ಕ್ಯಾಪಿಟಲ್ ಮೇಲೆ ದಾಳಿ : ಟ್ರಂಪ್ ವಿರುದ್ಧ ದೋಷಾರೋಪಣೆ
ವಾಷಿಂಗ್ಟನ್, ಜ.11- ಡೊನಾಲ್ಡ್ ಟ್ರಂಪ್ ಅವರನ್ನು ಅಮೆರಿಕ ಅಧ್ಯಕ್ಷ ಪದವಿಯಿಂದ ಕೆಳಗಿಸುವ ದೋಷಾರೋಪ ಶಾಸನವನ್ನು ಹೌಸ್ ತರಲು ತೀರ್ಮಾನಿಸಿದೆ ಎಂದು ಸ್ಪೀಕರ್ ನ್ಯಾನ್ಸಿ ಪೆಲೊಸಿ ಅವರು ಪ್ರಕಟಿಸಿದ್ದಾರೆ. ಇತ್ತೀಚೆಗೆ ಟ್ರಂಪ್ ಬೆಂಬಲಿತ ಸಿಬ್ಬಂದಿ ಹಾಗೂ ಕಾರ್ಯಕರ್ತರು ಪ್ರತಿಷ್ಠಿತ ಅಮೆರಿಕದ ಕ್ಯಾಪಿಟಲ್ ಹೌಸ್ನೊಳಗೆ ಬಂದೂಕುಗಳನ್ನು ಹಿಡಿದು ನುಗ್ಗಿ ದಾಂಧಲೆ ನಡೆಸಿದ್ದರ ಹಿನ್ನೆಲೆಯಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಕೆಳಗಿಸಲು ಕಾನೂನಿನಲ್ಲಿ ತಿದ್ದುಪಡಿ ಮಾಡಲು ಮುಂದಾಗಿದೆ ಎಂಬ ಮಾಹಿತಿಯನ್ನು ಹೌಸ್ ಸ್ಪೀಕರ್ ನ್ಯಾನ್ಸಿ ಬಹಿರಂಗ ಪಡಿಸಿದ್ದಾರೆ.
ಕ್ಯಾಪಿಟಲ್ ಮೇಲೆ ಮಾರಣಾಂತಕ ದಾಳಿಯ ನಂತರ ಟ್ರಂಪ್ ಪ್ರಜಾಪ್ರಭುತ್ವಕ್ಕೆ ಬೆದರಿಕೆ ಹಾಕಿದ್ದಾರೆ. ಆದ್ದರಿಂದ ಅವರನ್ನು ಬಲವಂತವಾಗಿ ಹೊರಹಾಕಲು ಸಾಂವಿಧಾನಿಕ ಅಧಿಕಾರವನ್ನು ಬಳಸಲು ಅವರು ಉಪಾಧ್ಯಕ್ಷ ಮೈಕ್ ಪೆನ್ಸ್ ಮತ್ತು ಕ್ಯಾಬಿನೆಟ್ ಅನ್ನು ಕೇಳಿಕೊಂಡಿದ್ದಾರೆ.
ಪೆನ್ಸ್ ಅವರು ತಮ್ಮ ಅಧಿಕಾರವನ್ನು ಬಳಸಿ ಶಾಸನಕ್ಕೆ 25ನೇ ತಿದ್ದುಪಡಿ ತಂದು ಟ್ರಂಪ್ ಅವರನ್ನು ಅಧ್ಯಕ್ಷ ಕಚೇರಿಯಿಂದ ಹೊರಹಾಕಬೇಕು ಸಂಸತ್ತಿಗೆ ತಿಳಿಸಿದ್ದಾರೆ.