ಸೈಮಾ ಅವಾರ್ಡ್ಸ್ : ದರ್ಶನ್ ಉತ್ತಮ ನಟ, ರಚಿತಾರಾಮ್ ಉತ್ತಮ ನಟಿ

ಈ ಸುದ್ದಿಯನ್ನು ಶೇರ್ ಮಾಡಿ

ಹೈದ್ರಾಬಾದ್, ಸೆ. 19- ಕೊರೊನಾ ಹಾವಳಿಯಿಂದ ಮುಂದೂಡಲ್ಪಟ್ಟಿದ್ದ 2019ರ ಸೈಮಾ ಪ್ರಶಸ್ತಿ ಸಮಾರಂಭವು ಕಳೆದ ರಾತ್ರಿ ಮುತ್ತಿನ ನಗರಿ ಹೈದರಾಬಾದ್‍ನಲ್ಲಿ ಅದ್ಧೂರಿಯಾಗಿ ನೆರವೇರಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರವು ಪ್ರಶಸ್ತಿಗಳನ್ನು ಸೂರೆಗೊಂಡಿದೆ.

ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಮುನ್ನ ನಡೆದ ಫೋಟೋ ಶೂಟ್‍ನಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಚಿತ್ರಗಳ ಖ್ಯಾತ ನಟಿಯರು ಕೆಂಪು ಹಾಸಿನ ಮೇಲೆ ವಿವಿಧ ಭಂಗಿಯ ರಿಸುಗಳನ್ನು ತೊಟ್ಟು ಕ್ಯಾಟ್ ವಾಕ್ ಮಾಡುವ ಮೂಲಕ ನೆರೆದಿದ್ದವರ ಮನರಂಜಿಸಿದರು.

ಪ್ರಶಸ್ತಿ ಸಮಾರಂಭದಲ್ಲಿ ತೆಲುಗು ಚಿತ್ರರಂಗದ ಖ್ಯಾತ ನಟರುಗಳಾದ ಪ್ರಿನ್ಸ್ ಮಹೇಶ್‍ಬಾಬು, ನ್ಯಾಚುರಲ್ ಸ್ಟಾರ್ ನಾನಿ, ಕನ್ನಡತಿಯರಾದ ರಚಿತಾರಾಮ್, ರಶ್ಮಿಕಾಮಂದಣ್ಣ, ಶ್ರುತಿ ಹಾಸನ್, ಶಾನ್ವಿ ಶ್ರೀವಾಸ್ತವ್ ಮುಂತಾದವರು ಪಾಲ್ಗೊಂಡಿದ್ದರೆ, ಕನ್ನಡ ಚಿತ್ರರಂಗ ವಿಭಾಗದಿಂದ ಉತ್ತಮ ನಟ ಪ್ರಶಸ್ತಿ ಪಡೆದ ಚಾಲೆಂಜಿಂಗ್‍ಸ್ಟಾರ್ ದರ್ಶನ್‍ಅನುಪಸ್ಥಿತಿ ಎದ್ದು ಕಂಡಿತು. ದರ್ಶನ್ ಬದಲಿಗೆ ನಿರ್ಮಾಪಕಿ ಶೈಲಜಾನಾಗ್ ಅವರು ಪ್ರಶಸ್ತಿ ಸ್ವೀಕರಿಸಿದರು.

ತೆಲುಗು ಚಿತ್ರರಂಗದ ವಿಭಾಗದಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಮಹೇಶ್ ಬಾಬು ( ಮಹರ್ಷಿ), ಅತ್ಯುತ್ತಮ ವಿಮರ್ಶಕರ ನಟಿ ಪ್ರಶಸ್ತಿ ರಶ್ಮಿಕಾಮಂದಣ್ಣ( ಡಿಯರ್ ಕಾರ್ಮೇಡ್) ಪಾಲಾದರೆ, ಮಲಯಾಳಂ ವಿಭಾಗದಲ್ಲಿ ಅತ್ಯುತ್ತಮ ನಟ ಮೋಹನ್‍ಲಾಲ್ (ಲೂಸಿಫರ್), ಅತ್ಯುತ್ತಮ ನಟಿ ಪ್ರಶಸ್ತಿ ಅನಾಬೆನ್ (ಹೆಲೆನ್)ರ ಪಾಲಾಗಿದೆ.

