ಚಾಲೆಂಜಿಂಗ್ ಸ್ಟಾರ್ ದರ್ಶನ್ ಫೇಸ್ಬುಕ್ ಲೈವ್ ಬಂದಿದ್ದೇಕೆ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.10- ಕಳೆದೆರಡು ದಿನಗಳ ಹಿಂದೆಯೇ ಫೇಸ್‍ಬುಕ್ ಲೈವ್‍ಗೆ ಬರುವುದಾಗಿ ಡಿ ಬಾಸ್ ದರ್ಶನ್ ಅವರು ಹೇಳಿದ್ದರಿಂದ ಇಂದು (ಜ.10) ಅಭಿಮಾನಿಗಳು ಅವರ ಮಾತುಗಳನ್ನು ಕೇಳಲು ಕಾತರರಾಗಿದ್ದರು. ಇಂದು ಬೆಳಗ್ಗೆ 11 ಗಂಟೆಗೆ ದರ್ಶನ್ ಫೇಸ್‍ಬುಕ್ ಲೈವ್ ಬಂದಾಗ ಈ ಬಾರಿ ನಮ್ಮ ನೆಚ್ಚಿನ ನಟ ಯಾವ ಕುತೂಹಲ ಅಂಶದ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾರೆ, ರಾಬರ್ಟ್ ಸಿನಿಮಾದ ಬಿಡುಗಡೆಯ ಕುರಿತು ಏನಾದರೂ ವಿಷಯ ತಿಳಿಸುತ್ತಾರೋ, ಅಥವಾ ತಮ್ಮ ಹುಟ್ಟುಹಬ್ಬದ ಬಗ್ಗೆ ಮಾಹಿತಿಯನ್ನು ನೀಡುತ್ತಾರೋ ಎಂಬ ನಾನಾ ಪ್ರಶ್ನೆಗಳೂ ಅಭಿಮಾನಿಗಳ ತಲೆಯಲ್ಲಿ ಗಿರಕಿ ಹೊಡೆಯುತ್ತಿತ್ತು ಇದಕ್ಕೆಲ್ಲಾ ಈಗ ಉತ್ತರ ಸಿಕ್ಕಿದೆ.

2020ರಲ್ಲಿ ದರ್ಶನ್‍ರ ಯಾವುದೇ ಚಿತ್ರ ತೆರೆಗೆ ಬರದಿದ್ದರೂ ಅವರ ಅಭಿನಯದ ರಾಬರ್ಟ್ ಚಿತ್ರದ ಪೋಸ್ಟರ್‍ಗಳು ಹಾಗೂ ಚಿತ್ರದ ಮಾಹಿತಿಗಳು ಸಾಕಷ್ಟು ಬಾರಿ ಅಂತರ್ಜಾಲದಲ್ಲಿ ಜೋರು ಸದ್ದು ಮಾಡಿತ್ತು, ಇತ್ತೀಚೆಗೆ ರಾಬರ್ಟ್ ಚಿತ್ರದ ಹಾಡು ಕೂಡ ಹಿಟ್ ಆಗಿದ್ದರಿಂದ ಇಂದಿನ ಫೇಸ್‍ಬುಕ್ ಲೈವ್ ಅಭಿಮಾನಿಗಳಲ್ಲಿ ಸಾಕಷ್ಟು ಕ್ರೇಜ್ ಹುಟ್ಟು ಹಾಕಿತ್ತು.

# ಈ ಬಾರಿಯೂ ಬರ್ತ್‍ಡೇ ಇಲ್ಲ:
ಫೇಸ್‍ಬುಕ್ ಲೈವ್‍ಗೆ ಬಂದ ದರ್ಶನ್ ಮೊದಲು ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ಹೇಳಿದರು. 2020 ಒಂದು ಕೆಟ್ಟ ವರ್ಷವಾಗಿತ್ತು ಹೊಸ ವರ್ಷ ಎಲ್ಲರ ಬಾಳಿನಲ್ಲೂ ಹರ್ಷ ತರಲಿ ಎಂದು ಹಾರೈಸಿದರು.

ಕಳೆದ ಬಾರಿಯು ಡಿ ಬಾಸ್ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ, ಆದರೆ ಈ ಬಾರಿ ದರ್ಶನ್‍ರ ಜನ್ಮದಿನವನ್ನು ವಿಜೃಂಭಣೆಯಿಂದ ಮಾಡಬೇಕೆಂದು ಅಭಿಮಾನಿಗಳು ಆಲೋಚಿಸಿದ್ದರಾದರೂ ಈ ಬಾರಿಯೂ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ದರ್ಶನ್ ಹೇಳುವ ಮೂಲಕ ನಿರಾಸೆ ಮೂಡಿಸಿದರು.

