4ನೇ ವಿಡಿಯೋದಲ್ಲಿ ಸಿಡಿ ಲೇಡಿ ಹೇಳಿದ ಈ ಮಾತುಗಳನ್ನೊಮ್ಮೆ ಗಮನಿಸಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.27- ಕಳೆದ 24 ದಿನಗಳಿಂದ ನಿರಂತರ ಕಿರುಕುಳ ನೀಡಲಾಗುತ್ತಿದೆ. ಮಾಜಿ ಸಚಿವರು ನನ್ನನ್ನು ಮತ್ತು ನನ್ನ ಕುಟುಂಬವನ್ನು ಕೊಲ್ಲಲ್ಲು ಹಿಂದೇಟು ಹಾಕುವುದಿಲ್ಲ. ಇದನ್ನೆಲ್ಲಾ ನೋಡಿದರೆ ರಮೇಶ್ ಜಾರಕಿಹೊಳಿ ಅವರ ಹೆಸರು ಬರೆದಿಟ್ಟು ಸಾಯಬೇಕು ಎನಿಸುತ್ತಿದೆ ಎಂದು ಸಿಡಿಯಲ್ಲಿರುವ ಯುವತಿ ಮತ್ತೊಂದು ವಿಡಿಯೋದಲ್ಲಿ ಆತ್ಮಹತ್ಯೆ ಮಾತನಾಡಿದ್ದಾರೆ.

ನಾಲ್ಕನೆ ವಿಡಿಯೋ ಬಿಡುಗಡೆ ಮಾಡಿರುವ ಯುವತಿ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಹೆಸರು ಪ್ರಸ್ತಾಪವಾಗಿರುವುದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ಇದೇ ಮೊದಲ ಬಾರಿಗೆ ಸಿಡಿ ಬಹಿರಂಗದ ಸಂಚಿನಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾದ ನರೇಶ್ ಕುರಿತು ಪ್ರಸ್ತಾಪ ಮಾಡಿದ್ದಾರೆ. ಬದುಕಬೇಕೋ ಸಾಯಬೇಕೋ ಗೋತ್ತಾಗುತ್ತಿಲ್ಲ ಎಂದು ಮಾತು ಆರಂಭಿಸಿರುವ ಯುವತಿ, ಮಾಧ್ಯಮಗಳು ಯಾವುದೇ ಮಾಹಿತಿಯನ್ನು ಸತ್ಯಾಸತ್ಯತೆ ಪರಿಶೀಲಿಸದೆ ಪ್ರಕಟಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಮಾರ್ಚ್ 2ರಂದು ನನ್ನ ವಿಡಿಯೋ ಬಹಿರಂಗವಾಯಿತು. ಎಲ್ಲಿ ಹೋಗಬೇಕು, ಏನು ಮಾಡಬೇಕು ಎಂಬದು ತಿಳಿಯದೇ ಭಯ ಭಯದಲ್ಲಿದ್ದೆ. ಮಾಧ್ಯಮದಲ್ಲಿ ಇರುವವರ ಪೈಕಿ ನನಗೆ ನರೇಶ್ ಅಣ್ಣ ಮಾತ್ರ ಪರಿಚಯ ಇದ್ದರು. ಅವರಿಗೆ ಕಾಲ್ ಮಾಡಿದ್ದೆ, ನೀವು ನನಗೆ ನ್ಯಾಯ ಕೊಡಿಸುತ್ತೇನೆ ಎಂದು ಹೇಳಿದ್ರಿ. ವಿಡಿಯೋ ವೈರಲ್ ಆಗುತ್ತಿದೆ ನಾನು ಏನು ಮಾಡಬೇಕು ಎಂದು ಆತಂಕ ವ್ಯಕ್ತ ಪಡಿಸಿದೆ.

ಈ ವಿಷಯದಲ್ಲಿ ನಾನು ತುಂಬಾ ಸಣ್ಣವನು. ದೊಡ್ಡವರನ್ನು ಭೇಟಿ ಮಾಡಿ ಚರ್ಚಿಸೋಣ, ನನಗಿರುವ ಸಂಪರ್ಕ ಬಳಸಿ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿಸಲು ಪ್ರಯತ್ನಿಸುತ್ತೇನೆ. ನೀನು ಎಲ್ಲಿ ಇದ್ದೀಯಾ ಹೇಳು ನಾನು ಅಲ್ಲೆ ಬಂದು ನಿನ್ನ ಪಿಕ್ ಅಪ್ ಮಾಡುತ್ತೇನೆ ಎಂದು ನರೇಶಣ್ಣ ಹೇಳಿದರು.

