಕೊಂಡು ಹಾಡು ಕೇಳುವುದು, ಗೇಮ್ ಆಡುವುದು, ವಿಡಿಯೋ ನೋಡುವುದರಿಂದ ನಿದ್ರೆ ಸರಿಯಾಗಿ ಬರುವುದಿಲ್ಲ. ಶಾಲೆಯಲ್ಲಿ, ಕಾಲೇಜಿನಲ್ಲಿ ಆಫೀಸ್‍ನಲ್ಲಿ ಉತ್ಸುಕರಾಗಿ ಇರಲು ಸಾಧ್ಯವಾಗುವುದಿಲ್ಲ. ಕೆಲಸ ಮಾಡಿ ಸುಸ್ತಾದಾಗ ನಿದ್ರೆ ಅತ್ಯವಶ್ಯ. ಆದರೂ ನಾವು ಮೊಬೈಲ್‍ಅನ್ನು ಬಿಡದೆ ಮಲಗುವ ಹೊತ್ತಿನಲ್ಲೂ ಬಳಸುತ್ತಿದ್ದರೆ ನಿದ್ರೆ ಬರುವುದಿಲ್ಲ. ಇದು ಮನುಷ್ಯನ ಆಸಕ್ತಿದಾಯಕ ಜೀವನವನ್ನು ಕಸಿದುಕೊಂಡಿದೆ.

ಹೀಗೆಯೇ ನಾವು ದಿನನಿತ್ಯದ ಕೆಲಸದಿಂದ ಹಿಡಿದು ಕಷ್ಟ-ಸುಖಗಳಿಗೆ ನಮ್ಮ ಆಸಕ್ತಿ, ಅಭಿರುಚಿ, ಆಲೋಚನೆ, ಅಭಿಪ್ರಾಯ, ಭಾವನೆ, ಅನಿಸಿಕೆಗಳನ್ನು ಇನ್ನೊಬ್ಬರಿಗೆ ತಿಳಿಸುವವರೆಗೂ ನಮಗೆ ತಾಳ್ಮೆ ಇರುವುದಿಲ್ಲ. ಹಾಗೆಯೇ ಕರೆ ಮಾಡಿ ಹೇಳಲು ಸಾಧ್ಯವಿಲ್ಲದಿದ್ದಾಗ ಎಸ್‍ಎಂಎಸ್‍ಗಳನ್ನು ಕಳುಹಿಸುವ ಮೂಲಕ ನಾವು ಸಮಾಧಾನ ಪಡುತ್ತೇವೆ. ಮೊಬೈಲ್ ಇಂದು ಸಂವಹನದ ಕೇಂದ್ರ ಬಿಂದುವಾಗಿದೆ ಹಾಗೂ ಕೊಂಡಿಯಾಗಿದೆ ಎಂದು ಹೇಳಬಹುದು.

ನಿಜ ಹೇಳಬೇಕೆಂದರೆ ಮೊಬೈಲ್ ಬಳಕೆ ಹೆಚ್ಚಾದಂತೆ ಸಮಸ್ಯೆಯೂ ಹೆಚ್ಚಾಗುತ್ತದೆ. ಅತಿಯಾದರೆ ಅಮೃತವೂ ವಿಷ. ನಿದ್ರೆ ಮಾನವನ ದೇಹಕ್ಕೆ ಬಹಳ ಮುಖ್ಯ. ಅದು ದೇಹದ ಆಯಾಸವನ್ನು ಕಡಿಮೆ ಮಾಡುತ್ತದೆ. ಆರೋಗ್ಯವು ಸರಿಯಾದ ನಿದ್ರೆಯಿಂದ ಸಿಗುತ್ತದೆ. ಯಾವಾಗಲು ಆ್ಯಕ್ಟಿವ್ ಮತ್ತು ಜಾಗೃತರಾಗಿರಲು ನಿದ್ರೆ ಅನಿವಾರ್ಯ. ಹಾಗಂತ ಮೊಬೈಲ್ ಬಳಸದೆ ಇರಲು ಸಾಧ್ಯವಿಲ್ಲ. ಇದನ್ನು ಅಧಿಕ ಪ್ರಮಾಣದಲ್ಲಿ ಬಳಸುವುದರಿಂದ ಆರೋಗ್ಯದ ಸಮಸ್ಯೆ ಉಂಟಾಗುತ್ತದೆ.

Monile-1

# ಮೊಬೈಲ್ ಬಳಕೆ ಕಡಿಮೆ ಮಾಡಬೇಕೆಂದರೆ ಈ ಕೆಳಗಿನ ಏಳು ಅಂಶಗಳನ್ನು ಪಾಲಿಸಿ.
ಮಲಗುವ ಮುಂಚೆ ಮೊಬೈಲ್ ಬಳಸಿ.
ನಿದ್ರೆ ಮಾಡುವಾಗ ಮೊಬೈಲ್ ದೂರವಿಡಿ.
ಚಾಟ್ ಮಾಡುವ ಸಮಯವನ್ನು ಕಡಿತ ಗೊಳಿಸಿ.
ಅತಿಯಾಗಿ ಮೊಬೈಲ್ ಸ್ಕ್ರಿನ್ ವೀಕ್ಷಿಸುವುದನ್ನು ಕಡಿಮೆ ಮಾಡಿ.
ಕಿವಿಗೆ ಒತ್ತುವಂತೆ ಮೊಬೈಲ್‍ನಲ್ಲಿ ಮಾತನಾಡ ಬೇಡಿ.
ನಿಗದಿತ ಸಮಯದಲ್ಲಿ ಮಾತ್ರ ತಮಗೆ ಇಷ್ಟವಾದ ಆ್ಯಪ್‍ಗಳನ್ನು ಬಳಸಿ.
ಹಾಡುಗಳನ್ನು ಕೇಳಿ, ಆದರೆ ಸದಾ ಕಿವಿಗೆ ಇಯರ್ ಫೋನ್ ಹಾಕಿಕೊಳ್ಳಬೇಡಿ.
ಇದೊಂದು ನಿರಂತರ ಮುಗಿಯದ ಮಾಧ್ಯಮ ಸಾಧನ. ಹಾಗಂತ ಮರೆಯಲು ಸಾಧ್ಯವಿಲ್ಲ, ಬಿಡಲೂ ಸಾಧ್ಯವಿಲ್ಲ. ಆದರೂ ನನ್ನ ಬಯಕೆ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ, ನಿದ್ದೆಮಾಡಿ. ನಿಮ್ಮ ಆರೋಗ್ಯ ಮತ್ತು ಆಯಸ್ಸು ಹೆಚ್ಚಿಸಿಕೊಳ್ಳಿ.

Facebook Comments