ಗಡಿಯಲ್ಲಿ ಪಾಕ್ ಸೇನೆ ಪುಂಡಾಟಕ್ಕೆ ಭಾರತೀಯ ಯೋಧರ ತಿರುಗೇಟು

ಈ ಸುದ್ದಿಯನ್ನು ಶೇರ್ ಮಾಡಿ

ಜಮ್ಮು, ಸೆ.17-ಅತ್ತ ಪೂರ್ವ ಲಡಾಖ್‍ನಲ್ಲಿ ಚೀನಾದೊಂದಿಗೆಗಡಿ ಸಂಘರ್ಷ ಎದುರಿಸುತ್ತಿರುವ ಭಾರತ ಇತ್ತ ಇಂಡೋ-ಪಾಕಿಸ್ತಾನ ಗಡಿಯಲ್ಲಿ ಪಾಕ್ ಉಪಟಳನ್ನೂ ಪ್ರತಿರೋಧಿಸುತ್ತಿದೆ.  ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಗಡಿ ನಿಯಂತ್ರಣರೇಖೆ (ಎಲ್‍ಒಸಿ)ಯ ಮುಂಚೂಣಿ ಸೇನಾ ನೆಲೆಗಳ ಮೇಲೆ ಪಾಕಿಸ್ತಾನವು ಇಂದು ಮುಂಜಾನೆ ಕದನ ವಿರಾಮ ಉಲ್ಲಂಘಿಸಿದ ಅಪ್ರಚೋದಿತ ದಾಳಿ ನಡೆಸಿದೆ.

ಪೂಂಚ್‍ಜಿಲ್ಲೆಯ ಬಾಲಕೋಟ್ ಮತ್ತು ಮೆಂಧಾರ್ ವಲಯಗಳ ಸೇನಾ ನೆಲೆಗಳನ್ನು ಗುರಿಯಾಗಿಟ್ಟುಕೊಂಡು ಪಾಕಿಸ್ತಾನ ಸೇನೆ ಇಂದು ಮುಂಜಾನೆ 6.45ರಲ್ಲಿ ಸಣ್ಣ ಶಸ್ತ್ರಾಸ್ತ್ರಗಳು ಮತ್ತು ಶೆಲ್‍ಗಳಿಂದ ದಾಳಿ ನಡೆಸಿತು. ಭಾರತೀಯ ಯೋಧರು ಪಾಕಿಸ್ತಾನ ಸೇನೆಯಕದನ ವಿರಾಮಉಲ್ಲಂಘನೆ ಮತ್ತುಅಪ್ರಚೋದಿತ ದಾಳಿಗೆ ದಿಟ್ಟ ಪ್ರತ್ಯುತ್ತರ ನೀಡಿದ್ಧಾರೆಎಂದು ಮಿಲಿಟರಿ ವಕ್ತಾರರು ತಿಳಿಸಿದ್ದಾರೆ.

ಪಾಕಿಸ್ತಾನವು ಕೇವಲ 9 ತಿಂಗಳಲ್ಲಿ (2019ರಜನವರಿ 1 ರಿಂದ ಸೆಪ್ಟೆಂಬರ್ 7ರವರೆಗೆ) ಒಟ್ಟು 3,186 ಬಾರಿಕದನ ವಿರಾಮ ಒಪ್ಪಂದದ ಉಲ್ಲಂಘನೆಯಾಗಿದ್ದು, ಇದು 17 ವರ್ಷಗಳಲ್ಲೇ ಪಾಕ್‍ನಗರಿಷ್ಠ ಕ್ಯಾತೆಯಾಗಿದೆ.

ಭಾರತದ ವಿರುದ್ಧ ಹಗೆತನದ ವಿಷ ಕಾರುತ್ತಲೇಇರುವ ಪಾಕಿಸ್ತಾನವು 778 ಕಿ.ಮೀ. ಮಾರ್ಗದಗಡಿ ನಿಯಂತ್ರಣ ರೇಖೆಯಲ್ಲಿ ಜನವರಿ 1ರಿಂದಲೂ ಯುದ್ಧ ವಿರಾಮ ಒಪ್ಪಂದಗಳನ್ನು ನಿರಂತರವಾಗಿ ಉಲ್ಲಂಘಿಸಿ ಅಪ್ರಚೋದಿತ ದಾಳಿಗಳನ್ನು ನಡೆಸುತ್ತಲೇ ಇದೆ ಎಂದು ಸಂಸತ್ತಿಗೆ ನೀಡಿರುವ ವಿವರದಲ್ಲಿ ಕೇಂದ್ರ ಸರ್ಕಾರ ಅಂಕಿ ಅಂಶ ನೀಡಿದೆ.

ಆ9ಮ್ಮು ಮತ್ತು ಕಾಶ್ಮೀರದ 198 ಕಿ.ಮೀ. ಅಂತಾರಾಷ್ಟ್ರೀಯಗಡಿಯಲ್ಲಿ ಪಾಕಿಸ್ತಾನ ಸೇನೆಯ ಪುಂಡಾಟ ಮುಂದುವರಿದಿದ್ದು, 242 ಬಾರಿಗಡಿಯಾಚೆಯಿಂದಗುಂಡಿನ ದಾಳಿ (ಕ್ರಾಸ್ ಬಾರ್ಡರ್ ಪೈರಿಂಗ್) ನಡೆಸಿದೆ.  ಪಾಕಿಸ್ತನವು 2017ರಲ್ಲಿ 971 ಬಾರಿ, 2018ರಲ್ಲಿ 1.629 ಸಲ ಹಾಗೂ 2019ರಲ್ಲಿ ಕೇವಲ ಒಂಭತ್ತು ತಿಂಗಳಲ್ಲಿ 3,186 ಬಾರಿಯುದ್ದ ವಿರಾಮಗಳನ್ನು ಉಲ್ಲಂಘಿಸಿ ದುವರ್ತನೆ ಪ್ರದರ್ಶಿಸಿದೆ ಎಂದು ಸರ್ಕಾರ ತಿಳಿಸಿದೆ.

Facebook Comments