ಫೆಬ್ರವರಿ 15 ರಂದು ದರ್ಶನ್ ಅವರ ಹುಟ್ಟುಹಬ್ಬವಿದ್ದು ಈ ಬಾರಿಯ ಜನ್ಮದಿನದಂದು ನಾನು ಊರಿನಲ್ಲಿ ಇರುವುದಿಲ್ಲ ಅಂದು ನಮ್ಮ ಮನೆಯ ಬಳಿ ಬರಬೇಡಿ, ನನಗೆ ನಿಮ್ಮ ಹಾಗೂ ನಿಮ್ಮ ಕುಟುಂಬದವರ ಆರೋಗ್ಯವೇ ಮುಖ್ಯ ಎಂದು ದರ್ಶನ್ ಹೇಳಿದರು.

ಅಭಿಮಾನಿಗಳು ನಿರಾಸರಾಗಬೇಡಿ ಮಾರ್ಚ್ ತಿಂಗಳ ನಂತರ ಒಂದೊಂದು ಭಾನುವಾರದಂದು ನಮ್ಮ ಅಭಿಮಾನಿಗಳಿರುವ ಊರಿಗೆ ಹೋಗಿ ಅವರೊಂದಿಗೆ ಕಾಲ ಕಳೆಯುತ್ತೇನೆ, ಈ ವರ್ಷ ಕೊರೊನಾ ಕಾಟ ಮುಗಿಯಲಿ ಮುಂದಿನ ವರ್ಷ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳೋಣ ಎಂದು ದರ್ಶನ್ ಹೇಳಿದರು.

ಕೊರೊನಾದಿಂದ ಉಂಟಾದ ಲಾಕ್‍ಡೌನ್‍ನಿಂದಾಗಿ ಎಷ್ಟು ಮಂದಿ ಸಂಕಷ್ಟಕ್ಕೆ ಸಿಲುಕಿರುವ ಸಮಯದಲ್ಲಿ ಅದ್ಧೂರಿಯಾದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ಹೋಗಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಬೇಡಿ ಎಂದು ಅಭಿಮಾನಿಗಳಿಗೆ ದರ್ಶನ್ ಅವರು ಸಲಹೆ ನೀಡಿದರು.

# ಮಾರ್ಚ್ 11ಕ್ಕೆ  ರಾಬರ್ಟ್ ರಿಲೀಸ್:
2020ರಲ್ಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರವನ್ನು ನೋಡಲು ಅಭಿಮಾನಿಗಳು ಕಾತರದಿಂದಿದ್ದರು ಅವರ ಕಾತರನ್ನು ಮಾರ್ಚ್ 11ರಂದು ತಣಿಸಲಿದೆ ಎಂದು ದರ್ಶನ್ ಹೇಳಿದರು.ಕೆಲವು ಸ್ಟಾರ್ ಚಿತ್ರಗಳು ಕೂಡ ಒಟಿಟಿಯಲ್ಲಿ ಬಿಡುಗಡೆಯಾಗುತ್ತದೆ ಎಂದು ಹೇಳುತ್ತಿದ್ದಾರೆ, ಆದರೆ ಚಿತ್ರಮಂದಿರದಲ್ಲಿ ಅಭಿಮಾನಿಗಳು ತಟ್ಟುವ ಚಪ್ಪಾಳೆ ಸದ್ದು ನಟರಿಗೆ ಮುಖ್ಯವಾಗಿರುವುದರಿಂದ ರಾಬರ್ಟ್ ಚಿತ್ರವನ್ನು ಥಿಯೇಟರ್‍ನಲ್ಲೇ ಬಿಡುಗಡೆ ಮಾಡುವುದಾಗಿಯೂ ದಚ್ಚು ತಿಳಿಸಿದರು.
ಕೊರೊನಾದಿಂದಾಗಿ ಸದ್ಯ ಸರ್ಕಾರ ಚಿತ್ರಮಂದಿರದ ಶೇ.50ರಷ್ಟು ಆಸನಗಳಿಗೆ ಮಾತ್ರ ಅವಕಾಶ ನೀಡಿದ್ದರೂ ನಮ್ಮ ರಾಬರ್ಟ್ ಚಿತ್ರವು ಚಿತ್ರಮಂದಿರದಲ್ಲೇ ಬಿಡುಗಡೆ ಆಗುತ್ತದೆ ಎಂದು ಚಾಲೆಂಜಿಂಗ್‍ಸ್ಟಾರ್ ಡ ದರ್ಶನ್ ಸ್ಪಷ್ಟಪಡಿಸಿದರು.

Facebook Comments

Sri Raghav

Admin