‘ನನ್ನ ಸೆಲೆಬ್ರೆಟಿಗಳನ್ನು ಕೆಣಕಬೇಡಿ’ ಎಂದು ದರ್ಶನ್ ಟ್ವೀಟ್ ವಾರ್ನಿಂಗ್..! । ಸೋಶಿಯಲ್ ಮೀಡಿಯಾದಲ್ಲಿ ಭಾರಿ ವಾರ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.17- ನನ್ನ ಅನ್ನದಾತರು ಸೆಲಿಬ್ರಿಟಿಗಳನ್ನು ಕೆಣಕಲು, ಪ್ರಚೋದಿಸಲು ಬರದಿರಿ ಎಂದು ಟ್ವೀಟ್ ಮಾಡುವ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಪೈಲ್ವಾನ್ ಚಿತ್ರದ ಪೈರಸಿ ವಿಷಯವಾಗಿ ದರ್ಶನ್ ಮತ್ತು ಸುದೀಪ್ ಅಭಿಮಾನಿಗಳ ನಡುವೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಟಾಕ್ ಯುದ್ಧವೇ ನಡೆಯುತ್ತಿದೆ.

ದರ್ಶನ್ ಅವರ ಅಭಿಮಾನಿಗಳೇ ಪೈಲ್ವಾನ್ ಚಿತ್ರವನ್ನು ಪೈರಸಿ ಮಾಡಿ ಚಿತ್ರವನ್ನು ಸೋಲಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಗಳು ಕೇಳಿಬಂದಿವೆ. ಇದಕ್ಕೆ ನಿರ್ಮಾಪಕಿ ಸ್ವಪ್ನ ಕೃಷ್ಣ ಅವರು ಸ್ಪಷ್ಟನೆ ನೀಡಿಯೂ ಆಗಿದೆ. ಆದರೂ ಸಾಮಾಜಿಕ ಜಾಲತಾಣದಲ್ಲಿ ಜಂಘೀ ಕುಸ್ತಿ ನಿಂತಿಲ್ಲ. ಇಂದು ಟ್ವೀಟ್ ಮಾಡಿರುವ ದರ್ಶನ್ ಅವರು, ಸದ್ಯಕ್ಕೆ ನಾನು ಬೆಂಗಳೂರಿನಲ್ಲಿ ಇಲ್ಲ. ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದೇನೆ.

ಸದ್ಯ ಕೇಳಿಬರುತ್ತಿರುವ ಕೆಲವು ವ್ಯಕ್ತಿಗಳ ಬಗ್ಗೆ ಒಂದು ಕಿವಿಮಾತು, ನನ್ನ ಅನ್ನದಾತರು ಸೆಲಬ್ರಿಟಿಗಳನ್ನು ಕೆಣಕಲು, ಪ್ರಚೋದಿಸಲು ಬರದಿರಿ ಎಂದು ಹೇಳುವ ಮೂಲಕ ಅಖಾಡಕ್ಕೆ ಎಂಟ್ರಿ ಪಡೆದಿದ್ದಾರೆ. ಈವರೆಗೂ ಅಭಿಮಾನಿಗಳ ನಡುವೆ ಮಾತ್ರ ನಡೆಯುತ್ತಿದ್ದ ಜಂಘೀ ಕುಸ್ತಿಗೆ ದರ್ಶನ್ ಟ್ವಿಟ್‍ನಿಂದ ಸ್ಟಾರ್ ನಟರ ನಡುವೆಯೇ ಜಿದ್ದಾಜಿದ್ದಿ ನಡೆಯಲಿದೆಯೇ ಎಂಬ ಗೊಂದಲ ಆರಂಭವಾಗಿದೆ.

