ಸಿಇಟಿಯಲ್ಲಿ ಟಾಪ್ 5 ರಾಂಕ್ ಪಡೆದ ವಿದ್ಯಾರ್ಥಿಗಳಿಗೆ ಉಚಿತ ಸೀಟು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮೆ 26- ಕರ್ನಾಟಕ ಪರೀಕ್ಷಾ ಪ್ರಾಧಿಕಾರ 19ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಿದ್ದು, ಜೂನ್ 6ರಿಂದ ದಾಖಲಾತಿಗಳ ಪರಿಶೀಲನೆ ಯನ್ನು ಆರಂಭಿಸಲಿದೆ. ಇಂಜಿನಿಯರಿಂಗ್, ನ್ಯಾಚುರೋಪತಿ, ಯೋಗ ವಿಜ್ಞಾನ, ಬಿಎಸ್ಸಿ ಕೃಷಿ, ಪಶು ವೈದ್ಯಕೀಯ , ಬಿ ಫಾರ್ಮ, ಡಿ ಫಾರ್ಮ ಕೋರ್ಸ್‍ಗಳ ಪ್ರವೇಶಕ್ಕಾಗಿ ಕಳೆದ ಏ.29 ಮತ್ತು 30ರಂದು ರಾಜ್ಯದ 431 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು.

1,94,308 ಮಂದಿ ಅರ್ಜಿ ಸಲ್ಲಿಸಿ ಅದರಲ್ಲಿ 1,80,315( ಶೇ. 92.79ರಷ್ಟು) ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.  ಅದರಲ್ಲಿ ಇಂಜಿನಿಯರಿಂಗ್‍ಗೆ 1,46,957, ಬಿಎಸ್ಸಿ ಕೃಷಿಗೆ 1,03,394, ನ್ಯಾಚುರೋಪತಿ ಯೋಗ ವಿಜ್ಞಾನಕ್ಕೆ , 1,17,947 ಮತ್ತು ಪಶುವೈದ್ಯಕೀಯಕ್ಕೆ 1,18,045 , ಬಿ ಫಾರ್ಮಗೆ 1,46,546 , ಡಿ ಫಾರ್ಮಗಳಿಗೆ 1,46,759 ವಿದ್ಯಾರ್ಥಿಗಳು ರ್ಯಾಂಕಿಂಗ್ ಪಡೆದಿದ್ದಾರೆ ಎಂದು ಸಚಿವ ಜಿ.ಟಿ.ದೇವೇಗೌಡ ಪತ್ರಿಕಾ ಗೋಷ್ಠಿಯಲ್ಲಿ ಪ್ರಕಟಿಸಿದರು.

ಸಿಇಟಿಯಲ್ಲಿ ಎಲ್ಲಾ ವಿಧಧ ಮೊದಲ ಐದು ಟಾಪ್ ರ್ಯಾಂಕ್ ಪಡೆದ ವಿದ್ಯಾರ್ಥಿಗಳ ಕಾಲೇಜು ಪ್ರವೇಶ ಶುಲ್ಕವನ್ನು ಪ್ರಾಧಿಕಾರ ಮರುಪಾವತಿಸಲಿದೆ ಎಂದು ತಿಳಿಸಿದರು.  ಇಂಜಿನಿಯರಿಂಗ್ ವಿಭಾಗದಲ್ಲಿ , ಮಾರತಹಳ್ಳಿಯ ಚೈತನ್ಯ ಟೆಕ್ನೊ ಕಾಲೇಜಿನ ಜಫಿನ್ ಬಿಜು ಮೊದಲ ಸ್ಥಾನ ಪಡೆದಿದ್ದಾರೆ. ಮೊದಲ 10 ಸ್ಥಾನಗಳಲ್ಲಿ ಬೆಂಗಳೂರಿನ ಏಳು, ಮಂಗಳೂರಿನ 2, ಬಳ್ಳಾರಿಯ ಒಬ್ಬ ವಿದ್ಯಾರ್ಥಿ ರ್ಯಾಂಕ್ ಗಳಿಸಿದ್ದಾರೆ.

ನ್ಯಾಚರಿಪತಿ ಮತ್ತು ಯೋಗ ವಿಜ್ಞಾನ ವಿಭಾಗದಲ್ಲಿ ಚೈತನ್ಯ ಟೆಕ್ನೋ ಪಿಯು ಕಾಲೇಜಿನ ಮಹೇಶ್‍ಆನಂದ್ ಮೊದಲ ಸ್ಥಾನಪಡೆದರೆ, ಬೆಂಗಳೂರಿನ 6 , ಮಂಗಳೂರಿನ 2, ಮೈಸೂರು ಮತ್ತು ದಾವಣಗೆರೆ ತಲಾ ಒಬ್ಬರು ವಿದ್ಯಾರ್ಥಿಗಳು ಮೊದಲ 10ನೇ ರ್ಯಾಂಕ್‍ಗಳನ್ನು ಪಡೆದಿದ್ದಾರೆ.

ಬಿಎಸ್ಸಿ ಕೃಷಿ ವಿಭಾಗದಲ್ಲಿ ಬೆಂಗಳೂರಿನ ನ್ಯಾಷನಲ್ ಪಬ್ಲಿಕ್ ಸ್ಕೂಲ್‍ನ ಕೀರ್ತನ. ಎಂ. ಅರುಣ್ ಮೊದಲ ಸ್ಥಾನ ಪಡೆದರೆ, ಬೆಂಗಳೂರಿನ ಮೂವರು, ಮಂಗಳೂರಿನ ನಾಲ್ವರು, ಮೈಸೂರು, ಹಾಸನ, ಶಿವಮೊಗ್ಗದ ತಲಾ ಒಬ್ಬ ವಿದ್ಯಾರ್ಥಿಗಳು ಮೊದಲ 10ನೇ ರ್ಯಾಂಕ ಪಡೆದಿದ್ದಾರೆ.

ಪಶುವೈದ್ಯಕೀಯ ವಿಭಾಗದಲ್ಲಿ ಶ್ರೀ ಚೈತನ್ಯ ಟೆಕ್ನೋ ಕಾಲೇಜಿನ ಪಿ.ಮಹೇಶ್ ಆನಂದ್ ಮೊದಲ ರ್ಯಾಂಕ್ ಪಡೆದರೆ, ಬೆಂಗಳೂರಿನ ಮೂರು, ಮೈಸೂರಿನ ನಾಲ್ಕು, ಹಾಸನದ ಒಂದು, ಶಿವಮೊಗ್ಗದ ಒಬ್ಬ ವಿದ್ಯಾರ್ಥಿ ಮೊದಲ 10 ಸ್ಥಾನ ಪಡೆದಿದ್ದಾರೆ.

ಬಿ ಫಾರ್ಮ ಮತ್ತು ಡಿ ಫಾರ್ಮದಲ್ಲಿ ಶ್ರೀ ಚೈತನ್ಯ ಟೆಕ್ನೋ ಕಾಲೇಜಿನ ಕುಮಾರಿ ಸಾಯಿ ಸಾಕೇತಿಕ ಚಕುರಿ ಮೊದಲ ರ್ಯಾಂಕ್ ಪಡೆದರೆ ಬೆಂಗಳೂರಿನ 7, ಮಂಗಳೂರು, ಮೈಸೂರು, ಬಳ್ಳಾರಿಯ ತಲಾ ಒಬ್ಬರು ವಿದ್ಯಾರ್ಥಿಗಳು ಮೊದಲ 10ನೇ ರ್ಯಾಂಕ್ ಪಡೆದಿದ್ದಾರೆ.

ಮಾರತಹಳ್ಳಿಯ ಚೈತನ್ಯ ಟೆಕ್ನೋ ಕಾಲೇಜಿನ ಮೂವರು ವಿದ್ಯಾರ್ಥಿಗಳು ಮೊದಲ ರ್ಯಾಂಕ್ ಪಡೆದರೆ, ಅದರಲ್ಲಿ ಪಿ.ಮಹೇಶ್ ಆನಂದ್ ಪಶುವೈದ್ಯಕೀಯ ಮತ್ತು ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಎರಡೂ ವಿಭಾಗದಲ್ಲೂ ಪ್ರಥಮ ರ್ಯಾಂಕ್ ಪಡೆದಿದ್ದಾರೆ.

ಇಂದು ಮಧ್ಯಾಹ್ನ ನಂತರ ಫಲಿತಾಂಶ ವೆಬ್‍ಸೈಟ್‍ನಲ್ಲಿ ಲಭ್ಯವಾಗಲಿದ್ದು, ವೆಬ್‍ಸೈಟ್ http://kea.kar.nic.in, http://cet.kar.nic.in, http://karresults.nic.in ಫಲಿತಾಂಶ ವೀಕ್ಷಸಬಹುದು.

ರ‍್ಯಾoಕ್ ಪಡೆದ ವಿದ್ಯಾರ್ಥಿಗಳಿಗೆ ಜೂ.6ರಿಂದ ದಾಖಲಾತಿಗಳ ಪರಿಶೀಲನೆ ಆರಂಭಗೊಳ್ಳಲಿದೆ. ಬೆಂಗಳೂರು ನಗರ/ಗ್ರಾಮಾಂತರ ಜಿಲ್ಲೆಯವರೆಗೆ ಬೆಂಗಳೂರಿನ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆವರಣದಲ್ಲಿ ದಾಖಲಾತಿಗಳ ಪರಿಶೀಲನೆ ನಡೆಯಲಿದ್ದು, ಉಳಿದ 28 ಜಿಲ್ಲೆಗಳಲ್ಲೂ ಆಯಾ ಭಾಗದಲ್ಲೇ ದಾಖಲಾತಿಗಳ ಪರಿಶೀಲನೆ ನಡೆಯಲಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