ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಕಾರು: ಐವರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

ಕೆಆರ್ ಪೇಟೆ, ಮೇ 14- ರಸ್ತೆಯಲ್ಲಿ ಹೋಗುತ್ತಿದ್ದ ಜಾನುವಾರುಗಳಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಮಗುಚಿ ಬಿದ್ದ ಪರಿಣಾಮ ಒಂದೇ ಕುಟುಂಬದ ಐವರಿಗೆ ಗಂಭೀರ ಸ್ವರೂಪದ ಗಾಯಗಳಾಗಿರುವ ಘಟನೆ ತಾಲೂಕಿನ ಪುರ ಗೇಟ್ ಬಳಿ ಇರುವ ಚನ್ನರಾಯಪಟ್ಟಣ-ಕೆಆರ್ ಪೇಟೆ ಮುಖ್ಯರಸ್ತೆಯಲ್ಲಿ ನಡೆದಿದೆ.  ಮಳವಳ್ಳಿ ತಾಲೂಕಿನ ವಡ್ಡರಹಳ್ಳಿಯ ತಮ್ಮಯ್ಯ(55), ರಾಜಮ್ಮ(50), ನಂದನ್‍ಕುಮಾರ್(14), ಶಿಲ್ಪ(30), ರೂಪಾ(32) ಗಾಯಗೊಂಡವರು.

ಘಟನೆ ವಿವರ: ಶಿವಮೊಗ್ಗದಿಂದ ಮಳವಳ್ಳಿ ಕಡೆಗೆ ತಮ್ಮ ಕಾರಿನಲ್ಲಿ ತಮ್ಮಯ್ಯ ಕುಟುಂಬದವರು ಹೋಗುತ್ತಿದ್ದರು. ತಮ್ಮಯ್ಯ ಮತ್ತು ಕುಟುಂಬದವರ ಇದ್ದ ಕಾರು ಪುರಗೇಟ್ ಬಳಿ ಹೋಗುವ ವೇಳೆ ರಸ್ತೆಯಲ್ಲಿ ಹೋಗುತ್ತಿದ್ದ ಜಾನುವಾರುಗಳು ಅಡ್ಡಾದಿಡ್ಡಿಯಾಗಿ ಓಡಿದ ಕಾರಣ ಕಾರು ಚಾಲಕ ತಮ್ಮಯ್ಯ ಅವರ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹಳ್ಳಕ್ಕೆ ಮಗುಚಿ ಬಿದ್ದು ತೆಂಗಿನ ಮರಕ್ಕೆ ಡಿಕ್ಕಿ ಹೊಡೆದಿದೆ.

ಪರಿಣಾಮ ತಮ್ಮಯ್ಯ, ರಾಜಮ್ಮ, ನಂದನ್‍ಕುಮಾರ್, ಶಿಲ್ಪ, ರೂಪಾ ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಕೂಡಲೇ ಸಾರ್ವಜನಿಕರು 108 ತುರ್ತು ವಾಹನಕ್ಕೆ ಕರೆ ಮಾಡಿ ಗಾಯಾಳುಗಳನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ.

ಅದೃಷ್ಟವಶಾತ್ ಎರಡು ವರ್ಷದ ಮಗುವಿಗೆ ಯಾವುದೇ ಒಂದು ಸಣ್ಣ ಗಾಯವೂ ಆಗಿಲ್ಲ.  ಘಟನೆ ಕುರಿತು ಕಾರಿನ ಚಾಲಕ ತಮ್ಮಯ್ಯ ಅವರು ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಆನಂದೇಗೌಡ ಅವರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