ನಕಲಿ ಸ್ಯಾನಿಟೈಸರ್ -ಹ್ಯಾಂಡ್‍ರಬ್ ದಾಸ್ತಾನು ಗೋಡೌನ್ ಮೇಲೆ ಸಿಸಿಬಿ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.20- ಸಾರ್ವಜನಿಕರು ಕೊರೋನಾ ವೈರಸ್ ಭೀತಿಯಲ್ಲಿರುವ ನಡುವೆಯೇ ನಕಲಿ ಹ್ಯಾಂಡ್ ಸ್ಯಾನಿಟೈಸರ್ ಹಾಗೂ ಹ್ಯಾಂಡ್ ರಬ್‍ಗಳನ್ನು ಸಿದ್ದಪಡಿಸುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆಹಚ್ಚಿ 56 ಲಕ್ಷ ಬೆಲೆಯ ಮೂಲವನ್ನು ವಶಪಡಿಸಿಕೊಂಡಿದ್ದಾರೆ.

ನ್ಯೂ ತರಗುಪೇಟೆಯ ಜ್ಯೋತಿ ಕೆಮಿಕಲ್ಸ್ ಮತ್ತು ಸ್ವಾತಿ ಅಂಡ್ ಕೋ ಗೋಡೌನ್‍ಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಮಾರಾಟಕ್ಕೆ ಸಿದ್ದಪಡಿಸಿದ್ದಂತಹ 100, 120, 200 ಎಂಎಲ್ ಹಾಗೂ 500 ಎಂಎಲ್‍ನ ಒಟ್ಟು 8500 ಬಾಟಲ್‍ಗಳು, 4500 ಖಾಲಿ ಪ್ಲಾಸ್ಟಿಕ್ ಬಾಟಲ್‍ಗಳು ಸೇರಿ ಒಟ್ಟು 35 ಬಾಟಲ್‍ಗಳು, 8 ಕ್ಯಾನ್‍ಗಳು(ಒಟ್ಟು 280 ಲೀಟರ್), 4500 ಸ್ಟಿಕ್ಕರ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿತರು 50 ಲೀಟರ್‍ನ ಐಸ ಪೆಪ್ರೊಲ್ ಆಲ್ಕೋಹಾಲ್‍ಗೆ 15-20 ಎಂಎಲ್(ಒಂದೂವರೆ ಸ್ಪೂನ್‍ನಷ್ಟು) ಬ್ರಿಲಿಯಂಟ್ ಬ್ಲೂ ಕಲರ್‍ನ್ನು ಹಾಗೂ 10-15 ಎಂಎಲ್(ಒಂದು ಸ್ಪೂನ್‍ನಷ್ಟು) ಪಫ್ರ್ಯೂಮ್ ಮಿಶ್ರಣ ಮಾಡಿ 50 ಲೀಟರ್ ಹ್ಯಾಂಡ್ ಸ್ಯಾನಿಟೈಸರ್/ಹ್ಯಾಂಡ್‍ರಬ್ ಆಗಿ ತಯಾರಿಸಿ ಅವುಗಳನ್ನು ಕೆಲಸದವರಿಂದ 100 ಎಂಎಲ್(ಎಂಆರ್‍ಪಿ ದರ ರೂ. 620)ಗಳಾಗಿ ಪ್ಲಾಸ್ಟಿಕ್ ಬಾಟಲ್‍ಗಳಲ್ಲಿ ತುಂಬಿಸಿ ತಮ್ಮ ತಮ್ಮ ಕಂಪನಿಯ ಸ್ಟಿಕ್ಕರ್‍ಗಳನ್ನು ಹಾಕಿ ಮಾರಾಟ ಮಾಡಲು ರಟ್ಟಿನ ಬ್ಯಾಕ್ಸ್‍ಗಳಲ್ಲಿ ಮಾರುಕಟ್ಟೆಗೆ ಪ್ಯಾಕಿಂಗ್ ಕಳುಹಿಸುತ್ತಿದ್ದರು.

ಐಸೋಪ್ರೊಪಿಲ್ ಆಲ್ಕೋಹಾಲ್ ಒಂದು ಲೀಟರ್ ಬೆಲೆ 80 ರೂ.ಗಳು ಆಗಿರುತ್ತದೆ. ಮಾರುಕಟ್ಟೆಯಲ್ಲಿ 10 ಪಟ್ಟು ದುಬಾರಿ ಲಾಭಕ್ಕೆ ಮಾರಾಟ ಮಾಡಿ ಸಾರ್ವಜನಿಕರಿಗೆ ವಂಚನೆ ಮಾಡುತ್ತಿದ್ದದು ಕಂಡುಬಂದಿದೆ. ಆರೋಪಿಗಲಾದ ರಾಜು(43) ಮತ್ತು ಚಂದನ್(64) ವಿರುದ್ಧ ಚಾಮರಾಜಪೇಟೆ, ವಿವಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments