ಕೆಕೆಆರ್ ಮೊದಲ ಪಂದ್ಯಕ್ಕೆ ಮಾರ್ಗನ್ ಲಭ್ಯ

ಈ ಸುದ್ದಿಯನ್ನು ಶೇರ್ ಮಾಡಿ

ದುಬೈ,ಸೆ.12- ಐಪಿಎಲ್‍ನಲ್ಲಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‍ನ ನಮ್ಮ ತಂಡದ ಆಟಗಾರರು ನಿಶ್ಚಿತವಾಗಿ ಮೊದಲ ಪಂದ್ಯದಲ್ಲಿ ಆಡಲಿದ್ದಾರೆ ಎಂದು ಕೋಲ್ಕತ್ತಾ ನೈಟ್ ರೈಡರ್ಸ್‍ನ ಸಿಇಒ ವೆಂಕಿ ಮೈಸೂರು ತಿಳಿಸಿದ್ದಾರೆ.

ಈಗಾಗಲೇ ಬ್ರಿಟನ್‍ನಲ್ಲಿ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧ ಟಿ-20 ಸರಣಿಯಲ್ಲಿ ಇಂಗ್ಲೆಂಡ್ ಜಯ ಸಾಧಿಸಿದೆ. ಇದೇ ಹುಮ್ಮಸ್ಸಿನಲ್ಲಿರುವ ಈ ಉಭಯ ತಂಡದ ಆಟಗಾರರು ಐಪಿಎಲ್‍ನಲ್ಲೂ ಲಭ್ಯವಾಗಲಿದ್ದಾರೆ ಎಂದು ಹೇಳಿದ್ದಾರೆ.

ಕೋವಿಡ್ ಹಿನ್ನೆಲೆಯಲ್ಲಿ ಇವರು ಪರೀಕ್ಷೆಗೊಳಗಾಗುವುದು ಅಥವಾ 6 ದಿನಗಳ ಕ್ವಾರಂಟೈನ್‍ಗೆ ಒಳಗಾಗುವ ಅವಶ್ಯಕತೆ ಇಲ್ಲ. ಸೆ.17ರಂದು ಎಲ್ಲರೂ ದುಬೈಗೆ ಬಂದಿಳಿಯಲಿದ್ದಾರೆ. ಆರು ದಿನಗಳ ಕ್ವಾರಂಟೈನ್ ನಿರ್ಬಂಧದ ಅವಧಿಯನ್ನು ಇನ್ನಷ್ಟು ಕಡಿಮೆ ಮಾಡಲು ಅಬುಧಾಬಿ ಅಧಿಕಾರಿಗಳೊಂದಿಗೆ ಇನ್ನೂ ಮಾತುಕತೆ ನಡೆಯುತ್ತಿದೆ ಎಂದು ವೆಂಕಿ ಹೇಳಿದ್ದಾರೆ.

ಆಟಗಾರರು ತಮ್ಮ ತಂಡದೊಳಗೆ ಇರುವವರೆಗೆ ಆರು ದಿನಗಳ ನಂತರ ತರಬೇತಿ ನೀಡಲು ಅವಕಾಶ ನೀಡುವಲ್ಲಿ ರಿಯಾಯಿತಿ ನೀಡಲಾಗಿದೆ ಎಂದು ತಿಳಿದುಬಂದಿದೆ.  ಇಂಗ್ಲೆಂಡ್ ನಾಯಕ ಇಯೊನ್ ಮೋರ್ಗಾನ್, ಟಾಮ್ ಬಾಂಟನ್ ಮತ್ತು ಆಸ್ಟ್ರೇಲಿಯಾದ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಅವರು ಕೆಕೆಆರ್‍ನಲ್ಲಿದ್ದಾರೆ.  ಸೆ.23ರಂದು ಮೊದಲ ಪಂದ್ಯ ಆಡುತ್ತಿದ್ದು, ಅಷ್ಟರ ವೇಳೆಗೆ ತಂಡ ಸಂಪೂರ್ಣ ಫಿಟ್ ಅಂಡ್ ಫೈನ್ ಆಗಲಿದೆ ಎಂದು ಅವರು ತಿಳಿಸಿದ್ದಾರೆ.

Facebook Comments