ಭದ್ರಾ ನಾಲೆಗೆ ಉರುಳಿಬಿದ್ದ ಕಾರು, ಪತಿ ಪಾರು, ಪತ್ನಿ ನೀರು ಪಾಲು..!

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು, ಆ.25- ತುಂಬಿ ಹರಿಯುತ್ತಿದ್ದ ಭದ್ರಾ ನಾಲೆಗೆ ಕಾರು ಉರುಳಿಬಿದ್ದು ಪತಿ ಪಾರಾಗಿದ್ದು, ಪತ್ನಿ ನೀರು ಪಾಲಾಗಿರುವ ಘಟನೆ ತರೀಕೆರೆ ತಾಲೂಕಿನ ಲಕ್ಕವಳ್ಳಿಯಲ್ಲಿ ನಡೆದಿದೆ.

ನೀರು ಪಾಲಾದ ಮಹಿಳೆಯನ್ನು ಸರ್ವಮಂಗಳ (32) ಎಂದು ಗುರುತಿಸಲಾಗಿದ್ದು, ಪತಿ ಸಂತೋಷ್ ಜೈನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಸಂತೋಷ್ ಜೈನ್ ತಮ್ಮ ಬೊಲೆರೋ ಕಾರಿನಲ್ಲಿ ಪತ್ನಿ ಸಮೇತ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ತುಂಬಿ ಹರಿಯುತ್ತಿದ್ದ ಭದ್ರಾ ನಾಲೆಗೆ ಚಾಲಕನ ನಿಯಂತ್ರಣ ತಪ್ಪಿ ಬೊಲೆರೋ ಕಾರು ಉರುಳಿ ಬಿತ್ತು. ಹರಿಯುತ್ತಿದ್ದ ನೀರಿನಲ್ಲಿ ಈಜಾಡಿ ದಡ ಸೇರುವಲ್ಲಿ ಸಂತೋಷ್ ಯಶಸ್ವಿಯಾದರು.

ಆದರೆ, ಈಜು ಬಾರದ ಪತ್ನಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದರೂ ರಕ್ಷಿಸಿಕೊಳ್ಳಲು ಸಂತೋಷ್‍ಗೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಪತ್ನಿ ನೀರು ಪಾಲಾಗಿದ್ದಾರೆ.

ಸ್ಥಳಕ್ಕೆ ಧಾವಿಸಿದ ನುರಿತ ಈಜುಗಾರರು ನೀರಿನಲ್ಲಿ ಕೊಚ್ಚಿ ಹೋಗಿರುವ ಸರ್ವಮಂಗಳ ಅವರಿಗಾಗಿ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಪ್ರಾಣಾಪಾಯದಿಂದ ಬಚಾವ್ ಆಗಿರುವ ಸಂತೋಷ್ ಜೈನ್ ಅವರನ್ನು ವಶಕ್ಕೆ ಪಡೆದಿರುವ ಲಕ್ಕವಳ್ಳಿ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

Facebook Comments

Sri Raghav

Admin