ಜಾತಿ ಆಧಾರಿತ ಮೀಸಲಾತಿಯಿಂದ ದೇಶದ ಹಿತಾಸಕ್ತಿಗೆ ಧಕ್ಕೆ : ಡಿವಿಎಸ್

ಈ ಸುದ್ದಿಯನ್ನು ಶೇರ್ ಮಾಡಿ

ದಾಸರಹಳ್ಳಿ ,ಫೆ.15- ಜಾತಿಗಳ ಆಧಾರದಲ್ಲಿ ನಡೆಯುವ ಪ್ರಚೋದನಾತ್ಮಕ ಮೀಸಲಾತಿ ಹೋರಾಟಗಳಿಂದ ರಾಜ್ಯಹಾಗೂ ದೇಶದ ಹಿತಾಸಕ್ತಿಗೆ ಧಕ್ಕೆಯಾಗಲಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರು ಕಳವಳ ವ್ಯಕ್ತಪಡಿಸಿದರು. ಶೆಟ್ಟಿಹಳ್ಳಿಯಲ್ಲಿ ಮಾಜಿ ಶಾಸಕ ಎಸ್.ಮುನಿರಾಜು ನೇತೃತ್ವದಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಕ್ಷೇತ್ರದ ರಾಮ ಭಕ್ತರಿಂದ ಸಂಗ್ರಹಿಸಿದ್ದ ದೇಣಿಗೆಯನ್ನು ಪೇಜಾವರ ಶ್ರೀಗಳಿಗೆ ಹಸ್ತಾಂತರಿಸುವ ಸಮಾರಂಭದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ದೇಶದಲ್ಲಿ ರಾಜಕಾರಣಕ್ಕೋಸ್ಕರ ಜಾತಿ ಹೆಸರಿನಲ್ಲಿ ಮೀಸಲಾತಿ ಹೋರಾಟಗಳು ನಡೆಯಬಾರದು. ಆರ್ಥಿಕವಾಗಿ ಹಿಂದುಳಿದಿರುವ ಅರ್ಹರಿಗೆ ಮೀಸಲಾತಿ ಕೊಡುವ ಹೊಸ ವ್ಯವಸ್ಥೆ ಜಾರಿಯಾಗಬೇಕು. ಪ್ರಧಾನಿ ನರೇಂದ್ರ ಮೋದಿಯವರು ಈ ನಿಟ್ಟಿನಲ್ಲಿ ಆರ್ಥಿಕವಾಗಿ ಹಿಂದುಳಿದಿರುವವರಿಗೆ ಶೇ.10 ರಷ್ಟು ಮೀಸಲಾತಿ ನೀಡಿರುವುದು ದಿಟ್ಟ ಹೆಜ್ಜೆಯಾಗಿದ್ದು, ಮುಂಬರುವ ದಿನಗಳಲ್ಲಿ ಇದು ಮೀಸಲಾತಿಗೆ ಮಾದರಿಯಾಗಬಹುದು ಎಂದರು.

ಶ್ರೀ ರಾಮಜನ್ಮಭೂಮಿ ತೀರ್ಥ ಟ್ರಸ್ಟ್‍ನ ವಿಶ್ವಸ್ತರು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಮಹಾಸ್ವಾಮೀಜಿ, ಶ್ರೀ ರಾಮ ಮಂದಿರ ನಿರ್ಮಾಣದಿಂದ ರಾಮರಾಜ್ಯದ ಕನಸು ನನಸಾಗಲಿದೆ. ಸಂಸ್ಕøತಿಯ ಪುನರುತ್ಥಾನವಾಗಲಿದೆ ಎಂದು ಆಶೀರ್ವಚನ ನೀಡಿದರು.

ರಾಮಮಂದಿರ ನಿರ್ಮಾಣಕ್ಕೆ ನಿಧಿ ಸಮರ್ಪಣೆ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ಸಮಾಜದ ಕಟ್ಟಕಡೆಯ ವ್ಯಕ್ತಿಯಿಂದ ಹಿಡಿದು ಭಾರತೀಯರೆಲ್ಲರೂ ಶಕ್ತಿಯನುಸಾರ ದೇಣಿಗೆ ಸಮರ್ಪಿಸಿ ಆರಾಧ್ಯದೈವ, ಆದರ್ಶ ಪುರುಷ ಶ್ರೀರಾಮಚಂದ್ರನ ಕೃಪಾಶಿರ್ವಾದಕ್ಕೆ ಭಾಜನರಾಗಿದ್ದಾರೆ ಎಂದರು. ಮಾಜಿ ಶಾಸಕ ಎಸ್.ಮುನಿರಾಜು ಮಾತನಾಡಿ, ಶ್ರೀರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹಿಸುವ ಐತಿಹಾಸಿಕ ಅಭಿಯಾನದಲ್ಲಿ ಪಾಲುದಾರನಾಗಿರುವುದು ಪೂರ್ವಜನ್ಮದ ಪುಣ್ಯ ಎಂದು ಸಂತಸ ವ್ಯಕ್ತಪಡಿಸಿದರು.

ಸ್ನೇಹಿತರು, ಹಿತೈಷಿಗಳು, ಸಂಬಂಧಿಕರು ಹಾಗೂ ಕುಟುಂಬ ವರ್ಗ ಸದ್ಯ 1.61 ಕೋಟಿ ರೂ. ದೇಣಿಗೆ ಸಮರ್ಪಿಸಿದ್ದಾರೆ. ಸಂಗ್ರಹ ಕಾರ್ಯ ಮುಂದುವರೆದಿದ್ದು, 2 ಕೋಟಿ ತಲುಪಲಿದೆ. ಕ್ಷೇತ್ರದಲ್ಲಿ ಒಟ್ಟಾರೆ 4 ಕೋಟಿ ರೂ. ಜನತೆ ಉದಾರವಾಗಿ ದೇಣಿಗೆ ನೀಡಿ ಶ್ರೀ ರಾಮ ಮಂದಿರ ನಿರ್ಮಾಣದ ಪವಿತ್ರ ಕಾರ್ಯಕ್ಕೆ ಕೈ ಜೋಡಿಸಿರುವುದು ಹೆಮ್ಮೆಯ ವಿಚಾರ ಎಂದರು.

ಈ ವೇಳೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ ನಾ.ತಿಪ್ಪೇಸ್ವಾಮಿ, ಕ್ಷೇತ್ರ ಬಿಜೆಪಿ ಮಂಡಲ ಅಧ್ಯಕ್ಷ ಎನ್.ಲೋಕೇಶ್, ಡಾಟಿ ಸದಾನಂದಗೌಡ, ಸುಜÁತ ಮುನಿರಾಜು, ಶೆಟ್ಟಿಹಳ್ಳಿ ಸುರೇಶ್ ಮುಂತಾದವರಿದ್ದರು.

Facebook Comments