“ನನ್ನ ವಿರುದ್ಧ ಕ್ರಮ ಕೈಗೊಂಡಿದ್ದರೆ ಅಧಿಕೃತವಾಗಿ ಮಾಹಿತಿ ನೀಡಿ”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.16- ಬಾರ್ ಕೌನ್ಸಿಲ್‍ಗೆ ಪತ್ರ ಬರೆದಿರುವ ಸಿಡಿ ಯುವತಿ ಪರ ವಕೀಲರಲ್ಲಿ ಒಬ್ಬರಾದ ಮಂಜುನಾಥ್ ಅವರು ತಮ್ಮ ವಿರುದ್ಧ ಕ್ರಮ ಕೈಗೊಂಡಿದ್ದರೆ ಅಧಿಕೃತವಾಗಿ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.ಬೆಂಗಳೂರು ಬಾರ್ ಕೌನ್ಸಿಲ್‍ನಿಂದ ನನ್ನನ್ನು ಅಮಾನತು ಮಾಡಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಕುರಿತು ಅಕೃತವಾಗಿ ನನಗೆ ಯಾವುದೆ ಮಾಹಿತಿ ಬಂದಿಲ್ಲ. ನನ್ನ ವಿರುದ್ಧ ಕ್ರಮ ಕೈಗೊಂಡಿದ್ದರೆ ಮಾಹಿತಿ ನೀಡಬೇಕು ಎಂದು ಕೇಳಿಕೊಂಡಿದ್ದಾರೆ.

ಈ ಸಂಜೆಯೊಂದಿಗೆ ಮಾತನಾಡಿರುವ ಮಂಜುನಾಥ್ ಅವರು, ನಾನು ನೋಂದಣಿಯಾದಾಗ ಹಳೆಯ ಮನೆ ವಿಳಾಸವನ್ನು ಬಾರ್ ಕೌನ್ಸಿಲ್‍ಗೆ ನೀಡಿದ್ದೆ. ಬಹುಶಃ ಅಲ್ಲಿಗೆ ಮಾಹಿತಿ ಹೋಗಿರಬಹುದು. ನನಗೆ ಈವರೆಗೂ ಅಕೃತವಾದ ಯಾವುದೇ ಮಾಹಿತಿ ಬಂದಿಲ್ಲ.

ಹಾಗಾಗಿ ಬಾರ್ ಕೌನ್ಸಿಲ್‍ಗೆ ಪತ್ರ ಬರೆದು ಹೊಸ ಕಚೇರಿಯ ವಿಳಾಸ ನೀಡಿದ್ದು, ಇನ್ನು ಮುಂದೆ ಹೊಸ ವಿಳಾಸಕ್ಕೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದೇನೆ ಎಂದಿದ್ದಾರೆ.

ನಾವು ಸ್ಟಾಂಪ್ ಹಗರಣದ ಬಗ್ಗೆ ಸಾಕ್ಷ್ಯಗಳನ್ನು ಇಟ್ಟುಕೊಂಡೆ ಮಾತನಾಡಿದ್ದೇವೆ. ನನ್ನ ವಿರುದ್ಧ ಕ್ರಮ ಕೈಗೊಳ್ಳುವ ಮೊದಲು ಶಿಸ್ತು ಸಮಿತಿ ರಚನೆ ಮಾಡಬೇಕಿತ್ತು, ಶೋಕಾಸ್ ನೋಟಿಸ್ ನೀಡಬೇಕಿತ್ತು. ಅದ್ಯಾವುದನ್ನು ಮಾಡಿಲ್ಲ ಎಂದು ಹೇಳಿದ್ದಾರೆ.

Facebook Comments

Sri Raghav

Admin