ಜನರ ಅನುಕಂಪ ಪಡೆಯಲು ಎಚ್‍ಡಿಕೆ ಮುಂದಾಗಿದ್ದಾರೆ : ಚಲುವರಾಯಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

ಮಂಡ್ಯ :  ಅನುಕಂಪ ಗಿಟ್ಟಿಸಿಕೊಳ್ಳಲು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರೈತರ ಬಗ್ಗೆ ಕಾಳಜಿ ತೋರುತ್ತಿದ್ದಾರೆ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಆರೋಪಿಸಿದ್ದಾರೆ.

ರೈತರ ಬಗ್ಗೆ ಬಹಳ ಅನುಕಂಪದ ಮಾತುಗಳನ್ನಾಡುತ್ತಿದ್ದಾರೆ. ಮತ್ತೆ ಬಂದು ಜನರನ್ನು ಅನುಕಂಪದ ಮೂಲಕ ಮರುಳು ಮಾಡಲು ಹೋಗಬೇಡಿ ಎಂದು ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೂ ಮುನ್ನ ನಾಲೆಗಳಿಗೆ ನೀರನ್ನು ಹರಿಸಲಾಗಿತ್ತು. ಆಗ ಯಾರನ್ನೂ ಕೇಳದೆ ನೀರು ಬಿಡಲಾಗಿತ್ತು. ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ನಾಲೆಗಳಿಗೆ ನೀರು ಬಿಡಲು ಹಿಂದೇಟು ಹಾಕಲಾಯಿತು ಎಂದು ಟೀಕಿಸಿದರು.

ಮಂಡ್ಯ ಜಿಲ್ಲೆಯ ಎರಡು ಸಕ್ಕರೆ ಕಾರ್ಖಾನೆಗಳು ಮುಚ್ಚಲು ಕುಮಾರಸ್ವಾಮಿಯವರೇ ಕಾರಣ ಎಂದು ಆರೋಪಿಸಿದ ಚಲುವರಾಯಸ್ವಾಮಿ 14 ತಿಂಗಳ ಕಾಲ ಸರಿಯಾಗಿ ಕೆಲಸ ಮಾಡಲಿಲ್ಲ.

”ಆ ಅವಧಿಯಲ್ಲಿ ನಾವು ಕರಾಳ ದಿನಗಳನ್ನು ನೋಡಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈಗಿನ ಸರ್ಕಾರ ಎಂಟು ಸಾವಿರ ಕೋಟಿ ತಡೆ ಹಿಡಿದಿದೆ ಎಂದರೆ ಹೇಗೆ ಎಂದು ಪ್ರಶ್ನಿಸಿದರು.

Facebook Comments