ಬಿಬಿಎಂಪಿ ಕ್ಯಾಂಟಿನ್ ಲಿಂಗರಾಜು ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.13- ಕೊರೊನಾ ಪಾಸಿಟಿವ್ ಹಾಗೂ ವ್ಯಾಪಾರದಲ್ಲಿನ ನಷ್ಟದಿಂದಾಗಿ ಬಿಬಿಎಂಪಿ ಆವರಣದಲ್ಲಿ ಕಳೆದ 24 ವರ್ಷಗಳಿಂದ ಕ್ಯಾಂಟಿನ್ ನಡೆಸುತ್ತಿದ್ದ ಪಾಲಿಕೆ ಕ್ಯಾಂಟಿನ್ ಮಾಲೀಕ ಲಿಂಗರಾಜು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೈಲುಸಂದ್ರದ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪಾಲಿಕೆ ಅಂಗಳದಲ್ಲಿ ಐಡಿಸಿ ಕ್ಯಾಂಟಿನ್‍ಗೆ ಅವಕಾಶ ಮಾಡಿಕೊಟ್ಟಿದ್ದು, ಐಡಿಸಿ ಹೊಟೇಲ್, ಮೊಬೈಲ್ ಯುನಿಟ್ ಪಾಲಿಕೆ ಆವರಣಕ್ಕೆ ಬಂದ ನಂತರ ಲಿಂಗರಾಜು ಅವರ ಕ್ಯಾಂಟಿನ್ ವ್ಯಾಪಾರದಲ್ಲಿ ಸಾಕಷ್ಟು ನಷ್ಟ ಅನುಭವಿಸಿದ್ದರು.

ಒಂದೆಡೆ ವ್ಯಾಪಾರದಲ್ಲಿ ನಷ್ಟ, ಮತ್ತೊಂದೆಡೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಹತಾಶೆಗೊಂಡು ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

ಪಾಲಿಕೆ ಆವರಣದಲ್ಲಿ ಕಳೆದ 24 ವರ್ಷಗಳಿಂದ ಕ್ಯಾಂಟಿನ್ ನಡೆಸುತ್ತಿದ್ದ ಲಿಂಗರಾಜು ಮೇಯರ್, ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು, ಪಾಲಿಕೆಯ ಎಲ್ಲ ನೌಕರರಿಗೂ ಚಿರಪರಿಚಿತರಾಗಿದ್ದರು.

ಇತ್ತೀಚೆಗೆ ಬಿಬಿಎಂಪಿ ಬೇರೆ ಕ್ಯಾಂಟಿನ್ ನಡೆಸಲು ಅವಕಾಶ ಮಾಡಿಕೊಟ್ಟಿದ್ದರಿಂದ ಇವರ ಕ್ಯಾಂಟಿನ್ ವ್ಯಾಪಾರ-ವಹಿವಾಟು ಕುಸಿದಿತ್ತು. ತಮ್ಮ ಕ್ಯಾಂಟಿನ್‍ಅನ್ನು ಪುನಶ್ಚೇತನಗೊಳಿಸಲು ಲಿಂಗರಾಜು ಸಾಕಷ್ಟು ಶ್ರಮ ಪಟ್ಟಿದ್ದರು. ಹತಾಶರಾಗಿ ಇಂದು ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

Facebook Comments