ಬ್ರೇಕಿಂಗ್ : ದಿಗಂತ್-ಐಂದ್ರಿತಾ ಜೋಡಿಗೆ ಸಿಸಿಬಿ ನೋಟಿಸ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.15- ಸ್ಯಾಂಡಲ್‍ವುಡ್ ಗ್ಲಾಮರೆಸ್ ಕಪಲ್ ಎಂದು ಗುರುತಿಸಿಕೊಂಡಿರುವ ನಟ ದಿಗಂತ್ ಹಾಗೂ ನಟಿ ಐಂದ್ರಿತಾ ರೈ ವಿಚಾರಣೆಗೆ ಸಿಸಿಬಿ ನೋಟಿಸ್ ನೀಡಿದೆ.

ಡ್ರಗ್ಸ್ ಜಾಲದ ಬಗ್ಗೆ ದಿನೇ ದಿನೇ ಹೊಸ ವಿಷಯಗಳನ್ನು ಕೆದಕಿ ತೆಗೆಯುತ್ತಿರುವ ಸಿಸಿಬಿ ಪೊಲೀಸರು ಈಗಾಗಲೇ ಬಂತ ರವಿಶಂಕರ್, ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ವಿಚಾರಣೆ ವೇಳೆ ದೊರೆತ ಮಾಹಿತಿ ಆಧರಿಸಿ ಮತ್ತಷ್ಟು ನಟ-ನಟಿಯರಿಗೆ ನೋಟಿಸ್ ಜಾರಿ ಮಾಡುತ್ತಿದ್ದಾರೆ.

ದಿಗಂತ್ ಹಾಗೂ ಐಂದ್ರಿತಾ ರೈ ದಂಪತಿಗೆ ನಾಳೆ ಬೆಳಗ್ಗೆ 11 ಗಂಟೆಗೆ ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಡ್ರಗ್ಸ್ ಜಾಲದ ಪ್ರಮುಖ ಪೆಡ್ಲರ್ ಶೇಕ್ ಫಾಜಿಲ್ ಜತೆ ಐಂದ್ರಿತಾ ರೈ ಮತ್ತು ದಿಗಂತ್ ಪಾರ್ಟಿ ಮಾಡಿರುವ ಫೋಟೋಗಳು ಹರಿದಾಡುತ್ತಿವೆ.

ಜತೆಗೆ ವಿಚಾರಣೆ ವೇಳೆ ಡ್ರಗ್ ಪೆಡ್ಲರ್‍ಗಳೆಂದು ಗುರುತಿಸಲಾದ ವ್ಯಕ್ತಿಗಳೊಂದಿಗೆ ದಿಂಗತ್ ಮತ್ತು ಐಂದ್ರಿತಾ ರೈ ಸಂಪರ್ಕದಲ್ಲಿರುವ ಮಾಹಿತಿಯೂ ಬೆಳಕಿಗೆ ಬಂದಿದೆ. ಹೀಗಾಗಿ ಸಿಸಿಬಿ ನೋಟಿಸ್ ಭಾರೀ ಕುತೂಹಲ ಕೆರಳಿಸಿದೆ.

ಈವರೆಗಿನ ಪ್ರಕರಣಗಳಲ್ಲಿ ಮೊದಲು ಸಿಸಿಬಿ ನೋಟಿಸ್ ನೀಡುತ್ತದೆ. ಅನಂತರ ಮನೆ ಶೋಧ ನಡೆಸುತ್ತದೆ. ಸಾಕ್ಷ ಸಿಕ್ಕರೆ ಬಂಸಲಾಗುತ್ತದೆ.  ಐಂದ್ರಿತಾ ಮತ್ತು ದಿಗಂತ್ ಜೋಡಿಯ ಭವಿಷ್ಯ ಏನಾಗಲಿದೆ ಎಂಬ ಕುತೂಹಲಕ್ಕೆ ನಾಳೆ ಉತ್ತರ ಸಿಗಲಿದೆ.

Facebook Comments

Sri Raghav

Admin