ರಾಮರಾಜ್ ಕಾಟನ್‍ಗೆ ದರ್ಶನ್ ರಾಯಭಾರಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.1- ದೇಶದ ಖ್ಯಾತ ಧೋತಿ, ವೇಸ್ಟಿ ಹಾಗೂ ಅಂಗಿ ತಯಾರಿಕ ಸಂಸ್ಥೆಯಾದ ರಾಮ್‍ರಾಜ್ ಕಾಟನ್‍ನ ಬ್ರಾಂಡ್‍ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗದೀಪ್ ರಾಯಭಾರಿಯಾಗಿದ್ದಾರೆ.

ತಮಿಳುನಾಡು, ಆಂಧ್ರಪ್ರದೇಶದಲ್ಲಿ ಭಾರೀ ಜನಪ್ರಿಯವಾಗಿರುವ ರಾಮ್‍ರಾಜ್ ಕಾಟನ್ ಕರ್ನಾಟಕದಲ್ಲೂ ತನ್ನ ಮಾರುಕಟ್ಟೆ ವಿಸ್ತರಣೆಗೆ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ನಟ ದರ್ಶನ್ ಅವರನ್ನು ತನ್ನ ಬ್ರಾಂಡ್ ರಾಯಭಾರಿಯಾಗಿ ಆಯ್ಕೆ ಮಾಡಿಕೊಂಡಿದೆ.

ರಾಮ್‍ರಾಜ್ ಸಂಸ್ಥೆಯ ಧೋತಿಗಳನ್ನು ಜನಪ್ರಿಯಗೊಳಿಸಲು ನಾನಾ ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಈ ಎಲ್ಲಾ ಪ್ರಚಾರಗಳ ಫಲವಾಗಿ ಧೋತಿ ಫ್ಯಾಶನ್ ಇಂದು ಟ್ರೆಂಡಿಂಗ್ ಆಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಕೆ.ಆರ್.ನಾಗರಾಜನ್ ತಿಳಿಸಿದ್ದಾರೆ.

ಸಂಸ್ಥೆ ಇಂದು ದಕ್ಷಿಣ ಭಾರತದಾದ್ಯಂತ 50000ಕ್ಕೂ ಹೆಚ್ಚು ನೇಕಾರ ಕುಟುಂಬಗಳ ಪಾಲಿಗೆ ಜೀವನಾಧಾರವಾಗುವ ಮೂಲಕ ಆಂತರಿಕ ಮಾರುಕಟ್ಟೆ ಜೊತೆಗೆ ಕಳೆದ ಮೂರು ವರ್ಷಗಳಿಂದ ಆಸ್ಟ್ರೇಲಿಯಾ, ಕೆನಡಾ, ಅಮೆರಿಕ ಹಾಗೂ ಬ್ರಿಟನ್‍ಗಳಲ್ಲಿ ಆನ್‍ಲೈನ್ ಖರೀದಿಗೆ ಕೂಡ ಉತ್ಪನ್ನಗಳನ್ನು ಪರಿಚಯಿಸಿದೆ.

Facebook Comments

Sri Raghav

Admin