ಚೈನ್ ಲಿಂಕ್ ಮೂಲಕ 2 ಸಾವಿರಕ್ಕೂ ಹೆಚ್ಚು ಮಂದಿಗೆ ವಂಚಿಸಿದ್ದ ಆರೋಪಿ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.22- ಸಾವಿರ ರೂ.ಗಳ ಲೆಕ್ಕದಲ್ಲಿ ಹೂಡಿಕೆ ಮಾಡಿದರೆ ಕೋಟಿ ಕೋಟಿ ಹಣ ನೀಡುವುದಾಗಿ ನಂಬಿಸಿ 2 ಸಾವಿರಕ್ಕೂ ಹೆಚ್ಚು ಮಂದಿಗೆ ವಂಚಿಸಿ ಕೋಟ್ಯಂತರ ರೂ. ಹಣ ಲಪಟಾಯಿಸಿದ್ದ ಆರೋಪಿಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ನಗರ ಮತ್ತು ರಾಜ್ಯದ ಕೆಲವೆಡೆ ಡಿಜಿಟೆಕ್‍ಮಾರ್ಕ್ ಲೈವ್ ವೆಬ್‍ಸೈಟ್ ಮೂಲಕ ಫಾಂಜಿ ಸ್ಕೀಮ್‍ನಲ್ಲಿ ಸಾರ್ವಜನಿಕರನ್ನು ಚೈನ್ ಲಿಂಕ್ ಸದಸ್ಯರನ್ನಾಗಿ ಮಾಡಿಕೊಂಡು ಅವರಿಗೆ ಹೆಚ್ಚಿನ ಲಾಭಾಂಶ ನೀಡುವ ಆಮಿಷ ನೀಡಿ ಕೋಟ್ಯಂತರ ರೂ. ಹಣ ಹೂಡಿಕೆ ಮಾಡಿಕೊಂಡು ವಂಚಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

15 ಸಾವಿರ ಹಣ ಹೂಡಿಕೆ ಮಾಡಿದರೆ ಡಿಸೆಂಬರ್ 2021ರ ನಂತರ 1 ಲಕ್ಷ , 2022ರ ನಂತರ 5 ಲಕ್ಷ , 2023ರ ನಂತರ 12 ಲಕ್ಷ ಹಾಗೂ ಜನವರಿ 2025ರವರೆಗೆ ಹೂಡಿಕೆ ಮಾಡಿದರೆ 25 ಲಕ್ಷ ಹಣ ಹಿಂತಿರುಗಿಸುವುದಾಗಿ ಆಮಿಷ ಒಡ್ಡಿದ್ದ .

50 ಸಾವಿರ ಒಂದೇ ಬಾರಿ ಹಣ ಹೂಡಿಕೆ ಮಾಡಿದರೆ ಡಿಸೆಂಬರ್ 2021ರ ವೇಳೆಗೆ 3 ಲಕ್ಷ , 2022ರ ವೇಳೆಗೆ 30 ಲಕ್ಷ, 2023ಕ್ಕೆ 45 ಲಕ್ಷ, ಜನವರಿ 2025ರವರೆಗೆ ಹೂಡಿಕೆ ಮಾಡಿದರೆ 2 ಕೋಟಿ ಹಾಗೂ ಒಂದು ಲಕ್ಷ ಹೂಡಿಕೆ ಮಾಡಿದರೆ ಡಿಸೆಂಬರ್ 2021ರ ವೇಳೆಗೆ 7 ಲಕ್ಷ, 2022ರ ವೇಳೆಗೆ 40 ಲಕ್ಷ, 2023ರ ವೇಳೆಗೆ 90 ಲಕ್ಷ ಹಾಗೂ ಜನವರಿ 2025ರ ವೇಳೆಗೆ 3 ಕೋಟಿ ಹಣ ನೀಡುವುದಾಗಿ ವಾಟ್ಸ್ ಆ್ಯಪ್, ಯೂ ಟ್ಯೂಬ್ ಇತರೆ ಸೋಷಿಯಲ್ ಮೀಡಿಯಾ ಹಾಗೂ ಜೂಮ್ ಮೀಟಿಂಗ್‍ನಲ್ಲಿ ಪ್ರಚಾರ ಮಾಡಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವ್ಯಕ್ತಿಯೊಬ್ಬ ಸಾರ್ವಜನಿಕರಿಂದ ಹೆಚ್ಚಿನ ಲಾಭಾಂಶದ ಆಮಿಷ ಒಡ್ಡಿ ಕೋಟ್ಯಂತರ ರೂ. ವಂಚಿಸುತ್ತಿರುವುದಲ್ಲದೆ ಸರ್ಕಾರಕ್ಕೆ ಯಾವುದೇ ತೆರಿಗೆ ಪಾವತಿ ಮಾಡದೆ ಕೋಟಿ ಕೋಟಿ ಹಣ ಲಪಟಾಯಿಸುತ್ತಿದ್ದಾನೆ ಎಂಬ ಬಗ್ಗೆ ಬಂದ ಮಾಹಿತಿಯನ್ನಾಧರಿಸಿ ಸಿಸಿಬಿ ಪೊಲೀಸರು ವಂಚಕನನ್ನು ಬಂಸಿದ್ದಾರೆ.

ವಂಚಕ ವಾಜಿರ್ ಎಕ್ಸ್ ಮೂಲಕ ಟ್ರೋನ್ ಕಾಯಿನ್‍ಗಳನ್ನು ಖರೀದಿ ಮಾಡಿ ಸದಸ್ಯರುಗಳಿಗೆ ತಾವೇ ರೂಪಿಸಿದ ಕಾನೂನು ಮಾನ್ಯತೆ ಇಲ್ಲದ ಡಿಟಿಎಂ ಟೋಕನ್‍ಗಳನ್ನು ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ತಮ್ಮ ಆನ್‍ಲೈನ್ ಜಾಲಕ್ಕೆ ಸದಸ್ಯರನ್ನು ನೇಮಕ ಮಾಡುವ ಏಜೆಂಟರುಗಳಿಗೆ ಶೇ.25 ಹಾಗೂ ಟೀಂ ಲೀಡರ್‍ಗಳಿಗೆ ಶೇ.1 ಕಮಿಷನ್ ನೀಡುವ ಆಮಿಷ ತೋರಿಸಿ ಸುಮಾರು 2 ಸಾವಿರಕ್ಕೂ ಹೆಚ್ಚು ಮಂದಿಗೆ ವಂಚನೆ ಮಾಡಲಾಗಿದೆ.

ಆರೋಪಿಯನ್ನು ಬಂಸುವಲ್ಲಿ ಯಶಸ್ವಿಯಾಗಿರುವ ಸಿಸಿಬಿ ಆರ್ಥಿಕ ಅಪರಾಧ ದಳದ ಅಕಾರಿ ಮತ್ತು ಸಿಬ್ಬಂದಿಗಳು ಆತನ ವಿರುದ್ಧ ಹಣ ವಂಚನೆ , ಐಟಿ ಕಾಯ್ದೆ ಸೇರಿದಂತೆ ಹಲವಾರು ರೀತಿಯ ಪ್ರಕರಣಗಳನ್ನು ದಾಖಲಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.

Facebook Comments

Sri Raghav

Admin