ಬ್ರೇಕಿಂಗ್ : ಸಿಇಟಿ ಫಲಿತಾಂಶ ಪ್ರಕಟ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.21- ಇಂಜಿನಿಯರಿಂಗ್ , ಕೃಷಿ, ಪಶುವೈದ್ಯಕೀಯ, ಡಿಫಾರ್ಮ, ಬಿಫಾರ್ಮ ವೃತ್ತಿಪರ ಕೋರ್ಸ್‍ಗಳ ಪ್ರವೇಶಕ್ಕಾಗಿ ನಡೆದಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಫಲಿತಾಂಶ ಇಂದು ಪ್ರಕಟವಾಗಿದೆ.  ಉನ್ನತ ಶಿಕ್ಷಣ ಸಚಿವ ಹಾಗೂ ಡಿಸಿಎಂ ಅಶ್ವಥ್‍ನಾರಾಯಣ ಇಂದು ಕರ್ನಾಟಕ ಪರೀಕ್ಷಾ ಪ್ರಾಕಾರದಲ್ಲಿ ಸಿಇಟಿ ಫಲಿತಾಂಶ ಪ್ರಕಟಿಸಿದರು.

ಕಳೆದ ಜುಲೈ 30-31ರಂದು ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಸಿಇಟಿ ಪರೀಕ್ಷೆ ನಡೆದಿತ್ತು. 1,94,419 ವಿದ್ಯಾರ್ಥಿಗಳು ಸಿಇಟಿಗೆ ಅರ್ಜಿ ಸಲ್ಲಿಸಿದ್ದು, 1,75,349 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.  ಅದರಲ್ಲಿ ಇಂಜಿನಿಯರಿಂಗ್ ಕೋರ್ಸ್ 1,53470, ಕೃಷಿ ಕೋರ್ಸ್ 1,27,627, ಪಶುವೈದ್ಯಕೀಯ 1,29,666 ವಿದ್ಯಾರ್ಥಿಗಳು, ಯೋಗಾ ಮತ್ತು ನ್ಯಾಚುರೋಪತಿಗೆ 1,29,611, ಡಿಫಾರ್ಮ, ಬಿಫಾರ್ಮಗೆ 1,55,522 ರ್ಯಾಕಿಂಗ್ ಪಡೆದವರು ಅರ್ಹರಾಗಿದ್ದಾರೆ ಎಂದು ತಿಳಿಸಿದರು.

ಇವರೆಗೆ ರ್ಯಾಂಕಿಂಗ್ ಪ್ರಕಟಗೊಳ್ಳದೆ ಇರುವವರು ತಮ್ಮ ಅಂಕ ಪಟ್ಟಿಯನ್ನು ವೆಬ್ ಸೈಟ್‍ಗೆ ಅಪ್‍ಲೋಡ್ ಮಾಡಿದರೆ ರ್ಯಾಂಕಿಂಗ್ ಪ್ರಕಟಗೊಳ್ಳುತ್ತದೆ ಎಂದು ಹೇಳಿದರು.  ದಾಖಲಾತಿಗಳ ಪರಿಶೀಲನೆ, ಆನ್‍ಲೈನ್‍ನಲ್ಲೇ ನಡೆಯಲಿದೆ. ಯಾರೂ ಖುದ್ದಾಗಿ ಪರೀಕ್ಷಾ ಪ್ರಾಕಾರಕ್ಕೆ ಬರುವ ಅಗತ್ಯವಿಲ್ಲ. ರ್ಯಾಂಕಿಂಗ್ ವಾರು ದಿನಾಂಕಗಳನ್ನು ನಿಗದಿಪಡಿಸಲಾಗಿದ್ದು, ಆಯಾ ದಿನದಂದು ಪಿಡಿಎಫ್ ಫಾರ್ಮೆಟ್‍ನಲ್ಲಿರುವ ದಾಖಲಾತಿಗಳನ್ನು ಅಪ್‍ಲೋಡ್ ಮಾಡಿ ಪರಿಶೀಲನೆ ಮಾಡಿಸಿಕೊಳ್ಳಬಹುದು.

1ರಿಂದ 2000 ರ್ಯಾಕಿಂಗ್ ಇರುವವರು ಸೆ.2 ಮತ್ತು 3ರಂದು, 2 ಸಾವಿರದಿಂದ 7 ಸಾವಿರದ ರ್ಯಾಂಕಿನವರು ಸೆ.4ರಿಂದ 6ರವರೆಗೆ, 7001ರಿಂದ 15 ಸಾವಿರ ರ್ಯಾಂಕಿನ್‍ನವರು ಸೆ.7ರಿಂದ 9ವರೆಗೆ 15,001ರಿಂದ 25 ಸಾವಿರ ರ್ಯಾಂಕಿಂಗ್ ಇರುವವರು ಸೆ.10ರಿಂದ 12ರವರೆಗೆ, 25,001ರಿಂದ 40 ಸಾವಿರ ರ್ಯಾಂಕಿಂಗ್ ಇರುವವರ ಸೆ.13ರಿಂದ 15ರವರೆಗೆ, 40,001ರಿಂದ 70 ಸಾವಿರ ರ್ಯಾಂಕಿಂಗ್ ಇರುವವರು ಸೆಪ್ಟೆಂಬರ್ 16ರಿಂದ 19ರವರೆಗೆ, 70,001ರಿಂದ 1 ಲಕ್ಷದವರೆಗೆ ರ್ಯಾಂಕಿಂಗ್ ಇರುವವರು ಸೆ.20ರಿಂದ 23ರವರೆಗೆ, ಒಂದು ಲಕ್ಷ ಮೇಲ್ಪಟ್ಟ ರ್ಯಾಂಕ್ ಇರುವವರು ಸೆ.24ರಿಂದ 27ರವರೆಗೆ ದಾಖಲಾತಿಗಳ ಪರಿಶೀಲನೆಗೆ ಆನ್‍ಲೈನ್‍ನಲ್ಲಿ ಭಾಗವಹಿಸಬಹುದು ಎಂದು ಹೇಳಿದರು.

ನೀಟ್, ಆರ್ಕಿಟೆಕ್ ಮತ್ತು ಜೆಇಇ ಪರೀಕ್ಷೆಗಳ ಫಲಿತಾಂಶ ಮತ್ತು ಕೌನ್ಸಿಲಿಂಗ್ ದಿನಾಂಕಗಳನ್ನು ನೋಡಿಕೊಂಡು ಸಿಇಟಿ ಕೌನ್ಸಿಲಿಂಗ್‍ಗೆ ದಿನಾಂಕ ನಿಗದಿಪಡಿಸಲಾಗುವುದು. ಬಹುತೇಕ ಅಕ್ಟೋಬರ್ ತಿಂಗಳಿನಲ್ಲಿ ಸಿಇಟಿ ಕೌನ್ಸಿಲಿಂಗ್ ನಡೆಯಲಿದೆ.
ನವೆಂಬರ್‍ನಿಂದ ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭವಾಗಲಿವೆ. ಸಿಇಟಿ ಕೌನ್ಸಿಲಿಂಗ್ ಎರಡು ಸುತ್ತಿನಲ್ಲಿ ನಡೆಯಲಿದೆ.

ಕಾಲೇಜು ಬದಲಾವಣೆ ಹಾಗು ಇತರೆ ಸಮಸ್ಯೆಗಳಿದ್ದರೆ 3ನೇ ಬಾರಿಯ ಕೌನ್ಸಿಲಿಂಗ್‍ಗೂ ಅವಕಾಶ ನೀಡುವುದಾಗಿ ಅವರು ಹೇಳಿದರು. ರಾಜ್ಯದಲ್ಲಿ ಸಿಇಟಿ ಪರೀಕ್ಷೆ 493 ಕೇಂದ್ರಗಳಲ್ಲಿ ನಡೆದಿತ್ತು. ಕಳೆದ ವರ್ಷ 52 ಸ್ಥಳಗಳಲ್ಲಿ ನಡೆದಿತ್ತು. ಈ ಬಾರಿ 75 ಸ್ಥಳಗಳನ್ನು ಹೆಚ್ಚು ಮಾಡಿ ಒಟ್ಟು 127 ಕಡೆಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಕೋವಿಡ್‍ನಿಂದಾಗಿ ಪರೀಕ್ಷೆ ನಡೆಸುವುದು ಸವಾಲಿನ ಕೆಲಸವಾಗಿತ್ತು. ಆರೋಗ್ಯ ಇಲಾಖೆ, ಪೆÇಲೀಸ್ ಇಲಾಖೆ ಪ್ರಾಕಾರದ ಅಕಾರಿಗಳು ಹೆಚ್ಚು ಮುಂಜಾಗ್ರತೆ ಮತ್ತು ಪರಿಶ್ರಮದಿಂದಾಗಿ ಸುರಕ್ಷಿತವಾಗಿ ಪರೀಕ್ಷೆ ನಡೆದಿದೆ ಎಂದು ಹೇಳಿದರು.

ವರಮಹಾಲಕ್ಷ್ಮಿ ಹಬ್ಬಕ್ಕೆ ಪರೀಕ್ಷೆ ನಡೆಸಿ, ಗೌರಿಹಬ್ಬಕ್ಕೆ ಪರೀಕ್ಷೆ ಫಲಿತಾಂಶ ಪ್ರಕಟಿಸಿದ್ದೇವೆ. ಪರೀಕ್ಷೆಗೂ ಮುನ್ನ ಆನ್‍ಲೈನ್ ತರಬೇತಿ ಕಾರ್ಯಕ್ರಮಗಳು ಯಶಸ್ವಿಯಾಗಿದ್ದು, ಉತ್ತಮ ಫಲಿತಾಂಶ ನೀಡಿವೆ. ಆನ್‍ಲೈನ್ ಪರೀಕ್ಷೆಗಾಗಿ ಶಾಶ್ವತ ವ್ಯವಸ್ಥೆಯೊಂದನ್ನು ರೂಪಿಸಲಾಗಿದೆ ಎಂದು ಹೇಳಿದರು.

ಸಿಇಟಿ ಪರೀಕ್ಷೆಗೆ 96,215 ಮಂದಿ ಬಾಲಕರು ಅರ್ಜಿ ಸಲ್ಲಿಸಿ 96,029 ಮಂದಿ ಹಾಜರಾಗಿದ್ದರು. ಬಾಲಕಿಯರ ಪೈಕಿ 98,204 ಮಂದಿ ಅರ್ಜಿ ಸಲ್ಲಿಸಿ 87,320 ಮಂದಿ ಹಾಜರಾಗಿದ್ದರು.  ಶೇ. 100ರಷ್ಟು ಅಂಕ ಗಳಿಸಿದ ವಿದ್ಯಾರ್ಥಿಗಳ ಪೈಕಿ ರಸಾಯನಶಾಸ್ತ್ರ ವಿಭಾಗದಲ್ಲಿ ಮೂರು ಮಂದಿ ಹಾಗೂ ಜೀವಶಾಸ್ತ್ರ ವಿಭಾಗದಲ್ಲಿ 80 ಮಂದಿ ಇದ್ದಾರೆ.

ಸಿಇಟಿ ಟಾಪ್ ರ್ಯಾಂಕಿಂಗ್
# ಇಂಜಿನಿಯರಿಂಗ್:
1. ರಕ್ಷಿತ್ – ಆರ್‍ವಿಕಾಲೇಜು, ಬೆಂಗಳೂರು
2. ಶುಭಾನ್.ಎಂ-ಶ್ರೀ ಚೈತನ್ಯ ಟೆಕ್ನೊ ಶಾಲೆ
3. ಎಂ.ಶಶಾಂಕ್ ಬಾಲಾಜಿ-ಬೇಸ್ ಕಾಲೇಜು, ಹುಬ್ಬಳ್ಳಿ
4. ಸಂದೀಪನ್ ನಕ್ಸರ್ – ಔಟ್ ಸೈಟ್ ಕರ್ನಾಟಕ
5. ನಕುಲ್ ಅಭಯ್ ಬಾಪಟ್- ವಿದ್ಯಾನಿಕೇತಹಾನ್ ಎಸ್‍ಸಿ ಪಿಯು ಕಾಲೇಜು, ಹುಬಳ್ಳಿ
6. ಎಸ್.ಶ್ರೀವಾಸ್-ಶ್ರೀ ಚೈತನ್ಯ ಇ-ಟೆಕ್ನೊ ಸ್ಕೂಲ್, ಬೆಂಗಳೂರು
7. ಅದ್ವೈತ್ ಪ್ರಸಾದ್ ಕಪೋರ್ಡ್ – ಏರ್ ಪೋ ರ್ಸ್ ಸ್ಕೂಲ್, ಹೆಬ್ಬಾಳ, ಬೆಂಗಳೂರು
8. ಗೌರೀಶ ಕಂಜಾಪಾಡಿ- ವಿವೇಕಾನಂದ ಪಿಯು ಕಾಲೇಜು, ಪುತ್ತೂರು
9. ದೀಪ್ತಿ ಎಸ್.ಪಾಟೀಲ್- ಬೇಸ್ ಪಿಯು ಕಾಲೇಜು, ಬೆಂಗಳೂರು.
10. ಶಶಾಂಕ್.ಪಿ- ಎಕ್ಸ್‍ಪರ್ಟ್ ಪಿಯು ಕಾಲೇಜು, ಮಂಗಳೂರು.

