ಜ್ಞಾಪಕ ಶಕ್ತಿ ಮತ್ತು ವೀರ್ಯ ಹೆಚ್ಚಳಕ್ಕೆ ಗೋಡಂಬಿ ಬೆಸ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

ಗೋಡಂಬಿಯನ್ನು ಹುರಿದು ತಿನ್ನಲು ಬಲು ರುಚಿ. ಇದನ್ನು ಬೆಲ್ಲದೊಂದಿಗೆ ತಿಂದರೂ ಸರಿಯೇ ಅಥವಾ ಉಪ್ಪು-ಖಾರ ಸವರಿ ಸೇವಿಸಿದರೂ ಸರಿಯೇ. ನಾಲಿಗೆಗೆ ರುಚಿ ನೀಡುವ ಜೊತೆಗೆ ದೇಹದ ಆರೋಗ್ಯವನ್ನು ವೃದ್ಧಿಸುತ್ತದೆ.  ಇದರಿಂದ ದೇಹ ತೂಕ ಹೆಚ್ಚುತ್ತದೆ, ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ, ವೀರ್ಯ ಹೆಚ್ಚಾಗುತ್ತದೆ, ಮತ್ತು ವೀರ್ಯ ಸ್ಖಲನ ತಡೆಯುತ್ತದೆ.  ಗೋಡಂಬಿಯನ್ನು ಹೆಚ್ಚಾಗಿ ತಿನ್ನುವುದರಿಂದ ಅಜೀರ್ಣವಾಗುತ್ತದೆ.

godambi

ಮಧುಮೇಹ, ರಕ್ತದೊತ್ತಡ, ಯಕೃತ್ ದೋಷ, ಹೊಣೆ ಹುಣ್ಣು-ಈ ವ್ಯಾಧಿಯಿಂದ ನರಳುವವರು ಸ್ಥೂಲ ಶರೀರದವರು ಗೋಡಂಬಿಯನ್ನು ಮಿತವಾಗಿ ಬಳಸಬೇಕು.  ಗೋಡಂಬಿಯಿಂದ ಸ್ವಾದಿಷ್ಟ ಮತ್ತು ಆರೋಗ್ಯಕರ ಖಾದ್ಯವನ್ನು ತಯಾರಿಸಬಹುದು. ಹಲ್ವ, ಪಾಯಸ, ಕೀರು, ಐಸ್‍ಕ್ರೀಮ್, ಚಾಕೊಲೆಟ್, ಬರ್ಫಿ ಇತ್ಯಾದಿ ರುಚಿಕರ ತಿನಿಸುಗಳ ರುಚಿಯನ್ನು ಇದು ಹೆಚ್ಚಿಸುತ್ತದೆ.

godambi-2

ಇದರಲ್ಲಿ ಪ್ರೊಟೀನ್‌, ಕ್ಯಾಲ್ಶಿಯಂ ಹೆಚ್ಚಾಗಿರುತ್ತದೆ. ಇದರಿಂದ ಮಸಲ್ಸ್‌‌ ಸದೃಢವಾಗುತ್ತದೆ. ಗೋಡಂಬಿಯನ್ನು ನಿಯಮಿತವಾಗಿ ಸೇವಿಸುತ್ತ ಬರುವ ಮೂಲಕ ಕೂದಲ ಬಣ್ಣ ನೆರೆಯುವುದನ್ನು ಆದಷ್ಟೂ ಮುಂದೆ ಹಾಕಲು ಸಾಧ್ಯ. ಅಷ್ಟೇ ಅಲ್ಲ, ನಿಯಮಿತವಾಗಿ ಸೇವಿಸುತ್ತಾ ಬಂದರೆ ಅಕಾಲಿಕವಾಗಿ ನೆರೆದಿದ್ದ ಕೂದಲು ಮತ್ತೆ ತನ್ನ ಸ್ವಾಭಾವಿಕ ಬಣ್ಣವನ್ನು ಪಡೆದುಕೊಳ್ಳುತ್ತದೆ.

godambi-1

godambi-3

 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin