ತಲೆಮರೆಸಿಕೊಂಡಿರುವ ವಿದೇಶಿ ಡ್ರಗ್ಸ್ ಪೆಡ್ಲರ್‌ಗಳಿಗಾಗಿ ಸಿಸಿಬಿ ಹುಡುಕಾಟ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.28- ಡ್ರಗ್ಸ್ ಜಾಲದ ಆಳ-ಅಗಲ ತಿಳಿದುಕೊಳ್ಳಲು ಬೆಂಗಳೂರಿನ ಸಿಸಿಬಿ ಪೊಲೀಸರು ಸತತ ಪ್ರಯತ್ನ ಮಾಡುತ್ತಿದ್ದಾರೆ.  ಡ್ರಗ್ಸ್ ಜಾಲಕ್ಕೆ ಸಂಬಂಸಿದಂತೆ ಇಬ್ಬರು ನಟಿಯರು ಸೇರಿದಂತೆ ಪಾರ್ಟಿ ಆಯೋಜಕರು, ಡ್ರಗ್ಸ್ ಪೆಡ್ಲರ್‍ಗಳು ಒಳಗೊಂಡಂತೆ 14 ಮಂದಿಯನ್ನು ಬಂಸಿ ವಿಚಾರಣೆಗೊಳಪಡಿಸಿದಾಗ ಕೆಲವು ಮಾಹಿತಿಗಳು ಲಭ್ಯವಾಗಿವೆ.

ಇದಲ್ಲದೆ ಬಂತ ಆರೋಪಿಗಳ ನಿಟಕವರ್ತಿಗಳು ಮತ್ತು ಅವರ ಸಂಪರ್ಕದಲ್ಲಿರುವ ಪ್ರಮುಖ ವ್ಯಕ್ತಿಗಳನ್ನು ಸಿಸಿಬಿ ಪೆÇಲೀಸರು ವಿಚಾರಣೆಗೆ ಕರೆಸಿ ಮಹತ್ವದ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ಚಿತ್ರನಟಿ ರಾಗಿಣಿ ಅವರ ಆಪ್ತ ಎಂದು ಹೇಳಲಾದ ಕೋಟಿ ರೂ. ಶ್ವಾನದ ಒಡೆಯ ಸತೀಶ್ ಮತ್ತು ಫ್ಯಾಷನ್ ಡಿಸೈನರ್ ರಮೇಶ್ ದೆಂಬಲ್ ಹಾಗೂ ಪಾರ್ಟಿಗಳು ನಡೆಯುತ್ತಿದ್ದ ಪಂಚಾತಾರ ಹೋಟೆಲ್ ಮಾಲೀಕರು, ಪಬ್‍ಗಳು, ರೆಸಾರ್ಟ್‍ಗಳ ಮಾಲೀಕರನ್ನು ಸಹ ವಿಚಾರಣೆಗೊಳಪಡಿಸಿ ಮಾಹಿತಿ ಪಡೆದುಕೊಂಡಿದ್ದು, ಇನ್ನೂ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

ಅಲ್ಲದೆ ಹಲವು ಮೂಲಗಳಿಂದಲೂ ಸಹ ಡ್ರಗ್ಸ್ ಜಾಲದ ಬಗ್ಗೆ ಸಿಸಿಬಿ ಪೆÇಲೀಸರು ಮತ್ತಷ್ಟು ಮಾಹಿತಿಗಳನ್ನು ಪಡೆಯುತ್ತಿದ್ದಾರೆ.
ಈ ನಡುವೆ ಡ್ರಗ್ಸ್ ಜಾಲದಲ್ಲಿ ತೊಡಗಿಕೊಂಡಿರುವ ದೇಶ ಮತ್ತು ವಿದೇಶಗಳ ಪ್ರಮುಖ ಡ್ರಗ್ಸ್ ಪೆಡ್ಲರ್‍ಗಳಿಗಾಗಿ ಸಿಸಿಬಿ ಪೆÇಲೀಸರು ವ್ಯಾಪಕ ಶೋಧ ನಡೆಸುತ್ತಿದ್ದಾರೆ. ದೇಶದ ಬೇರೆ ಬೇರೆ ರಾಜ್ಯಗಳಲ್ಲದೆ ,ವಿದೇಶಿಗರು ಹೆಚ್ಚಾಗಿ ನೆಲೆಸಿರುವ ಬೆಂಗಳೂರು ನಗರದ ಹಲವು ಪ್ರದೇಶಗಳಲ್ಲಿ ಡ್ರಗ್ಸ್ ಪೆಡ್ಲರ್‍ಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

ಡ್ರಗ್ಸ್ ಪೆಡ್ಲರ್‍ಗಳು ಸಿಕ್ಕಿದರೆ ಡ್ರಗ್ಸ್ ಎಲ್ಲಿಂದ ಬರುತ್ತಿತ್ತು, ಎಲ್ಲಿಗೆ ಹೋಗುತ್ತಿತ್ತು ಎಂಬುದು ತಿಳಿಯಲಿದೆ. ಬೆಂಗಳೂರು ನಗರದ ಸಿಸಿಬಿ ಪೊಲೀಸರು ಅಲ್ಲದೆ ಮಂಗಳೂರಿನ ಸಿಸಿಬಿ ಪೊಲೀಸರು ಮತ್ತು ನಾರ್ಕೋಟಿಕ್ ದಳದ ಪೊಲೀಸರು ಸಹ ಡ್ರಗ್ಸ್ ಜಾಲದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಮಂಗಳೂರಿನ ಸಿಸಿಬಿ ಪೊಲೀಸರ ತನಿಖೆ ತೀವ್ರವಾಗಿ ನಡೆಯುತ್ತಿದ್ದು, ಇದುವರೆಗೂ ಐದು ಮಂದಿಯನ್ನು ಬಂಸಿದ್ದಾರೆ. ಖ್ಯಾತ ನಿರೂಪಕಿ ಅನುಶ್ರೀ ಅವರನ್ನು ವಿಚಾರಣೆಗೆ ಕರೆಸಿಕೊಂಡು ಅವರಿಂದ ಹಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ಒಟ್ಟಾರೆ ಬೆಂಗಳೂರು ಮತ್ತು ಮಂಗಳೂರು ಸಿಸಿಬಿ ಪೊಲೀಸರು ಡ್ರಗ್ಸ್ ಜಾಲದ ಬೇರನ್ನು ಕಿತ್ತು ಹಾಕಲು ವ್ಯಾಪಕ ಶೋಧ ನಡೆಸುತ್ತಿದ್ದಾರೆ.

Facebook Comments

Sri Raghav

Admin