ಬಿಗ್ ಬ್ರೇಕಿಂಗ್ : ನಟಿ ಸಂಜನಾಗೂ ಸಿಸಿಬಿ ಶಾಕ್, ಬೆಳ್ಳಂಬೆಳಿಗ್ಗೆ ಮನೆ ಮೇಲೆ ದಾಳಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು. ಸೆ. 08 : ಡ್ರಗ್ಸ್ ಜಾಲವನ್ನು ಜಾಲಾಡುತ್ತಿರುವ ಸಿಸಿಬಿ ಪೊಲೀಸರು ನಟಿ ರಾಗಿಣಿಯನ್ನು ಲಾಕ್ ಮಾಡಿದ ಬೆನ್ನಲ್ಲೇ ಇಂದು ಬೆಳ್ಳಂಬೆಳಿಗ್ಗೆ ಮತ್ತೊಬ್ಬ ನಟಿ ಸಂಜನಾಗೂ ಶಾಕ್ ನೀಡಿದ್ದಾರೆ.

ಬೆಳಿಗ್ಗೆ 6.30 ರ ಸುಮಾರಿಗೆ 3 ವಾಹನಗಳಲ್ಲಿ ಎಂಟ್ರಿ ಕೊಟ್ಟ 6 ಸಿಸಿಬಿ ಅಧಿಕಾರಿಗಳು ಸಂಜನಾ ಗಲ್ರಾಣಿ ಮನೆಯ ಮೂಲೆಮೂಲೆಯನ್ನು ಜಾಲಾಡುತ್ತಿದ್ದಾರೆ.

ಇಂದಿರಾ ನಗರದಲ್ಲಿರುವ ನಟಿ ಸಂಜನಾ ಅವರ ನಿವಾಸದ ಮೇಲೆ  ವಾರೆಂಟ್ ಸಹಿತ ಸಿಸಿಬಿ ಇನ್ಸ್​ಪೆಕ್ಟರ್ ಅಂಜುಮಾಲ, ಪೂರ್ಣಿಮಾ ನೇತೃತ್ವದ ತಂಡದಿಂದ ದಾಳಿ ನಡೆದಿದೆ.

ಡ್ರಗ್ಸ್ ದಂಧೆಯಲ್ಲಿ ಸಂಜನಾ ಹೆಸರು ಕೇಳಿಬರುತ್ತಿದ್ದು, ಈಗಾಗಲೇ ಆಪ್ತ ರಾಹುಲ್ ನನ್ನ ​ ಸಿಸಿಬಿ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ.

ಸಂಜನಾ ಆಪ್ತ ರಾಹುಲ್ ಹೇಳಿಕೆ‌ ಆಧಾರದ ಮೇಲೆ ದಾಳಿ ಮಾಡಲಾಗಿದೆ ಎನ್ನಲಾಗುತ್ತಿದ್ದು, ಅಧಿಕಾರಿಗಳು ಮನೆಯಲ್ಲಿ ಪರಿಶೀಲನೆಯಲ್ಲಿ ತೊಡಗಿದ್ದಾರೆ.

Facebook Comments

Sri Raghav

Admin