ತಮಿಳು ವಿಭಾಗದಲ್ಲಿ ಅಸುರನ್ ಚಿತ್ರವು ಅತಿ ಹೆಚ್ಚು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡರೆ, ಆ ಚಿತ್ರದ ನಟನೆಗಾಗಿ ಧನುಷ್ ಅತ್ಯುತ್ತಮ ನಟ ಹಾಗೂ ತ್ರಿಷಾಅತ್ಯುತ್ತಮ ನಟಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡು ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

# ಪ್ರಶಸ್ತಿಗಳ ವಿವರ:
ಚಾಲೆಂಜಿಂಗ್ ಸ್ಟಾರ್ ದರ್ಶನ್: ಉತ್ತಮ ನಟ (ಯಜಮಾನ),
ಉತ್ತಮ ನಟಿ: ಡಿಂಪಲ್ ಕ್ವೀನ್ ರಚಿತಾರಾಮ್ ( ಆಯುಷ್ಮಾನ್‍ಭವ),
ವಿಮರ್ಶಕರ ಉತ್ತಮ ನಟ : ರಕ್ಷಿತ್ ಶೆಟ್ಟಿ: (ಶ್ರೀಮನ್ನಾರಾಯಣ),
ವಿಮರ್ಶಕರ ಉತ್ತಮ ನಟಿ : ರಶ್ಮಿಕಾ ಮಂದಣ್ಣ (ಯಜಮಾನ),
ಅತ್ಯುತ್ತಮ ಹೊಸ ನಟ : ಅಭಿಷೇಕ್ ಅಂಬರೀಷ್ (ಅಮರ್).
ಅತ್ಯುತ್ತಮ ಪೋಷಕ ನಟಿ: ಕಾರುಣ್ಯ ರಾಮ್ (ಮನೆ ಮಾರಾಟಕ್ಕಿದೆ), ಅತ್ಯುತ್ತಮ ಚೊಚ್ಚಲ ನಿರ್ದೇಶನ: ಮಯೂರ ರಾಘವೇಂದ್ರ (ಕನ್ನಡ್ ಗೊತ್ತಿಲ್ಲ),
ಅತ್ಯುತ್ತಮ ಖಳನಟ: ಸಾಯಿ ಕುಮಾರ್ (ಭರಾಟೆ), ಅತ್ಯುತ್ತಮ ನೃತ್ಯ
ನಿರ್ದೇಶನ: ಇಮ್ರಾನ್ ಸರ್ದಾರಿಯಾ (ಅವನೇ ಶ್ರೀಮನ್ನಾರಾಯಣ,
ಅತ್ಯುತ್ತಮ ಹಿನ್ನೆಲೆ ಗಾಯಕಿ: ಅನನ್ಯಾ ಭಟ್ (ಗೀತೆ: ಕೇಳದೇ ಕೇಳದೇ),
ಅತ್ಯುತ್ತಮ ಸಾಹಿತ್ಯ: ಪವನ್ ಒಡೆಯರ್ (ನಟಸಾರ್ವಭೌಮ).
ಅತ್ಯುತ್ತಮ ಹಾಸ್ಯ ಕಲಾವಿದ: ಸಾಧು ಕೋಕಿಲ (ಯಜಮಾನ),
ಅತ್ಯುತ್ತಮ ನಿರ್ದೇಶನ: ಹರಿಕೃಷ್ಣ, ಫೋನ್ ಕುಮಾರ್ (ಯಜಮಾನ),
ಅತ್ಯುತ್ತಮ ಸಂಗೀತ ನಿರ್ದೇಶನ: ವಿ.ಹರಿಕೃಷ್ಣ (ಯಜಮಾನ)

Facebook Comments

Sri Raghav

Admin