ಸಿಸಿಬಿ ಪೊಲೀಸರಿಗೆ ಸಿಗದ ಸಂಪತ್‍ರಾಜ್ ಸುಳಿವು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.9-ತಲೆ ಮರೆಸಿಕೊಂಡಿರುವ ಮಾಜಿ ಮೇಯರ್ ಸಂಪತ್‍ರಾಜ್ ಎಲ್ಲಿದ್ದಾರೆ ಎಂಬ ಸುಳಿವು ಈತನಕ ಸಿಸಿಬಿ ಪೊಲೀಸರಿಗೆ ಸಿಕ್ಕಿಲ್ಲ. ಅವರ ಬಂಧನಕ್ಕಾಗಿ ರಚಿಸಿರುವ ವಿಶೇಷ ತಂಡಗಳು, ನಿರಂತರವಾಗಿ ವ್ಯಾಪಕ ಶೋಧ ನಡೆಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಈ ಮೊದಲು ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಸಂಪತ್‍ರಾಜ್ ತಲೆ ಮರೆಸಿಕೊಂಡಿದ್ದಾರೆ ಎಂಬ ಮಾಹಿತಿ ಸಿಸಿಬಿ ಪೊಲೀಸರಿಗೆ ಬಂದಿತ್ತು.

ಆ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರ ಒಂದು ತಂಡ ಮೈಸೂರಿಗೆ ತೆರಳಿ ಖಾಸಗಿ ಹೋಟೆಲ್‍ಗೆ ಹೋಗಿ ಪರಿಶೀಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಪೊಲೀಸರು ಬರುವ ಮುನ್ನವೇ ಸಂಪತ್‍ರಾಜ್ ಅಲ್ಲಿಂದ ಮುಂಬೈಗೆ ಪರಾರಿಯಾಗಿದ್ದಾರೆ ಎಂಬುದು ನಂತರ ಗೊತ್ತಾಗಿದೆ.

ಆ ನಂತರ ಇನ್ನೊಂದು ತಂಡ ಮುಂಬೈಗೆ ತೆರಳಿ ಅಲ್ಲಿ ಶೋಧಿಸಿದರೂ ಕೂಡ ಸಂಪತ್‍ರಾಜ್ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಮಾಜಿ ಮೇಯರ್ ಸಂಪತ್‍ರಾಜ್ ಎಲ್ಲಿ ಅಡಗಿಕೊಂಡಿದ್ದಾರೆ ಎಂಬುದು ಬಹಳಷ್ಟು ನಿಗೂಢವಾಗಿದೆ.

Facebook Comments