ಟಿವಿಗಳಿಗೆ ಸೋನಿ ಕಂಪೆನಿಯ ಸ್ಟಿಕ್ಕರ್ ಅಂಟಿಸಿ ವಂಚಿಸುತ್ತಿದ್ದ ಆರೋಪಿ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.7- ಸ್ಥಳೀಯವಾಗಿ ಸಿದ್ಧಪಡಿಸಿದ್ದ ಟಿವಿಗಳಿಗೆ ಪ್ರತಿಷ್ಠಿತ ಸೋನಿ ಕಂಪೆನಿಯ ಸ್ಟಿಕ್ಕರ್ ಅಂಟಿಸಿ ಸಾರ್ವಜನಿಕರಿಗೆ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ವಂಚಕನೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿ 15 ಟಿವಿ ಹಾಗೂ 75 ಸಾವಿರ ಹಣವನ್ನು ವಶಪಡಿಸಿಕೊಂಡಿದ್ದಾರೆ.

ಚಾಮರಾಜಪೇಟೆಯ ಸುರೇಶ್ (45) ಬಂಧಿತ ವಂಚಕ. ಆರೋಪಿಯಿಂದ 32 ಇಂಚಿನ 4 ಸ್ಮಾರ್ಟ್ ಟಿವಿ, 2 ಸಾಮಾನ್ಯ ಟಿವಿ, 42 ಇಂಚಿನ 5 ಸ್ಮಾರ್ಟ್ ಟಿವಿ, 42 ಇಂಚಿನ 1 ಹಾಗೂ 55 ಇಂಚಿನ 3 ಸ್ಮಾರ್ಟ್ ಟಿವಿಗಳನ್ನು ವಶಪಡಿಸಿಕೊಂಡಿದ್ದಾರೆ.

Facebook Comments