ವಿಡೀಯೋ ನೋಡಿ ನಮ್ಮ ಮನೆಯಲ್ಲಿ ಭಯ ಬಿದ್ದಿದ್ದರು. ನನಗೆ ಪದೇ ಪದೇ ಕರೆ ಮಾಡುತ್ತಿದ್ದರು. ನನ್ನ ಅಮ್ಮ ಅಳುವುದನ್ನು ನೋಡಿ ಆಕೆ ಜೀವಕ್ಕೆ ಏನಾದರೂ ತೊಂದರೆ ಮಾಡಿಕೊಳ್ಳಬಹುದು ಎಂಬ ಭಯ ಆಗಿತ್ತು. ಅವರಿಗೆ ಹೆದರುವಂತದ್ದು ಏನು ನಡೆದಿಲ್ಲ ತಲೆ ಕೆಡಿಸಿಕೊಳ್ಳಬೇಡಿ ಎಂದು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದೆ. ಅವರಿಗೆ ಧೈರ್ಯ ಬರಲಿ ಎಂದು ಮಾತನಾಡಿದ್ದೆ. ಡಿ.ಕೆ.ಶಿವಕುಮಾರ್ ಅವರ ಮನೆಗೆ ಹೋಗಿದ್ದೆವು. ಆದರೆ ಅವರು ಸಿಗಲಿಲ್ಲ. ಆ ವೇಳೆಗೆ ಮತ್ತಷ್ಟು ಬೆಳವಣಿಗೆಗಳಾದವು, ಕೂಡಲೇ ನಾವು ಅಲ್ಲಿಂದ ಹೊರಟು ಬಂದು ಬಿಟ್ಟೆವು ಎಂದಿದ್ದಾರೆ.

ಅಂದು ನಾನು ಕುಟುಂಬದ ಸದಸ್ಯರ ಜೊತೆ ಮಾತನಾಡಿದ ಆಡಿಯೋ ನಿನ್ನೆ ಬಹಿರಂಗ ಆಗಿದೆ. ಅದು ಇವರಿಗೆ ಹೇಗೆ ಸಿಕ್ಕಿದೆ ಎಂದು ಗೊತ್ತಾಗುತ್ತಿಲ್ಲ. ನನಗೆ ನಮ್ಮ ಅಪ್ಪ ಅಮ್ಮ ಎಲ್ಲಿದ್ದಾರೆ ಎಂದು ಗೊತ್ತಿಲ್ಲ, ಅವರ ಸುರಕ್ಷತೆಯ ಬಗ್ಗೆ ಆತಂಕ ಇದೆ. ನನಗೆ ರಕ್ಷಣೆ ನೀಡುವುದಾಗಿ ಎಸ್‍ಐಟಿ ಪದೇ ಪದೇ ಹೇಳುತ್ತಿದೆ. ನಮ್ಮ ಅಪ್ಪ ಅಮ್ಮ ಇರುವ ಜಾಗಕ್ಕೆ ಹೋಗಿ ರಕ್ಷಣೆ ನೀಡುವುದು ಬೇಡ. ಅವರನ್ನು ಬೆಂಗಳೂರಿಗೆ ಕರೆ ತಂದು ರಕ್ಷಣೆ ನೀಡಿ. ನಾನು ಎಸ್‍ಐಟಿ ಮುಂದೆ ಹೇಳಿಕೆ ನೀಡುವ ವೇಳೆ ನನ್ನ ಅಪ್ಪ, ಅಮ್ಮ, ಅಜ್ಜಿ, ಇಬ್ಬರು ತಮ್ಮಂದಿರು ನನ್ನ ಕಣ್ಣೆದುರೇ ಇರಬೇಕು ಎಂದು ಯುವತಿ ಹೇಳಿದ್ದಾರೆ.

ನನ್ನ ಮಾನ ಮರ್ಯಾದೆ ಹೋಗಿದೆ. 24 ದಿನಗಳಿಂದ ಕಷ್ಟ ಪಟ್ಟು ಬದುಕುತ್ತಿದ್ದೇನೆ. ಒಂದೇ ದಿನದಲ್ಲಿ ಸರ್ಕಾರ ಬೀಳಿಸುತ್ತೇನೆ. ಎಷ್ಟೇ ದುಡ್ಡು ಖರ್ಚಾದರೂ ಎಲ್ಲರನ್ನು ಜೈಲಿಗೆ ಹಾಕಿಸುತ್ತೇನೆ ಎಂದು ರಮೇಶ್ ಜಾರಕಿಹೊಳಿ ಹೇಳುತ್ತಿದ್ದಾರ. ಅದರ ಅರ್ಥವನ್ನು ಜನರೇ ತಿಳಿದುಕೊಳ್ಳಬೇಕು. ಅವರು ನನ್ನ ಮನೆಯವರ ತಲೆ ತೆಗೆಯಲು, ನನ್ನನ್ನು ಕೊಲ್ಲಲು ಹಿಂದೇಟು ಹಾಕುವುದಿಲ್ಲ. ಇದನ್ನೆಲ್ಲಾ ನೋಡಿದರೆ ನನಗೆ ರಮೇಶ್ ಜಾರಕಿಹೊಳಿ ಅವರ ಹೆಸರನ್ನು ಬರೆದಿಟ್ಟು ಸಾಯಬೇಕು ಎನಿಸುತ್ತಿದೆ ಎಂದು ಹೇಳಿದ್ದಾರೆ.

Facebook Comments