5800 ಹಸುಗಳು, 42 ಸಿಬ್ಬಂದಿ ಇದ್ದ ನೌಕೆ ಮುಳುಗಡೆ..!

ಈ ಸುದ್ದಿಯನ್ನು ಶೇರ್ ಮಾಡಿ

ಟೋಕಿಯೋ, ಸೆ.3- ಉದಯರವಿ ನಾಡು ಜಪಾನ್‍ನ ದಕ್ಷಿಣ ಭಾಗದ ಸಮುದ್ರ ಪ್ರದೇಶದಲ್ಲಿ 5800 ಹಸುಗಳು, 42 ಸಿಬ್ಬಂದಿ ಇದ್ದ ಜಾನುವಾರು ಸಾಗಣೆ ನೌಕೆ ಮುಳುಗಡೆಯಾಗಿದೆ. ಜಪಾನ್ ನೌಕಾಪಡೆಯ ಕಣ್ಗಾವಲು ವಿಮಾನ ಜಲಸಮಾಧಿಯಾಗಿರುವ ನೌಕೆಗಾಗಿ ತೀವ್ರ ಶೋಧ ನಡೆಸುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬನನ್ನು ರಕ್ಷಿಸಲಾಗಿದೆ.

12 ಸಾವಿರ ಟನ್ ತೂಕದ ಗಲ್ಫ್ ಲೈವ್ ಸ್ಟಾಕ್-1 ಹೆಸರಿನ ಈ ನೌಕೆ ಚೀನಾ ಮಾರ್ಗವಾಗಿ ಜಪಾನ್‍ನ ದಕ್ಷಿಣ ದ್ವೀಪದ ಮೂಲಕ ತೆರಳುತ್ತಿದ್ದ ಸಂದರ್ಭದಲ್ಲಿ ಭಾರೀ ಬಿರುಗಾಳಿಗೆ ಸಿಲುಕಿ ಮುಳುಗಡೆಯಾಯಿತು ಎಂದು ಜಪಾನ್ ಕರಾವಳಿ ರಕ್ಷಣಾ ಪಡೆಯ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಮುದ್ರದಲ್ಲಿ ಮುಳುಗಡೆಯಾಗಿರುವ ಈ ನೌಕೆಯಲ್ಲಿದ್ದ ಜಾನುವಾರುಗಳು ಮತ್ತು ಸಿಬ್ಬಂದಿಯ ಶೋಧ ಮತ್ತು ರಕ್ಷಣೆಗಾಗಿ ಕಾರ್ಯಾಚರಣೆ ಮುಂದುವರಿದಿದೆ.

Facebook Comments