ಚಾಮರಾಜನಗರ ದುರುಂತಕ್ಕೆ ಜಿಲ್ಲಾಡಳಿತವೇ ಹೊಣೆ, ಮೈಸೂರು ಡಿಸಿಗೆ ಬಿಗ್ ರಿಲೀಫ್ : ಹೈಕೋರ್ಟ್‌ ವರದಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 13- ಅಮ್ಲಜನಕದ ಕೊರತೆಯಿಂದ ಚಾಮರಾಜನಗರದಲ್ಲಿ ಸಂಬಂಭವಿಸಿದ 24 ಮಂದಿ ಸಾವಿನ ಪ್ರಕರಣದಲ್ಲಿ ಮೈಸೂರು ಜಿಲ್ಲಾಧಿಕಾರಿಯವರ ಲೋಪ ಕಂಡು ಬಂದಿಲ್ಲ ಎಂದು ಹೈಕೋರ್ಟ್ ಗೆ ವರದಿ ಸಲ್ಲಿಸಲಾಗಿದೆ. ಚಾಮರಾಜನಗರದ ಜಿಲ್ಲಾಡಳಿತ ಹಾಗೂ ಜಿಲ್ಲಾಸ್ಪತ್ರೆ ಸಕಾಲದಲ್ಲಿ ಎಚ್ಚೆತ್ತುಕೊಳ್ಳದೆ ಇದ್ದಿದ್ದರಿಂದ ಸಾವುಗಳು ಸಂಭವಿಸಿವೆ ಎಂದು ನ್ಯಾಯಾಲಯಕ್ಕೆ ವರದಿ ನೀಡಲಾಗಿದೆ.

ನ್ಯಾಯಮೂರ್ತಿ ಎ.ಎನ್.ವೇಣುಗೋಪಾಲ್ ಅವರ ಸಮಿತಿ ಹೈಕೋರ್ಟ್ ಗೆ ವರದಿ ನೀಡಿದ್ದು ಅದರಲ್ಲಿ ಮೇ 2ರಂದು ನಡೆದ ದುರಂತಕ್ಕೆ ಚಾಮರಾಜನಗರ ಜಿಲ್ಲಾಸ್ಪತ್ರೆಯ ದುರುಂತಕ್ಕೆ ಜಿಲ್ಲಾಡಳಿತವೇ ಹೊಣೆ ಎಂದು ಸ್ಪಷ್ಟ ಪಡಿಸಲಾಗಿದೆ. ಚಾಮರಾಜನಗರದಿಂದ ಮೈಸೂರಿಗೆ 70 ಕಿ.ಮೀ. ದೂವಿದೆ. ಆಮ್ಲಜನಕ ಸಾಗಾಣಿಕೆ ಮಾಡಲು ಸಾಕಷ್ಟು ಸಮಯ ಹಿಡಿಯುತ್ತದೆ. ಆಮ್ಲಜನಕ ಪೂರೈಕೆಗೆ ಮೈಸೂರು ಜಿಲ್ಲಾಧಿಕಾರಿ ತಡಯೊಡ್ಡಿದರು ಎಂದು ಆರೋಪ ಕೇಳಿ ಬಂದಿತ್ತು. ಚಾಮರಾಜನರ ಜಿಲ್ಲಾಧಿಕಾರಿ ರವಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಸೇರಿದಂತೆ ಅನೇಕರು ಸರಣಿ ಸಾವುಗಳಿಗೆ ರೋಹಿಣಿ ಸಿಂಧೂರಿ ಅವರನ್ನು ಹೊಣೆ ಮಾಡಿದ್ದರು.

ಆದರೆ ಈ ಆರೋಪಗಳಿಗೆ ತಿರುಗೇಟು ನೀಡಿದ್ದ ರೋಹಿಣಿ ಸಿಂಧೂರಿ ಅವರು, ಚಾಮರಾಜನಗರ ಜಿಲ್ಲೆಯಿಂದ ಬೇಡಿಕೆ ಬಂದ ತಕ್ಷಣ ನಾವು ಸ್ಪಂದಿಸಿದ್ದೇವೆ. ಆಮ್ಲಜನಕ ಉತ್ಪಾದನಾ ಘಟಕದಿಂದ ಪೂರೈಕೆ ಮಾಡುವುದು ಒಂದು ಭಾಗವಾದರೆ ಅಂದು ನಾನು ರಿಸ್ಕ್ ತೆಗೆದುಕೊಂಡು ನಮ್ಮ ಜಿಲ್ಲೆಯ ಆಸ್ಪತ್ರೆಗಳಲ್ಲಿ ಇದ್ದ ಸಿಲಿಂಡರ್ ಗಳನ್ನು ಕಳುಹಿಸಿಕೊಟ್ಟಿದ್ದೇನೆ. ಎಲ್ಲದಕ್ಕೂ ದಾಖಲೆ ಇದೆ. ಒಂದು ವೇಳೆ ನಮ್ಮಲ್ಲಿ ಹೆಚ್ಚು ಕಡಿಮೆಯಾಗಿದ್ದರೆ ಯಾರು ಹೊಣೆ ಎಂದು ಪ್ರಶ್ನಿಸಿದ್ದರು.

ಚಾಮರಾಜನಗರದಲ್ಲಿ ಒಂದೇ ದಿನ 24 ಮಂದಿ ಸಾವು ಸಂಭವಿಸಿದಾಗ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕರ್ನಾಟಕ ಹೈಕೋರ್ಟ್ ವಿಚಾರಣೆಗೆ ನ್ಯಾಯಮೂರ್ತಿ ವೇಣುಗೋಪಾಲ್ ಅವರ ನೇತೃತ್ವದಲ್ಲಿ ವಿಚಾರಣಾ ಸಮಿತಿ ರಚಿಸಿತ್ತು. ಸಮಿತಿ ಹೈಕೋರ್ಟ್ ಗೆ ವರದಿ ನೀಡಿದೆ. ಅದರಲ್ಲಿ ಸರಣಿ ಸಾವುಗಳಿಗೆ ಜಿಲ್ಲಾಸ್ಪತ್ರೆ ಮತ್ತು ಜಿಲ್ಲಾಡಳಿತದ ನಿರ್ಲಕ್ಷ್ಯವೇ ಕಾರಣ ಎಂದು ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.

ಜೊತೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮೇ 2ರಂದು ನಡೆದ ದುರಂತದ ಹೊರತಾಗಿ ಮೇ 4ರಿಂದ 10ರ ನಡುವೆ 36 ಜನ ಸಾವನ್ನಪ್ಪಿದ್ದಾರೆ. ಎಂಟು ದಿನಗಳ ಅಂತರದಲ್ಲಿ ಒಟ್ಟು 62 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಗುರುತಿಸಿದೆ ಎಂದು ಹೇಳಲಾಗಿದೆ.

ಆಮ್ಲಜನಕ ಪೂರೈಕೆಯಲ್ಲಿ ವಿಳಂಬವಾಗಿದ್ದರಿಂದ ರೋಗಿಗಳ ಮಿದುಳು ಹಾಗೂ ರಕ್ತ ಪರಿಚಲನೆಯ ಮೇಲೆ ಪರಿಣಾಮ ಬೀರಿದ್ದು, ಸಾವುಗಳು ಸಂಭವಿಸಿವೆ ಎಂದು ನ್ಯಾಯಮೂರ್ತಿಗಳು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

Facebook Comments