ಪ್ರೀತಿಗೆ ಜಾತಿ ಅಡ್ಡಿ, ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ಯುವಕ..!

ಈ ಸುದ್ದಿಯನ್ನು ಶೇರ್ ಮಾಡಿ


ತುಮಕೂರು, ಜು.3- ಪ್ರೀತಿಸಿದ ಯುವತಿಯನ್ನು ಮದುವೆಯಾಗಲು ಜಾತಿ ಅಡ್ಡ ಬಂದಿದ್ದರಿಂದ ಮನನೊಂದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕ್ಯಾತಸಂದ್ರ ಪೂಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತುರುವೇಕೆರೆ ನಗರದ ಕ್ಯಾತಸಂದ್ರ ನಿವಾಸಿ ರಾಘವೇಂದ್ರ (26) ಆತ್ಮಹತ್ಯೆ ಮಾಡಿಕೊಂಡ ಯುವಕ. ತುರುವೇಕೆರೆಯಲ್ಲಿ ವಾಸವಿರುವ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಯುವತಿ ಹಾಗೂ ಆಚಾರ್ ಸಮುದಾಯಕ್ಕೆ ಸೇರಿದ ರಾಘವೇಂದ್ರ ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಯುವತಿಯ ಮನೆಗೆ ಹೋಗಿ ರಾಘವೇಂದ್ರ ನಿಮ್ಮ ಮಗಳನ್ನು ಮದುವೆಯಾಗುವುದಾಗಿ ಅವರ ತಂದೆ ಬಳಿ ಕೇಳಿದ್ದಾನೆ. ಈತನ ಸಮುದಾಯ ಬೇರೆಯಾಗಿದ್ದರಿಂದ ಮದುವೆಗೆ ಒಪ್ಪಿಗೆ ನೀಡಿಲ್ಲ.

Love-Story--01

ಪ್ರೀತಿಸಿದ ಯುವತಿ ಸಿಗದಿದ್ದಕ್ಕೆ ನೊಂದ ರಾಘವೇಂದ್ರ ಫೇಸ್‍ಬುಕ್‍ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸೂಚನೆ ಕೊಟ್ಟು, ಎಲ್ಲರೂ ಜಾತಿ ಜಾತಿ ಎಂದು ಏಕೆ ಸಾಯುತ್ತೀರಾ, ಮನುಷ್ಯತ್ವದಿಂದ ಎಲ್ಲರನ್ನೂ ಕಾಣಿ. ಸತ್ತ ಮೇಲೆ ಜಾತಿ ಹೊತ್ತುಕೊಂಡು ಹೋಗ್ತೀರಾ, ನಾನಿನ್ನು ನಿನ್ನ ಮಗಳ ತಂಟೆಗೆ ಬರಲ್ಲ. ಅವಳು ಚೆನ್ನಾಗಿರಲಿ ಎಂದು ವಿಡಿಯೋ ಮಾಡಿ ನಂತರ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸುದ್ದಿ ತಿಳಿದ ಕ್ಯಾತಸಂದ್ರ ಠಾಣೆ ಪೂಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin