`ಚಡ್ಡಿ ದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ’ ಚಿತ್ರ ಈ ವಾರ ತೆರೆಗೆ

ಈ ಸುದ್ದಿಯನ್ನು ಶೇರ್ ಮಾಡಿ

ವಲ್ರ್ಡ್ ಬುಕ್ ಆಫ್ ರೆಕಾರ್ಡ್ಸ್ ನ ರೆಡ್ ವೈಟ್ ಖ್ಯಾತಿಯ ಸೆವೆನ್ ರಾಜ್ ನಟನೆ ಹಾಗೂ ನಿರ್ಮಾಣದ ಚೆಡ್ಡಿ ದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ ಚಿತ್ರ ಈ ವಾರ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಚಿತ್ರಮಂದಿರದಲ್ಲಿ ಪ್ರೆಕ್ಷಕರಿಗೆ 50% ಅವಕಾಶ ಮಾತ್ರ ನೀಡಿದರೂ ಸಹ ಯಾವುದಕ್ಕೂ ಚಿಂತಿಸದೆ ಅದ್ಧೂರಿ ಪ್ರಚಾರ ಮಾಡುವ ಮೂಲಕ ಚಿತ್ರವನ್ನು ಹೊರತರುತ್ತಿದ್ದಾರೆ.

ಚಿತ್ರ ತಂಡದ ಪ್ರಕಾರ ಈ ಚೆಡ್ಡಿ ದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ ಚಿತ್ರವನ್ನು ಪ್ರೇಕ್ಷಕರು ಇಷ್ಟಪಡುತ್ತಾರೆ ಎಂಬ ಭರವಸೆಯನ್ನು ಹೊಂದಿದ್ದಾರೆ.
ಸೆವೆನ್ ರಾಜ್ ಪ್ರೊಡಕ್ಷನ್ ಅಡಿಯಲ್ಲಿ ರೆಡ್ ಅಂಡ್ ವೈಟ್ ಖ್ಯಾತಿಯ ಸೆವೆನ್ ರಾಜ್ ಅವರ ನಿರ್ಮಾಣದ ಚಡ್ಡಿ ದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ ಹಾಸ್ಯದ ಜೊತೆ ಸ್ನೇಹ, ಪ್ರೀತಿಯ ಕಥಾನಕ ಹೊಂದಿದೆ.

ಈ ಚಿತ್ರಕ್ಕೆ ಆಸ್ಕರ್ ಕೃಷ್ಣ ಆ್ಯಕ್ಷನ್ ಕಟ್ ಹೇಳುವುದರೊಂದಿಗೆ ನಾಯಕನಾಗಿಯೂ ನಟಿಸಿದ್ದಾರೆ. ನಿರ್ಮಾಪಕರಾದ ಸೆವೆನ್ ರಾಜ್ ಅವರು ಈ ಚಿತ್ರದಲ್ಲಿ ಖಳನಾಯಕನಾಗುವ ಮೂಲಕ ಬಹಳ ದಿನಗಳ ನಂತರ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅಲ್ಲದೆ ಈ ಚಿತ್ರವನ್ನು ಅದ್ದೂರಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ.

ಕಾಮಿಡಿ ಜೊತೆಗೆ ಕ್ರೈಮï, ಥ್ರಿಲ್ಲರ್ ಕಥಾನಕ ಹೊಂದಿರುವ ಈ ಚಿತ್ರಕ್ಕೆ ಲೋಕೇಂದ್ರ ಸೂರ್ಯ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ರಚಿಸಿದ್ದು , ಚಡ್ಡಿ ದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ ಚಿತ್ರದ ಇಬ್ಬರು ಸ್ನೇಹಿತರ ಪ್ರಮುಖ ಪಾತ್ರಗಳಲ್ಲಿ ಆಸ್ಕರ್ ಕೃಷ್ಣ ಜೊತೆಗೆ ಲೋಕೇಂದ್ರ ಸೂರ್ಯ ಅವರು ನಟಿಸಿದ್ದಾರೆ.

ಈ ಚಿತ್ರದಲ್ಲಿ ಸ್ನೇಹ , ಸಂಬಂಧ, ಪ್ರೀತಿ, ಪ್ರೇಮ, ರಾಜಕೀಯ. ಕ್ರೈಮ್ ಮತ್ತು ಈಗಿನ ಪೊಲೀಸ್ ವ್ಯವಸ್ಥೆಯಂಥ ಹಲವಾರು ಅಂಶಗಳು ಹೇಗೆ ಒಂದಕ್ಕೊಂದು ಸಂಬಂಧ ಹೊಂದಿರುತ್ತವೆ ಎಂಬುದನ್ನು ಹೇಳಲಾಗಿದೆ. ಸೆವೆನ್ ರಾಜ್ ಪ್ರೊಡಕ್ಷನ್ ನಿರ್ಮಿಸಿರುವ ಈ ಚಿತ್ರದಲ್ಲಿ ನಾಯಕಿಯಾಗಿ ಮಲಯಾಳಿ ಬೆಡಗಿ ಗೌರಿ ನಾಯರ್ ಕಾಣಿಸಿಕೊಂಡಿದ್ದಾರೆ.

ನಿರ್ದೇಶಕ ಆಸ್ಕರ್ ಕೃಷ್ಣ ಮಾತನಾಡಿ, ಆರಂಭದಲ್ಲಿ ಈ ಚಿತ್ರಕ್ಕೆ ಬೇರೆ ಬೇರೆ ಟೈಟಲ್ ಪ್ಲಾನ್ ಮಾಡಿದ್ದೆವು. ಇಬ್ಬರು ಸ್ನೇಹಿತರ ನಡುವಿನ ಬಾಂಡಿಂಗ್, ಅದರ ಸುತ್ತ ಒಂದಷ್ಟು ಘಟನೆಗಳು, ಅವರ ನಡುವೆ ಒಂದು ಹುಡುಗಿ ಬಂದಾಗ ಎದುರಾಗುವಂಥ ಸಂದರ್ಭಗಳು ಈ ಚಿತ್ರದ ಪ್ರಮುಖ ಕಥಾನಕ. ಲೋಕೇಂದ್ರ ಸೂರ್ಯ ಕಲಾವಿದನಾಗಿ ಬಂದವರು ನಂತರ ಚಿತ್ರಕಥೆಯಲ್ಲೂ ಇನ್ವಾಲ್ ಆಗಿ ಅತ್ಯದ್ಭುತವಾದ ಚಿತ್ರಕಥೆ, ಸಂಭಾಷಣೆ ಬರೆದರು.

ಚಿತ್ರ ಮಾಡ್ತಾ ಮಾಡ್ತಾ ಬಜೆಟ್ ಜಾಸ್ತಿಯಾದಾಗ ದೇವರಂತೆ ಬಂದವರೇ ಸೆವೆನ್ ರಾಜ್. ಒಂದು ಮೂಲದಿಂದ ಇವರ ಪರಿಚಯವಾಯಿತು, ಒಂದೇ ಲೈನ್‍ನಲ್ಲಿ ಕಥೆ ಕೇಳಿ ಬಂಡವಾಳ ಹಾಕಲು ಒಪ್ಪಿದರು. ಜೊತೆಗೆ ಚಿತ್ರದಲ್ಲಿ ಖಳನಾಯಕನ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ. ಈ ಥರ ಸಿನಿಮಾ ಪ್ರೀತಿಸುವ ಪ್ರೊ ಡ್ಯೂಸರ್ ಸಿಗುವುದು ತುಂಬಾ ಕಮ್ಮಿ. ನಮ್ಮ ಶ್ರಮ ಹಾಗೂ ನಿರ್ಮಾಪಕರ ಪ್ರಾಮಾಣಿಕತೆ ಸೇರಿ ಉತ್ತಮ ಪ್ರಾಜೆಕ್ಟ್ ï ಹೊರಬಂದಿದೆ.

ಲಾಕ್‍ಡೌನ್ ನಂತರ ಆರಂಭವಾದ ಮೊದಲ ಚಿತ್ರವೇ ನಮ್ಮದು. ಗೌರಿ ನಾಯರ್ ನನಗೆ 4-5 ವರ್ಷಗಳ ಸ್ನೇಹಿತೆ. ಈಗಾಗಲೇ ಮಲಯಾಳಂನಲ್ಲಿ ಅಭಿನಯಿಸಿದ್ದು, ನಮ್ಮ ಚಿತ್ರದಲ್ಲಿ ಉತ್ತಮ ಅಭಿನಯ ನೀಡಿದ್ದಾರೆ. ಸಿಂಗಲ್ ಟೇಕ್ ನಾಯಕಿ, ನಿರ್ಮಾಪಕರೂ ಅದ್ಭುತವಾಗಿ ನಟಿಸಿದ್ದಾರೆ. ಅನಂತ್ ಆರ್ಯನ್ ಸುಮಧುರವಾಗಿ ಹಾಡುಗಳನ್ನು ಕಂಪೋಸ್ ಮಾಡಿದ್ದಾರೆ.

ರಾಜೇಶ್ ಕೃಷ್ಣನ್, ಅನುರಾಧಾ ಭಟ್, ಜೋಗಿ ಸುನಿತಾ ಅದ್ಭುತವಾಗಿ ಹಾಡಿದ್ದಾರೆ. ಗಗನ್ ತುಂಬಾ ಚೆನ್ನಾಗಿ ಕ್ಯಾಮೆರಾ ವರ್ಕ್ ಮಾಡಿಕೊಟ್ಟಿದ್ದಾರೆ. ಸಮಾಜದ ಕಣ್ಣಲ್ಲಿ ನಾಯಕರಿಬ್ಬರೂ ಕ್ರಿಮಿನಲ್ ಆಗಿದ್ದರೂ ಅವರ ನಡುವಿನ ಸ್ನೇಹ ಸಂಬಂಧ ಉತ್ತಮವಾಗಿರುತ್ತದೆ. ಎಷ್ಟೋ ದೊಡ್ಡ ದೊಡ್ಡ ಘಟನೆಗಳು ಸಣ್ಣ ಸಣ್ಣ ಕಾರಣಗಳಿಂದ ಜರುಗುತ್ತವೆ, ಆದೇ ರೀತಿ ಇಲ್ಲೂ ಆಗುತ್ತದೆ. ಇವರಲ್ಲಿ ಕ್ರಿಮಿನಲ್ ಯಾರು? ನಿಜವಾದ ಇನೋಸೆಂಟ್ ಯಾರು? ಅನ್ನೋದರ ಮೇಲೆ ಈ ಚಿತ್ರದ ಕಥೆ ಸಾಗುತ್ತದೆ.

ಬೆಂಗಳೂರು, ತುಮಕೂರು, ಕುಣಿಗಲ್ ಸುತ್ತಮುತ್ತ ಚಿತ್ರದ ಶೂಟಿಂಗ್ ನಡೆಸಲಾಗಿದೆ. 3 ಹಾಡು, 2 ಫೈಟ್ಸ್ ಚಿತ್ರದಲ್ಲಿದೆ. ಈಗ ಶೇ.50ರಷ್ಟು ಇದ್ದರೂ ಬಿಡುಗಡೆ ಮಾಡುತ್ತಿದ್ದೇವೆ. ನಿರ್ಮಾಪಕರ ಲಕ್ಕಿ ನಂಬರ್ 7. ಚಿತ್ರವೂ 17ರಂದೇ ಬಿಡುಗಡೆಯಾಗುತ್ತಿದೆ ಎಂದು ಚಿತ್ರದ ಕುರಿತಂತೆ ಬಹುತೇಕ ಮಾಹಿತಿಯನ್ನು ಹಂಚಿಕೊಂಡರು.

ನಿರ್ಮಾಪಕ ಸೆವೆನ್ ರಾಜ್ ಮಾತನಾಡಿ, ನಮ್ಮ ಕುಟುಂಬದಲ್ಲಿ ನಾನು ಏಳನೆ ಮಗ, ಹಾಗಾಗಿ ನಮ್ಮ ತಂದೆ ನನಗೆ ಸೆವೆನ್ರಾಜ್ ಅಂತ ಹೆಸರಿಟ್ಟಿದ್ರು. ಚಿತ್ರದಲ್ಲಿ ಮೇನ್ ವಿಲನ್ ಆಗಿ ಕಾಣಿಸಿಕೊಂಡಿದ್ದೇನೆ. 30 ವರ್ಷಗಳ ಹಿಂದಾದ ಅವಮಾನವೇ ನಾನೀ ಮಟ್ಟಕ್ಕೆ ಬೆಳೆಯಲು ಕಾರಣ, ನಮ್ಮ ಚಿತ್ರವನ್ನು 7 ಕೋಟಿ ಕನ್ನಡಿಗರು ಗೆಲ್ಲಿಸುತ್ತಾರೆಟದು ಹೇಳಿದರು. ಛಾಯಾಗ್ರಾಹಕ ಗಗನ್ ಕುಮಾರ್, ಸಂಗೀತ ನಿರ್ದೇಶಕ ಅನಂತ್ ಅರ್ಯನ್ ಕೂಡ ಹಾಜರಿದ್ದು ಮಾತನಾಡಿದರು.

ಒಟ್ಟಿನಲ್ಲಿ ತಂಡ ನಿರ್ಧರಿಸಿದಂತೆ ಚಿತ್ರವನ್ನ ಅದ್ದೂರಿಯಾಗಿ ತೆರೆ ಮೇಲೆ ತರುತ್ತಿದ್ದು, ಇನ್ನೇನಿದ್ದರೂ ಪ್ರೇಕ್ಷಕ ಮಹಾಪ್ರಭುಗಳು ಈ ಚಿತ್ರವನ್ನು ನೋಡಿ ಯಾವ ರೀತಿ ಬಂದಿದೆ ಎಂದು ತಿಳಿಸಬೇಕಿದೆ.

Facebook Comments

Sri Raghav

Admin