ಮೇ.10ರಿಂದ ಬಿಎಂಟಿಸಿ ಬಸ್‍ಗಳಲ್ಲಿ ಮಾಸಿಕ ಪಾಸ್‍ ಆಧಾರಿತ ನಗದು ರಹಿತ ಪ್ರಯಾಣ ವ್ಯವಸ್ಥೆ ಜಾರಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮೇ 8- ಬಿಎಂಟಿಸಿ ಬಸ್‍ಗಳಲ್ಲಿ ಮಾಸಿಕ ಪಾಸ್‍ಗಳ ಆಧಾರಿತ ನಗದು ರಹಿತ ಪ್ರಯಾಣ ವ್ಯವಸ್ಥೆ ಮೇ 10ರಿಂದ ಜಾರಿಗೆ ಬರಲಿದೆ. ಕೋವಿಡ್-19 ಸಾಂಕ್ರಾಮಿಕ ಸೋಂಕು ಹರಡುವಿಕೆ ತಡೆಯಲು ನಿರ್ವಾಹಕರಿಂದ ಟಿಕೆಟ್ ವಿತರಣೆ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದ್ದು, ಮಾಸಿಕ ಪಾಸ್‍ಗಳ ಆಧಾರದಲ್ಲಿ ಬಸ್‍ಗಳಲ್ಲಿ ಪ್ರಯಾಣಿಸಬಹುದಾಗಿದೆ.

ಮೇ 10ರಿಂದ ಬಿಎಂಟಿಸಿ ಬಸ್‍ಗಳು ಸಂಚರಿಸಲಿದ್ದು, ಪ್ರಯಾಣಿಸಲು ಅನುಮತಿಸಲಾದ ಪಾಸ್ ಪಡೆದವರು ಬಸ್‍ಗಳಲ್ಲಿ ಸಂಚರಿಸಬಹುದಾಗಿದೆ. ಪ್ರಯಾಣ ಸಂದರ್ಭದಲ್ಲಿ ನಿರ್ವಾಹಕರು ಯಾವುದೇ ಟಿಕೆಟ್‍ಗಳನ್ನು ವಿತರಿಸುವಂತಿಲ್ಲ. ಸಿಬ್ಬಂದಿಗಳು ಹಾಗೂ ಪ್ರಯಾಣಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್‍ನ್ನು ಕಡ್ಡಾಯವಾಗಿ ಧರಿಸಿರಬೇಕು.

ನಿರ್ವಾಹಕರು ಪ್ರಯಾಣಿಕರ ಮಾಸಿಕ ಪಾಸ್‍ಗಳನ್ನು ಹಾಗೂ ಪ್ರಯಾಣಿಕರು ಕಾರ್ಯ ನಿರ್ವಹಿಸುವ ಇಲಾಖೆಯ ಗುರುತಿನ ಚೀಟಿಯನ್ನು ಪರಿಶೀಲಿಸಿ ಬಸ್‍ಗೆ ಹತ್ತಿಸಿಕೊಳ್ಳಬೇಕು.

ಬಸ್‍ನಲ್ಲಿ ಅನುಮತಿಸಿದ ಸಾಮಥ್ರ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಹತ್ತಿಸಬಾರದು. ಯಾವುದೇ ಮಾರ್ಗ, ನಿಲುಗಡೆ ಸ್ಥಳಗಳಲ್ಲಿ ಹೆಚ್ಚಿನ ಪ್ರಯಾಣಿಕರ ಸಂಖ್ಯೆ ಕಂಡುಬಂದಲ್ಲಿ ಕೂಡಲೇ ವಿಭಾಗೀಯ ಸಂಚಾರ ಅಧಿಕಾರಿ ಹಾಗೂ ಘಟಕ ವ್ಯವಸ್ಥಾಪಕರಿಗೆ ಮಾಹಿತಿ ನೀಡಬೇಕು.

ಸಂಚಾರ ದಟ್ಟಣೆಯನ್ನು ಗಮನಿಸಿ ಘಟಕ ವ್ಯವಸ್ಥಾಪಕರು ಹೆಚ್ಚುವರಿ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಪ್ರಸ್ತುತ ವೈದ್ಯಕೀಯ ತುರ್ತು ಸೇವೆಯಡಿ ಕಾರ್ಯ ಕಾರ್ಯಾಚರಣೆಯಾಗುತ್ತಿರುವ ವಾಹನಗಳಲ್ಲಿ ಪ್ರಯಾಣಿಕರಿಗೂ ಅವಕಾಶ ಕಲ್ಪಿಸಲಾಗುವುದು.

Facebook Comments

Sri Raghav

Admin