# ಬಿಎಸ್‍ಇ ಅಗ್ರಿಕಲ್ಚರ್:
1. ವರುಣ್ ಗೌಡ- ಎಕ್ಸ್‍ಪರ್ಟ್ ಪಿಯು ಕಾಲೇಜು, ಮಂಗಳೂರು.
2. ಸಂಜನ.ಕೆ- ಬೇಸ್ ಪಿಯು ಕಾಲೇಜು, ಮೈಸೂರು
3. ಲೋಕೇಶ್.ಬಿ ಜೋಗಿ-ಶ್ರೀರಾಮಕೃಷ್ಣ ವಿದ್ಯಾಶಾಲಾ-ಮೈಸೂರು
4. ಜತಿನ್ .ಎ.ಎಲ್.ಡಿ- ಸಿಲ್ವರ್ ವ್ಯಾಲಿ ಪಬ್ಲಿಕ್ ಪಿಯು ಕಾಲೇಜು- ಬೆಂಗಳೂರು
5. ಆರ್ನವ್ ಅಯ್ಯಪ್ಪ.ಪಿ.ಪಿ- ಆಳ್ವಾಸ್ ಪಿಯು ಕಾಲೇಜು, ಮೂಡಬಿದರೆ
6. ಪ್ರಜ್ವಲ್ ಕಶ್ಯಪ್-ವಿದ್ಯಾಮಂದಿರ ಪಿಯು ಕಾಲೇಜು, ಬೆಂಗಳೂರು
7. ಚಿನ್ಮಯ ಎಸ್.ಭಾರದ್ವಾಜ್- ಸರ್.ಎಂ.ವಿ ಪಿಯು ಕಾಲೇಜು, ದಾವಣಗೆರೆ
8. ಪವನ್.ಎಸ್ ಗೌಡ-ನಾರಾಯಣ ಪಿಯು ಕಾಲೇಜು, ಬೆಂಗಳೂರು
9. ಮಯೂರ್.ಎಸ್ ಚಿತ್ತರಗಿ- ಮಾಸ್ಟರ್ ಪಿಯು ಕಾಲೇಜು, ಹಾಸನ
10. ಎಚ್.ಸಿ.ಗೌರೀಶ್ ಎಕ್ಸಪರ್ಟ್ ಪಿಯು ಕಾಲೇಜು, ಮಂಗಳೂರು.

