2,290 ಕೋಟಿ ರೂ.ಗಳ ಶಸ್ತ್ರಾಸ್ತ್ರ ಖರೀದಿಗೆ ಕೇಂದ್ರ ಸರ್ಕಾರ ಅಸ್ತು

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.29-ಭಾರತದ ಶಸ್ತ್ರಾಸ್ತ್ರ ಪಡೆಗಳ ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿರುವ ಕೇಂದ್ರ ಸರ್ಕಾರ ಚೀನಾ ಮತ್ತು ಪಾಕಿಸ್ತಾನ ಗಡಿ ಭಾಗದಲ್ಲಿ ರಕ್ಷಣೆಗೆ ನಿಂತಿರುವ ಸೇನೆ ಅತ್ಯಾಧುನಿಕ ಶಸ್ತ್ರಾಸ್ತ್ರ ಹೊಂದಲು 2,290 ಕೋಟಿ ರೂ.ಗಳ ಪ್ರಸ್ತಾವನೆಗೆ ಅನುಮತಿ ನೀಡಿದೆ.

ರಕ್ಷಣಾ ಸಚಿವಾಲಯದ ಅತ್ಯುನ್ನತ ನಿರ್ಧಾರ ಘಟಕವಾದ ಡಿಎಸಿ(ಡಿಫೆನ್ಸ್ ಅಕ್ವಿಷನ್ ಕೌನ್ಸಿಲ್ ಅಥವಾ ರಕ್ಷಣಾ ಖರೀದಿ ಮಂಡಳಿ) ಭೂ ಸೇನೆ, ವಾಯುಪಡೆ ಮತ್ತು ನೌಕದಳಗಳಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಮಿಲಿಟರಿ ಸಾಧನಗಳನ್ನು ಖರೀದಿಸುವ 2290 ಕೋಟಿ ರೂ.ಗಳ ಪ್ರಸ್ತಾವನೆಗೆ ಸಮ್ಮತಿ ನೀಡಿದೆ.

ಅಮೆರಿಕದಿಂದ ಅತ್ಯಾಧುನಿಕ ರೈಫಲ್‍ಗಳು ಸೇರಿದಂತೆ ಮಿಲಿಟರಿ ಸಾಧನ ಸಲಕರಣಿಗಳನ್ನು ಖರೀದಿಸಿ ಭಾರತದ ಶಸ್ತ್ರಾಸ್ತ್ರ ಪಡೆಗಳನ್ನು ಮತ್ತಷ್ಟು ಬಲವರ್ಧನೆಗೊಳಿಸುವುದು ಇದರ ಉದ್ದೇಶವಾಗಿದೆ ಎಂದು ರಕ್ಷಣಾ ಇಲಾಖೆಯ ಉನ್ನತಾಕಾರಿಯೊಬ್ಬರು ತಿಳಿಸಿದ್ದಾರೆ.

ಸಿಗ್ ಸೂಯರ್ ಅಸಾಲ್ಟ್ ರೈಫಲ್‍ಗಳ ಖರೀದಿಗಾಗಿ 780 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಅದೇ ರೀತಿ ಸ್ಮಾರ್ಟ್ ಆ್ಯಂಟಿ ಏರ್‍ಫೀಲ್ಡ್ ವೆಪನ್(ಎಸ್‍ಡಬ್ಲ್ಯೂ) ಹೊಂದಲು 970 ಕೋಟಿ ರೂ.ಗಳನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಇವುಗಳೂ ಸೇರಿದಂತೆ ಸೇನಾ ಉಪಕರಣಗಳ ಖರೀದಿಗೆ 2290 ಕೋಟಿ ರೂ.

ಇಂಡೋ-ಚೀನಾ ಮತ್ತು ಇಂಡೋ ಪಾಕ್ ಗಡಿಗಳಲ್ಲಿ ವೈರಿ ದೇಶಗಳಿಂದ ಇತ್ತೀಚಿನ ದಿನಗಳಲ್ಲಿ ಉಪಟಳ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಈ ಅನುಮೋದನೆ ಭಾರೀ ಮಹತ್ವ ಪಡೆದುಕೊಂಡಿದೆ.

2017ರ ಅಕ್ಟೋಬರ್‍ನಿಂದ ದೇಶದ ಶಸ್ತ್ರಾಸ್ತ್ರ ಪಡೆಗಳಾದ ಆರ್ಮಿ, ಏರ್ ಫೋರ್ಸ್ ಮತ್ತು ನೇವಿಗಳಿಗಾಗಿ ಅತ್ಯಾಧುನಿಕ ಯುದ್ದಾಸ್ತ್ರಗಳನ್ನು ಖರೀದಿಸುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ. 7 ಲಕ್ಷ ಅಸಲ್ಟ್ ರೈಫಲ್‍ಗಳು, 44 ಸಾವಿರ ಹಗುರ ಸ್ವಯಂಚಾಲಿತ ಬಂದೂಕುಗಳು(ಲೈಟ್ ಮಿಷಿನ್‍ಗನ್‍ಗಳು) ಹಾಗೂ 44,600 ಕಾರ್ಬೆನ್‍ಗಳನ್ನು ಹೊಂದುವುದಕ್ಕೆ ಚಾಲನೆ ಲಭಿಸಿದೆ.

Facebook Comments

Sri Raghav

Admin