ಇದಕ್ಕೆ ಸುದೀಪ್ ಅಭಿಮಾನಿಗಳು ಕೂಡ ತಿರುಗೇಟು ನೀಡಿದ್ದು, ಅಭಿಮಾನಿಗಳನ್ನು ನೀವು ಅನ್ನದಾತರು, ಸೆಲೆಬ್ರಿಟಿಗಳು ಎಂದು ಕರೆದಿರುವುದು ಹೆಮ್ಮೆಯ ವಿಷಯ. ಆದರೆ ಬೆರೆಯವರ ಅನ್ನ ಕಿತ್ತು ನಿಮಗೆ ಕೊಡಲು ಹೊರಟಿರುವುದು ದುರಂತ. ನಾವು ಯಾರನ್ನೂ ಕೆಣಕಿಲ್ಲ, ಪ್ರಚೋದಿಸಿಲ್ಲ. ಒಂದು ಮೂವಿಯನ್ನು ಡಿಪ್ರೊಮೋಟ್ ಮಾಡುವುದು ಎಂತಹ ತಪ್ಪು. ನಿಮ್ಮ ಮೂವಿಯನ್ನೇ ಡೀಪ್ರಮೊಟ್ ಮಾಡಿದರೆ ನೀವು ಸಹಿಸುತ್ತಿದ್ದೀರಾ? ನಿಮ್ಮ ಅನ್ನದಾತರಿಗೆ ನೀವೇ ಹೇಳಿದರೆ ನಿಮಗೂ ಗೌರವ ಎಂದು ತಿರುಗೇಟು ನೀಡಿದ್ದಾರೆ.

ಬುಕ್ ಮೈ ಶೋ ಹಾಗೂ ಇತರ ಆ್ಯಪ್‍ಗಳಲ್ಲಿ ಪೈಲ್ವಾನ್ ಸಿನಿಮಾಕ್ಕೆ ಐದರ ಬದಲಾಗಿ ಸಿಂಗಲ್ ಸ್ಟಾರ್ ರೇಟಿಂಗ್ ಕೊಟ್ಟು ಡೀಪ್ರಮೊಟ್ ಮಾಡುವ ಪ್ರಯತ್ನ ಮಾಡಿದೆ. ತಮಿಳಿನ ರಾಕರ್ಸ್ ಪೈಲ್ವಾನ್ ಸಿನಿಮಾವನ್ನು ಪೈರೆಸಿ ಮಾಡಿ ಲಿಂಕ್‍ನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಾಗ ಅದನ್ನು ಎಲ್ಲ ಕಡೆ ದರ್ಶನ್ ಅಭಿಮಾನಿಗಳು ಶೇರ್ ಮಾಡಿ ಮಾರುಕಟ್ಟೆ ಬೀಳಿಸುವ ಪ್ರಯತ್ನ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಕಿಡಿಕಾರಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಇದು ಸದ್ಯಕ್ಕೆ ಟ್ರೆಂಡಿಂಗ್ ವಾರ್ ಆಗಿ ನಡೆಯುತ್ತಿದ್ದು, ಸಿನಿಮಾದ ಸೋಲಿನ ಭಯದಿಂದ ನಿರ್ಮಾಪಕರು ಇನ್ನೊಬ್ಬ ಸ್ಟಾರ್ ನಟನ ಹೆಸರು, ಅಭಿಮಾನಿಗಳನ್ನು ಬಳಸಿಕೊಂಡು ಅಪಪ್ರಚಾರ ಮಾಡಿ ತಮ್ಮ ಸಿನಿಮಾವನ್ನು ಗೆಲ್ಲಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಒಟ್ಟಿನಲ್ಲಿ ಹಲವು ದಿನಗಳಿಂದ ನಡೆಯುತ್ತಿರುವ ಕಿಚ್ಚ ಮತ್ತು ದಚ್ಚು ನಡುವಿನ ಶೀತಲ ಸಮರ ಹಂತ ಹಂತವಾಗಿ ಬಯಲಿಗೆ ಬರುತ್ತಿದೆ.

Facebook Comments

Sri Raghav

Admin