ಸುಶಾಂತ್ ಸಾವಿನ ಪ್ರಕರಣದಲ್ಲಿ ನಟಿ ರಿಯಾ ಬಂಧನ ಸಾಧ್ಯತೆ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ಆ.21- ದಿನಕ್ಕೊಂದು ಹೊಸ ತಿರುವು ಪಡೆಯುತ್ತಾ ಭಾರೀ ಕುತೂಹಲ ಕೆರಳಿಸಿರುವ ಬಾಲುವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ತೀವ್ರಗೊಳಿಸಿದೆ.

ಈ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುವುದೇ ಸೂಕ್ತ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ನಂತರ ಇಂದಿನಿಂದ ಸಿಬಿಐ ತಂಡ ಕಾರ್ಯಾಚರಣೆಯನ್ನು ಚುರುಕುಗೊಳಿಸಿದೆ.

ಇದೇ ವೇಳೆ ಸುಶಾಂತ್ ಸಾವಿಗೆ ಪ್ರಚೋದನೆ ನೀಡಿದರೆನ್ನಲಾದ ಆರೋಪಕ್ಕೆ ಗುರಿಯಾಗಿರುವ ನಟಿ ಮತ್ತು ಬಿಟೌನ್ ನಟನ ಪ್ರೇಯಸಿ ರಿಯಾ ಚಕ್ರವರ್ತಿ ಬಂಧನಕ್ಕೊಳಗಾವುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸುಶಾಂತ್ ಸಿಂಗ್ ಅವರಿಂದ 15 ಕೋಟಿ ರೂ.ಗಳಿಗೂ ಹೆಚ್ಚು ಹಣ ಪಡೆದು ಅಕ್ರಮ ವರ್ಗಾವಣೆ ಮಾಡಿರುವ ಆರೋಪಕ್ಕೂ ಗುರಿಯಾಗಿರುವ ರಿಯಾ ಈಗಾಗಲೇ ಜಾರಿ ನಿರ್ದೇಶನಾಲಯ ಸೇರಿದಂತೆ ಕೆಲವು ತನಿಖಾ ಸಂಸ್ಥೆಗಳಿಂದ ವಿಚಾರಣೆಗೆ ಒಳಪಟ್ಟಿದ್ದಾರೆ.

ಅತಿ ಶೀಘ್ರದಲ್ಲೇ ಸಿಬಿಐ ರಿಯಾ ಅವರನ್ನು ವಿಚಾರಣೆಗೆ ಒಳಪಡಿಸಲಿದ್ದು, ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಲಭಿಸದಿದ್ದಲ್ಲಿ ಸುಶಾಂತ್ ಪ್ರೇಯಸಿಯನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎಂದು ಸಿಬಿಐ ಉನ್ನತಾಕಾರಿಯೊಬ್ಬರು ತಿಳಿಸಿದ್ದಾರೆ.

ನಿನ್ನೆ ರಾತ್ರಿ ದೆಹಲಿಯಿಂದ ಮುಂಬೈಗೆ ಬಂದು ಸಿಬಿಐನ ವಿಶೇಷ ತಂಡಗಳು ಇಂದು ಬೆಳಗ್ಗೆ ತನಿಖೆ ತೀವ್ರಗೊಳಿಸಿದೆ. ಒಂದು ತಂಡ ಬಾಂದ್ರಾ ಪೆÇಲೀಸ್ ಠಾಣೆಗೆ ತೆರಳಿ ಸುಶಾಂತ್ ಸಾವು ಪ್ರಕರಣ ಮತ್ತು ಅದಕ್ಕೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ತನ್ನ ಸುಪರ್ದಿಗೆ ಪಡೆದಿದೆ.

ಮತ್ತೊಂದು ತಂಡ ಮುಂಬೈ ನಲ್ಲಿರುವ ಸಾಂತಾಕ್ರೋಜ್‍ನಲ್ಲಿರುವ ಡಿಆರ್‍ಡಿಒ ಅತಿಥಿ ಗೃಹದಲ್ಲಿ ಸುಶಾಂತ್ ಅಡಿಕೆ ಭಟ್ಟರು ಮತ್ತು ಅವರ ಪ್ಲಾಟ್‍ನಲ್ಲಿದ್ದ ಇತರ ನೌಕರರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

ಸಿಬಿಐ ತಂಡದಲ್ಲಿ ಉನ್ನತಾಕಾರಿಗಳು, ವಿ ವಿಜ್ಞಾನ ಪರಿಣಿತರು ಹಾಗೂ ದಾಖಲೆ ಪತ್ರಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುವ ಸಿಬ್ಬಂದಿ ಇದ್ದಾರೆ.

Facebook Comments

Sri Raghav

Admin