332 ಕೋಟಿ ರೂ. ಅವ್ಯವಹಾರಗಳ ಸಂಬಂಧ 3 ರಾಜ್ಯಗಳಲ್ಲಿ ಸಿಬಿಐ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ನ.22- ಮಣಿಪುರ ಅಭಿವೃದ್ದಿ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ 332 ಕೋಟಿ ರೂ. ಅಕ್ರಮ ಅವ್ಯವಹಾರಗಳ ಸಂಬಂಧ ಕೇಂದ್ರೀಯ ತನಿಖಾ ದಳ(ಸಿಬಿಐ) ಮೂರು ರಾಜ್ಯಗಳ 9 ಸ್ಥಳಗಳ ಮೇಲೆ ದಾಳಿ ನಡೆಸಿ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದೆ.

ಮಣಿಪುರ ಮಾಜಿ ಮುಖ್ಯಮಂತ್ರಿ ಓಕ್ರಮ್ ಇಬೋಬಿ ಸಿಂಗ್ ಮತ್ತು ಸರ್ಕಾರಿ ಅಧಿಕಾರಿಗಳ ಮನೆಗಳು ಮತ್ತು ಕಚೇರಿಗಳ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ವಿಚಾರಣೆಗೊಳಪಡಿಸಿದ್ದಾರೆ.

ಮಣಿಪುರ ರಾಜಧಾನಿ ಇಂಫಾಲ, ಮಿಜೋರಾಮ್ ರಾಜಧಾನಿ ಐಜವಾಲ್, ಹರಿಯಾಣದ ಗುರುಗ್ರಾಮ್‍ನ 9 ಸ್ಥಳಗಳಲ್ಲಿ ಸಿಬಿಐ ಅಧಿಕಾರಿಗಳು ಇಂದು ದಾಳಿ ನಡೆಸಿ ಕೋಟ್ಯಂತರ ರೂ.ಗಳ ಅಕ್ರಮಗಳನ್ನು ಪತ್ತೆ ಮಾಡಿದರು.

ಮಣಿಪುರ ಅಭಿವೃದ್ದಿಗಾಗಿ ಬಿಡುಗಡೆಯಾಗಿದ್ದ 518 ಕೋಟಿ ರೂ.ಗಳಲ್ಲಿ 322 ಕೋಟಿ ರೂ.ಗಳನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಈ ದಾಳಿಗಳನ್ನು ನಡೆಸಲಾಗಿದೆ.

Facebook Comments