ನಾಳೆ ಸಿಇಟಿ ರಿಸಲ್ಟ್

ಈ ಸುದ್ದಿಯನ್ನು ಶೇರ್ ಮಾಡಿ

CET-Result
ಬೆಂಗಳೂರು, ಮೇ 31: ನಾಳೆ (ಜೂನ್ 01) ಮದ್ಯಾಹ್ನ 1 ಗಂಟೆಗೆ ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟವಾಗಲಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಕೃತವಾಗಿ ಫಲಿತಾಂಶವನ್ನು ವೆಬ್ಸೈಟ್ ಗಳಲ್ಲಿ 3 ಗಂಟೆ ವೇಳೆಗೆ ಪ್ರಕಟ ಮಾಡಲಿದೆ. ಬೆಳಿಗ್ಗೆ 11 ಗಂಟೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆಯುಕ್ತರು ಸುದ್ದಿಗೋಷ್ಠಿ ನಡೆಸಿ ಫಲಿತಾಂಶದ ಬಗ್ಗೆ ಮಾಹಿತಿ ನೀಡಲಿದ್ದಾರೆ. ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಎಪ್ರಿಲ್ ತಿಂಗಳಿನಲ್ಲಿ  2018ನೆ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆದಿತ್ತು. ಒಟ್ಟು 1,98,639 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ಈ ಕೆಳಗಿನ ವೆಬ್‌ಸೈಟ್‌ಗಳಲ್ಲಿ ನಾಳೆ ಮಧ್ಯಾಹ್ನ 3 ಗಂಟೆಗೆ ಫಲಿತಾಂಶ ನೋಡಬಹುದಾಗಿದೆ.
http://kea.kar.nic.in,
http://cet.kar.nic.in,
http://karresults.nic.in

Facebook Comments

Sri Raghav

Admin