ಕಾರು-ಲಾರಿ ಡಿಕ್ಕಿ ಇಬ್ಬರ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

ಅಂಕೋಲಾ,ಅ.5- ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಮೃತಪಟ್ಟು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಕಾರವಾರದ ಬಿ.ಕೆ.ಚಂದ್ರಮೌಳಿ, ಕೋಡಿಭಾಗದ ನಿವಾಸಿ ರಾಘವೇಂದ್ರ ಬಿ.ನಾಯ್ಕ್ ಸ್ಥಳದಲ್ಲೇ ಮೃತಪಟ್ಟ ದುರ್ದೈವಿಗಳು.

ಬೆಂಗಳೂರಿನಿಂದ ಚಂದ್ರಮೌಳಿ ತನ್ನ ಮಗ ಕಾರ್ತಿಕ್ ಮತ್ತು ಸೊಸೆ ಕೀರ್ತಿ ಜೊತೆಯಲ್ಲಿ ಕಾರವಾರಕ್ಕೆ ಇಂದು ಮುಂಜಾನೆ 6.30ರಲ್ಲಿ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿ 63ರ ಹೆಬ್ಬುಳಿ ಬಳಿ ಲಾರಿ ಮತ್ತು ಕಾರ್ ನಡುವೆ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಮಾವ ಚಂದ್ರಮೌಳಿ ಮತ್ತು ಚಾಲಕ ರಾಘವೇಂದ್ರ ಸ್ಥಳದಲ್ಲೇ ಮೃತಪಟ್ಟಿದ್ದು, ಮಗ, ಸೊಸೆ ಗಂಭೀರವಾಗಿ ಗಾಯಗೊಂಡಿದ್ದು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.  ಈ ಸಂಬಂಧ ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಕೃಷ್ಣನಂದ ನಾಯಕ, ಪಿಎಸ್‍ಐ ಎ.ವೈ.ಕಾಂಬಳೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Facebook Comments