16 ಕಾರುಗಳು ಬೆಂಕಿಗಾಹುತಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜ.16- ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಮೈದಾನದಲ್ಲಿ ನಿಲ್ಲಿಸಿದ್ದ 16 ಕಾರುಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ದೆಹಲಿಯ ವಿವೇಕ್ ವಿಹಾರ್ ಪೊಲೀಸ್ ಠಾಣೆ ಬಳಿ ನಡೆದಿದೆ.  ಇಲ್ಲಿನ ಶುಂಠಿ ಹೋಟೆಲ್ ಹಿಂಭಾಗದಲ್ಲಿ ವಿವೇಕ್ ವಿಹಾರ್ ಪೊಲೀಸ್ ಠಾಣೆ ಎದುರು ಇರುವ ಮೈದಾನದಲ್ಲಿ ಹಳೆಯ ಕಾರುಗಳನ್ನು ಮಾರಾಟ-ಖರೀದಿ ಉದ್ದೇಶಕ್ಕಾಗಿ ನಿಲ್ಲಿಸಲಾಗಿತ್ತು.

ಈ ವೇಳೆ ಆಕ್ಮಸಿಕ ಬೆಂಕಿ ಕಾಣಿಸಿಕೊಂಡು 16 ಕಾರುಗಳು ಹಾನಿಗೀಡಾಗಿವೆ. ಸದ್ಯ ಮೈದಾನದಲ್ಲಿ ಯಾರೂ ಇರದಿದ್ದ ಕಾರಣ ಪ್ರಾಣಹಾನಿ ಸಂಭವಿಸಿಲ್ಲ. 1.15ರ ನಸುಕಿನಲ್ಲಿ ಸುದ್ದಿ ತಿಳಿಯುತ್ತಿದ್ದಂತೆ ಮೂರು ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು. ಬೆಂಕಿ ಹೊತ್ತಿಕೊಳ್ಳಲು ಕಾರಣ ತಿಳಿದಿಲ್ಲಬಂದಿಲ್ಲ. ಇನ್ನೂ ತನಿಖೆ ಮಾಡಬೇಕಾಗಿದೆ ಎಂದು ದೆಹಲಿ ಅಗ್ನಿಶಾಮಕ ಅಧಿಕಾರಿ ತಿಳಿಸಿದ್ದಾರೆ.

Facebook Comments