ಚಾಮರಾಜನಗರದಲ್ಲಿ ಹೆಚ್ಚುತ್ತಿದೆ ಸೋಂಕು, ಜನರಲ್ಲಿ ಮನೆ ಮಾಡಿದ ಆತಂಕ

ಈ ಸುದ್ದಿಯನ್ನು ಶೇರ್ ಮಾಡಿ

ಚಾಮರಾಜನಗರ,ಜು.4- ಜಿಲ್ಲಾಯಲ್ಲಿ ಕೋವಿಡ್-19 ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿದ್ದು, ಶನಿವಾರ ಒಂದೇ ದಿನ 24 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. ಇದರಿಂದಾಗಿ ಜಿಲ್ಲಾಯಲ್ಲಿ ಒಟ್ಟು ಪಾಸಿಟಿವ್ ಪ್ರಕರಣಗಳು 78 ಕ್ಕೆ ಏರಿಕೆ ಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ 29 ಗ್ರಾಮಗಳನ್ನು ಕಂಟೈನ್ಮೆಮೆಂಟï ವಲಯಗಳೆಂದು ಗುರುತಿಸಲಾಗಿದ್ದು ಈ ಗ್ರಾಮ ಹಾಗೂ ವಾರ್ಡ್‍ಗಳನ್ನು ಸೀಲ್‍ಡೌನ್ ಮಾಡಲಾಗಿದೆ.

ಕೊಳ್ಳೇಗಾಲ ಪಟ್ಟಣದ ಮಂಜುನಾಥ ನಗರ, ನೂರ್ ಮೊಹಲ್ಲಾ, ಮುಡಿಗುಂಡ, ತಾಲ್ಲೂಕಿನ ದೊಡ್ಡಿಂದುವಾಡಿ, ಹನೂರು ತಾಲ್ಲೂಕಿನ ಗೋಪಿ ಶೆಟ್ಟಿಯೂರು, ಯಳಂದೂರು ತಾಲ್ಲೂಕಿನ ಗೌಡಳ್ಳಿ, ಚಾಮರಾಜನಗರದ 31 ನೇ ವಾರ್ಡ್9ನ ಆದಿಜಬವರ ಬೀದಿ, 1 ನೇ ವಾರ್ಡ್‍ನ ಗಾಣಿಗರ ಬೀದಿ, 16 ನೇ ವಾರ್ಡ್‍ನ ರೈಲ್ವೆ ಬಡಾವಣೆ, ಗಂಡ್ಲುಪೇಟೆಯ ಮಹದೇವ ಪ್ರಸಾದ್ ನಂಗರ ಸೇರಿದಂತೆ 29 ಗ್ರಾಮ ಹಾಗೂ ವಾರ್ಡ್‍ಗಳನ್ನು ಸೀಲ್‍ಡೌನಧ ಮಾಡಲಾಗಿದೆ.

ಚಾಮರಾಜನಗರ ತಾಲ್ಲೂಕಿನಲ್ಲಿ 23, ಗುಂಡ್ಲುಪೇಟೆ 45, ಹಾಗೂ ಕೊಳ್ಳೇಗಾಲ ತಾಲ್ಲೂಕಿನಲ್ಲಿ 44, ಯಳಂದೂರು ತಾಲ್ಲೂಕಿನಲ್ಲಿ 5, ಹನೂರು ತಾಲ್ಲೂಕಿನಲ್ಲಿ ಒಬ್ಬರು ಸೇರಿದಂತೆ 78 ಮಂದಿ ಜಿಲ್ಲಾಯಲ್ಲಿ ಕೋವಿಡ್-19ಕ್ಕೆ ತುತ್ತಾಗಿದ್ದಾರೆ. ಎಲ್ಲರನ್ನು ನಗರದಲ್ಲಿರುವ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಬ್ಬರು ಗುಣಮುಖರಾಗಿದ್ದು, ಒಬ್ಬರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಪೈಕಿ ಚಾಮರಾಜನಗರ ವೈದ್ಯಕೀಯ ಕಾಲೇಜಿನ ಪ್ರಯೋಗಾಲಯದಲ್ಲಿ ಸಹಾಯಕಿ, ಪೆÇಲೀಸ್ ಇಲಾಖೆಯ ವೈಯರ್‍ಲೆಸ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ 28 ವರ್ಷದ ಸಬ್ ಇನ್‍ಸ್ಪೆಕ್ಟರ್ , ತಾಲ್ಲೂಕು ಕಛೇರಿಯ ಭೂಮಾಪನಾ ಇಲಾಖೆಯ ಸಿಬ್ಬಂದಿ (ರೋಗಿ ಸಂಖ್ಯೆ 9,572) ಅವರೊಂದಿಗೆ ಸಂಪರ್ಕ ಹೊಂದಿದ್ದ ಅದೇ ಇಲಾಖೆಯ 40 ವರ್ಷದ ಸಿಬ್ಬಂದಿ ಹಾಗೂ ಕೊಳ್ಳೇಗಾಲದ ಕೆಎಸ್‍ಆರ್‍ಟಿಸಿ ನೌಕರನಿಗೂ ಸೋಂಕು ತಗುಲಿದೆ.

ಜಿಲ್ಲಾಯಲ್ಲಿ ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಹಾಗೂ ದ್ವಿತೀಯ ಸಂಪರ್ಕ ಹೊಂದಿರುವವರನ್ನು ಗುರುತಿಸಲಾಗಿದೆ. ಇವರೆಲ್ಲರು ಮನೆ ಕ್ವಾರಂಟೈನ್‍ನಲ್ಲಿದ್ದು, ಎಲ್ಲರ ಆರೋಗ್ಯದ ಮೇಲೆ ಜಿಲ್ಲಾಡಳಿತ ನಿಗಾ ಇರಿಸಿದೆ.ಪ್ರಕರಣಗಳಲ್ಲಿ ಬಹುತೇಕರು ಬೆಂಗಳೂರಿಗೆ ಹೋಗಿ ಬಂದವರು. ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ಭೇಟಿ ನೀಡಿದವರಲ್ಲೇ ಸೋಂಕು ಕಾಣಿಸಿಕೊಳ್ಳುತ್ತಿರುವುದು ಜಿಲ್ಲಾಡಳಿತದ ತಲೆ ನೋವು ಹೆಚ್ಚಿಸಿದೆ.

Facebook Comments