ಸಿಇಟಿಯಲ್ಲಿ ರಾಜ್ಯಕ್ಕೆ ಪ್ರಥಮಸ್ಥಾನ ಪಡೆದ ಶ್ರೇಯಸ್ ಹೇಳೋದೇನು..?

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು, ಮೇ 26- ಸಿಇಟಿ ಪ್ರಾಯೋಗಿಕ ಪರೀಕ್ಷೆಯ ಕೃಷಿ ವಿಭಾಗದಲ್ಲಿ ಸಿರಿಗಾಪುರ ಶ್ರೀ ಸಾಯಿ ಏಂಜಲ್ಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಶ್ರೇಯಸ್ ಬಿ. ಬರಗೂರ್ ರಾಜ್ಯಕ್ಕೆ ಪ್ರಥಮಸ್ಥಾನ ಪಡೆದಿದ್ದಾರೆ ಎಂದು ಸಂಸ್ಥೆಯ ಮುಖ್ಯ ಪ್ರಾಚಾರ್ಯೆ ವಿಜಯಾನಾಗೇಶ್ ತಿಳಿಸಿದ್ದಾರೆ.

ದ್ವಿತೀಯ ಪಿಯುಸಿ ಪಿಸಿಎಂಬಿ ಪರೀಕ್ಷೆಯಲ್ಲಿ ಶೇ94 ಅಂಕಗಳನ್ನು ಗಳಿಸಿದ್ದ ವಿದ್ಯಾರ್ಥಿ ಶ್ರೇಯಸ್ ಇಂದು ವೆಬ್‍ಸೈಟ್‍ನಲ್ಲಿ ಪ್ರಕಟವಾದ ಸಿಇಟಿ ಫಲಿತಾಂಶದ ಪ್ರಾಯೋಗಿಕ ಪರೀಕ್ಷೆಯ ಕೃಷಿ ವಿಭಾಗದಲ್ಲಿ (ಬಿಎಸ್‍ಸಿ ಅಗ್ರಿಕಲ್ಚರ್ ಪ್ರಾಕ್ಟಿಕಲ್ ) ರಾಜ್ಯಕ್ಕೆ ಪ್ರಥಮಸ್ಥಾನ ಗಳಿಸಿರುವುದು ಹಾಗೂ ವೆಟನರಿ ಪ್ರಾಕ್ಟಿಕಲ್ ನಲ್ಲಿ ರಾಜ್ಯಕ್ಕೆ 16ನೇ ರ್ಯಾಂಕ್ ಗಳಿಸಿ ಕಾಲೇಜಿಗೆ ಮತ್ತು ಜಿಲ್ಲೆಗೆ ಕೀರ್ತಿತಂದಿದ್ದಾರೆ.

ಶ್ರೇಯಸ್ ಬಿ. ಬರಗೂರ್ ಮಾತನಾಡಿ, ದ್ವಿತೀಯ ಪಿಯು ಪರೀಕ್ಷೆ ಸಂದರ್ಭದಲ್ಲಿ ಸಂಜೆ 6.30 ರಿಂದ 10.30ರ ತನಕ ಮಾತ್ರ ಓದುತ್ತಿದ್ದೆ. ಪರೀಕ್ಷೆಯಲ್ಲಿ ಶೇ.95ಕ್ಕೂ ಹೆಚ್ಚು ಅಂಕ ಬರುತ್ತದೆ ಎಂಬ ವಿಶ್ವಾಸವಿತ್ತು. ಗಣಿತ ಮತ್ತು ಇಂಗ್ಲೀಷ್‍ನಲ್ಲಿ ನನ್ನ ನಿರೀಕ್ಷೆಗಿಂತ ಸ್ವಲ್ಪ ಕಡಿಮೆ ಅಂಕ ಬಂತು.

ಆದರೆ, ಅದನ್ನೆ ಸವಾಲಾಗಿಟ್ಟುಕೊಂಡು ಅವಶ್ಯಕತೆಗನುಗುಣವಾಗಿ ಕಾಲೇಜಿನಲ್ಲಿ ಉಪನ್ಯಾಸಕರಿಂದ ಹೆಚ್ಚು ಮಾಹಿತಿ ಪಡೆದೆ ಹಾಗೂ ಗ್ರಾಮೀಣ ಪ್ರದೇಶಕ್ಕೆ ಬೇಟಿಕೊಟ್ಟು ಉಪಯುಕ್ತ ಮಾಹಿತಿ ಪಡೆದುಕೊಂಡು ತಯಾರಾದೆ ಎಂದರು.

ಸಿಇಟಿ ಪರೀಕ್ಷೆ ಬರೆದು ಅದರಲ್ಲಿ ಯಶಸ್ವಿಯಾದೆ. ಇದಕ್ಕೆ ಕಾಲೇಜಿನ ಉಪನ್ಯಾಸಕರ ಪ್ರೋತ್ಸಾಹ ಮತ್ತು ಪ್ರೋಷಕರ ಉತ್ತೇಜನ ಕಾರಣ ಎಂದರು.
ಸಂಸ್ಥೆಯ ಮುಖ್ಯ ಪ್ರಾಚಾರ್ಯೆ ವಿಜಯಾನಾಗೇಶ್ ವಿದ್ಯಾರ್ಥಿ ಶ್ರೇಯಸ್ ಅವರ ಪ್ರೋಷಕರ ನಿವಾಸಕ್ಕೆ ತೆರಳಿ ಅಭಿನಂದಿಸಿ ಸಿಹಿ ತಿನ್ನಿಸಿ ಸಂಭ್ರಮಿಸಿದರು.
ಪ್ರಾಚಾರ್ಯ ಕೆ.ಕೆ.ನಾಗರಾಜ್, ಸಂಸ್ಥೆ ಜಂಟಿ ಕಾರ್ಯದರ್ಶಿ ಎಂ.ಜೆ.ಕಾರ್ತಿಕ್ ಹಾಗೂ ವಿದ್ಯಾರ್ಥಿ ಪ್ರೋಷಕರು ಹಾಜರಿದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