# ಟಾಪರಸ್ ಬಿ ಫಾರ್ಮ- ಡಿ ಫಾರ್ಮ
1. ಸಾಯಿ ವಿವೇಕ್.ಪಿ- ನಾರಾಯಣ ಇ.ಟೆಕ್ನೊ ಸ್ಕೂಲ್, ಬೆಂಗಳೂರು
2. ಸಂದೀಪನ್ ನಸ್ಕರ್ – ಔಟ್ ಸೈಡ್ ಕರ್ನಾಟಕ
3. ಪವನ್ ಎಸ್.ಗೌಡ- ನಾರಾಯಣ ಪಿಯು ಕಾಲೇಜು, ಬೆಂಗಳೂರು
4. ಆರ್ಯನ್ ಮಹಾಲಿಂಗಪ್ಪ ಚನ್ನಾಲ್- ಪ್ರಗತಿ ಪಬ್ಲಿಕ್ ಎಸ್‍ಇಸಿ ಸ್ಕೂಲ್, ಕೊತಾ
5. ಸಂಜನ.ಕೆ- ಬೇಸ್ ಪಿಯು ಕಾಲೇಜು, ಮೈಸೂರು
6. ಎಂ.ಶಶಾಂಕ್ ಬಾಲಾಜಿ-ಬೇಸ್ ಪಿಯು ಕಾಲೇಜು, ಹುಬ್ಬಳ್ಳಿ
7. ಅರ್ನವ ಅಯ್ಯಪ್ಪ .ಪಿ.ಪಿ.- ಆಳ್ವಾ ಪಿಯು ಕಾಲೇಜು, ಮೂಡಬಿದರೆ
8. ವರುಣ್ ಗೌಡ.ಎ.ಬಿ- ಎಕ್ಸಪರ್ಟ್ ಪಿಯು ಕಾಲೇಜು, ಮಂಗಳೂರು
9. ಎಂ.ಡಿ.ಅರಬಾಜ್ ಅಹಮದ್- ಶಹೀನ್ ಐಎನ್‍ಡಿಪಿ ಪಿಯು ಕಾಲೇಜು, ಬೀದರ್
10. ಗೌರೀಶ ಕಜಂಪಡಿ- ವಿವೇಕಾನಂದ ಪಿಯು ಕಾಲೇಜು, ಪುತ್ತೂರು

# ಬಿವಿಎಸ್‍ಸಿ :
1. ಸಾಯಿ ವಿವೇಕ್.ಪಿ- ನಾರಾಯಣ ಇ-ಟೆಕ್ನೊ ಸ್ಕೂಲ್ , ಬೆಂಗಳೂರು
2. ಆರ್ಯನ್ ಮಹಾಲಿಂಗಪ್ಪ ಚನ್ನಾಲ್- ಪ್ರಗತಿ ಪಬ್ಲಿಕ್ ಎಸ್‍ಇಸಿ ಸ್ಕೂಲ್ ಕೊತಾ
3.ಸಂಜನ.ಕೆ -ಬೇಸ್ ಪಿಯು ಕಾಲೇಜು, ಮೈಸೂರು
4. ಪವನ್ ಗೌಡ- ನಾರಾಯಣ ಪಿಯು ಕಾಲೇಜು, ಬೆಂಗಳೂರು
5. ಆರ್ನವ್ ಅಯ್ಯಪ್ಪ.ಪಿ.ಪಿ.-ಆಳ್ವಾಸ್ ಪಿಯು ಕಾಲೇಜು, ಮೂಡಬಿದರೆ, ದಕ್ಷಿಣ ಕನ್ನಡ
6. ಎಂ.ಡಿ.ಅರಬಾಜ್ ಅಹ್ಮದ್-ಶಹೀನ್ ಐಎನ್‍ಡಿಪಿ ಪಿಯುಕಾಲೇಜು, ಬೀದರ್
7. ವರುಣ್ ಗೌಡ.ಎ.ಬಿ- ಎಕ್ಸಪರ್ಟ್ ಪಿಯು ಕಾಲೇಜು, ಮಂಗಳೂರು
8. ಸುಮನ್.ಕೆ.ಎಸ್- ನಾರಾಯಣ ಪಿಯು ಕಾಳೇಜು, ಬೆಂಗಳೂರು
9. ಕಾರ್ತಿಕ್ ರೆಡ್ಡಿ-ಶಹೀನ್ ಐಎನ್‍ಡಿಪಿ ಪಿಯು ಕಾಳೇಜು, ಬೀದರ್
10. ತೇಜಸ್ ಭಟ್ .ಕೆ- ಶಾರದ ಐಎನ್‍ಡಿಪಿ ಪಿಯು ಕಾಲೇಜು, ದಕ್ಷಿಣ ಕನ್ನಡ

Facebook Comments

Sri Raghav

Admin