ಯುವತಿಯರ ವಿವಾಹದ ಕನಿಷ್ಠ ವಯಸ್ಸಿನ ಬಗ್ಗೆ ಶೀಘ್ರದಲ್ಲೇ ನಿರ್ಧಾರ : ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಅ.16- ಯುವತಿಯರ ವಿವಾಹದ ಕನಿಷ್ಠ ವಯೋಮಾನದ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಈ ಕುರಿತು ರಚಿಸಲಾಗಿರುವ ಸಮಿತಿ ವರದಿ ನೀಡಿದ ನಂತರ ಯುವತಿಯರ ವಿವಾಹದ ಕನಿಷ್ಠ ವಯಸ್ಸಿನ ಪರಿಷ್ಕರಣೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ವಿಶ್ವಸಂಸ್ಥೆಯ ಅಂಗ ಸಂಸ್ಥೆಯಾದ ಆಹಾರ ಮತ್ತು ಕೃಷಿ ಸಂಘಟನೆ (ಎಫ್‍ಎಒ)ಯ 75ನೇ ವರ್ಷಾಚರಣೆ ಪ್ರಯುಕ್ತ ದೆಹಲಿಯಲ್ಲಿಂದು 75ರೂ.ಗಳ ವಿಶೇಷ ಸ್ಮರಣಿಕೆ ನಾಣ್ಯವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಮಹಿಳೆಯರ ಮದುವೆಗೆ ಸೂಕ್ತ ವಯೋಮಾನ ಯಾವುದು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ನಿರ್ಧಾರ ಕೈಗೊಳ್ಳುವಂತೆ ದೇಶದ ಅನೇಕ ಮಹಿಳಾ ಸಂಘಟನೆಗಳು ನನಗೆ ಪತ್ರಗಳನ್ನು ಬರೆದಿದ್ದಾರೆ. ಸಮಿತಿ ವರದಿ ನಂತರ ಅದನ್ನು ಪರಾಮರ್ಶಿಸಿ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಅವರು ಹೇಳಿದರು.

ಕೇಂದ್ರ ಸರ್ಕಾರ ಕಳೆದ 6 ವರ್ಷಗಳಿಂದ ಕೈಗೊಂಡ ಉಪಕ್ರಮಗಳ ಫಲಶೃತಿಯಿಂದಾಗಿ ಈ ವರ್ಷ ಶಿಕ್ಷಣಕ್ಕೆ ನೋಂದಣಿಯಾದ ಬಾಲಕಿಯರು ಮತ್ತು ವಿದ್ಯಾರ್ಥಿನಿಯರ ಸಂಖ್ಯೆ ಬಾಲಕರಿಗಿಂತಲೂ ಹೆಚ್ಚಾಗಿದೆ ಎಂದು ಅವರು ಹೇಳಿದರು.

ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಪ್ರಧಾನಿ ಮೋದಿ ಯುವತಿಯರ ವಿವಾಹದ ಕನಿಷ್ಠ ವಯೋಮಾನದ ಬಗ್ಗೆ ಪರಾಮರ್ಶಿಸಿ ನಿರ್ಧಾರ ಕೈಗೊಳ್ಳುವುದಾಗಿ ಘೋಷಿಸಿದ್ದರು.

Facebook Comments

Sri Raghav

Admin