ಸಿಸಿಬಿ ನೈಟ್ ಆಪರೇಷನ್ : ಕಾರ್ಪೊರೇಟರ್ ಪತಿ ಸೇರಿದಂತೆ 60 ಮಂದಿ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.14- ನಗರದ ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿಯಲ್ಲಿ ಬೆಂಕಿ ಹಚ್ಚಿ ದಾಂಧಲೆ ನಡೆಸಿ ಪರಾರಿಯಾಗಿರುವ ಗಲಭೆಕೋರರ ಬಂಧನದ ಕಾರ್ಯಾಚರಣೆ ಮುಂದುವರಿದಿದ್ದು, ಕಾರ್ಪೊರೇಟರ್ ಪತಿ ಸೇರಿದಂತೆ 60 ಮಂದಿಯನ್ನು ರಾತ್ರಿ ಬಂಸಲಾಗಿದೆ.

ಕಾರ್ಪೊರೇಟರ್ ಪತಿ ಖಲೀಂ ಪಾಷ ಅವರನ್ನು ಸಹ ಬಂಸಲಾಗಿದೆ. ಈಗಾಗಲೇ ಕೆಲವು ಸಂಘಟನೆಗಳ ಮುಖಂಡರನ್ನು ಸಹ ಪೊಲೀಸರು ಬಂಸಿದ್ದು, ಒಟ್ಟಾರೆ ಬಂತರ ಸಂಖ್ಯೆ 206ಕ್ಕೆ ಏರಿದೆ.

ಗಲಭೆಕೋರರನ್ನು ಬಂಸಲು ರಚಿಸಲಾಗಿರುವ ಮೂರು ವಿಶೇಷ ತಂಡಗಳು ಹಾಗೂ ಸಿಸಿಬಿ ಪೊಲೀಸರು ಆರೋಪಿಗಳಿಗಾಗಿ ಶೋಧ ಮಾಡುತ್ತಿದ್ದಾರೆ. ಬಂಧನದ ಕಾರ್ಯ ಮುಂದುವರಿದಿದೆ.

# 22 ಎಫ್‍ಐಆರ್:
ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಬೆಂಕಿ ಹಚ್ಚಿ ನಡೆಸಿದ ದಾಂಧಲೆ, ಘಟನೆಗಳ ಬಗ್ಗೆ ಇದುವರೆಗೂ 22 ಎಫ್‍ಐಆರ್ ದಾಖಲಾಗಿವೆ. ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ 11 ಪ್ರಕರಣ ಹಾಗೂ ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ 11 ಪ್ರಕರಣಗಳು ದಾಖಲಾಗಿವೆ.

# ಬಂದೋಬಸ್ತ್:
ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ವ್ಯಾಪ್ತಿಗಳಲ್ಲಿ ಸ್ಥಳೀಯ ಪೊಲೀಸರ ಜತೆಗೆ ಮೂರು ಕಂಪೆನಿ ಅರೆಸೇನಾ ಪಡೆ, 13 ಕೆಎಸ್‍ಆರ್‍ಪಿ ತುಕಡಿ ಮತ್ತು 2 ಸಿಎಆರ್ ತುಕಡಿಗಳನ್ನು ಬಂದೋಬಸ್ತ್‍ಗಾಗಿ ನಿಯೋಜಿಸಲಾಗಿದೆ.

Facebook Comments

Sri Raghav

Admin