ಇಂದ್ರಜಿತ್ ಲಂಕೇಶ್‍ಗೆ ಸಿಸಿಬಿ ನೋಟಿಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.29- ಸ್ಯಾಂಡಲ್‍ವುಡ್‍ನೊಂದಿಗೆ ಡ್ರಗ್ಸ್ ಮಾಫಿಯಾ ಸಂಪರ್ಕವಿಟ್ಟುಕೊಂಡಿರುವ ಬಗ್ಗೆ ಮಾಧ್ಯಮಗಳಲ್ಲಿ ಹೇಳಿಕೆ ನೀಡಿರುವ ಇಂದ್ರಜಿತ್ ಲಂಕೇಶ್‍ಗೆ ಸಿಸಿಬಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ಡ್ರಗ್ಸ್ ದಂಧೆ ಕುರಿತಂತೆ ನಿಮ್ಮ ಬಳಿ ಇರುವ ಮಾಹಿತಿಯನ್ನು ನೀಡುವ ಮೂಲಕ ಪೊಲೀಸರ ತನಿಖೆಗೆ ಅಗತ್ಯ ಸಹಕಾರ ನೀಡುವಂತೆ ಸಿಸಿಬಿ ಮಾದಕ ದ್ರವ್ಯ ನಿಯಂತ್ರಣ ದಳದ ಪೊಲೀಸರು ಮನವಿ ಮಾಡಿದ್ದಾರೆ.

ಡಾರ್ಕ್‍ನೆಟ್ ಮೂಲಕ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಕೆಲವರನ್ನು ಈಗಾಗಲೇ ಬಂಸಿ ವಿಚಾರಣೆ ನಡೆಸಲಾಗುತ್ತಿದೆ.

ಡ್ರಗ್ಸ್ ಜಾಲ ಕುರಿತಂತೆ ಸಾರ್ವಜನಿಕರು ಟೋಲ್ ಫ್ರೀ ನಂಬರ್ 1098 ಮೂಲಕ ತಮ್ಮ ಬಳಿ ಇರುವ ಮಾಹಿತಿಯನ್ನು ಪೊಲೀಸರೊಂದಿಗೆ ಹಂಚಿಕೊಳ್ಳುವಂತೆಯೂ ಸಿಸಿಬಿ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.

ಒಟ್ಟಾರೆ ನಗರದಲ್ಲಿರುವ ಡ್ರಗ್ಸ್ ಮಾಫಿಯಾಗೆ ಕಡಿವಾಣ ಹಾಕಲು ಪೊಲೀಸರು ಸಜ್ಜಾಗಿದ್ದಾರೆ.

Facebook Comments

Sri Raghav

Admin