ಮರಕ್ಕೆ ಕಾರು ಡಿಕ್ಕಿಯಾಗಿ ತುಳು ಚಿತ್ರ ನಿರ್ದೇಶಕ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ದಕ್ಷಿಣಕನ್ನಡ, ಮಾ.22-ಮರಕ್ಕೆ ಕಾರು ಡಿಕ್ಕಿಯಾಗಿ ತುಳು ಚಿತ್ರದ ನಿರ್ದೇಶಕ ಮೃತಪಟ್ಟಿರುವ ಘಟನೆ ಮೂಡಬಿದ್ರೆಯ ಶಿರ್ತಾಡಿ ಗ್ರಾಮದಲ್ಲಿ ಸಂಭವಿಸಿದೆ.  ಹ್ಯಾರೀಸ್ ಹೌರಾಲ್(30)ಮೃತಪಟ್ಟ ನಿರ್ದೇಶಕ.

ಹ್ಯಾರೀಸ್ ಹೌರಾಲ್ ಅವರು ಚಿತ್ರವೊಂದನ್ನು ನಿರ್ದೇಶನ ಮಾಡುತ್ತಿದ್ದು, ನಿನ್ನೆ ಚಿತ್ರದ ನಿರ್ಮಾಪಕರನ್ನು ಅವರ ಮನೆಗೆ ಬಿಟ್ಟು ನಂತರ ತಮ್ಮ ಓಮ್ನಿ ಕಾರಿನಲ್ಲಿ ತೆರಳುತ್ತಿದ್ದಾಗ ಮೂಡಬಿದ್ರೆಯ ಶಿರ್ತಾಡಿ ಬಳಿ ಮರಕ್ಕೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ನಿರ್ದೇಶಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments