ಚಾಮರಾಜನಗರದಲ್ಲಿ ಕೊರೊನಾಗೆ ಪೊಲೀಸ್ ಸಿಬ್ಬಂದಿ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

ಚಾಮರಾಜನಗರ, ಆ.31- ಇನ್ನೇನು ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಬೇಕು ಎನ್ನುವಷ್ಟರಲ್ಲಾ ಪೊಲೀಸರು ಸಾವನ್ನಪ್ಪುತ್ತಿರುವುದು ಇಲಾಖೆಯಲ್ಲಿನ ಸಿಬ್ಬಂದಿಗಳಿಗೆ ಕಳವಳ ಮೂಡಿಸಿದೆ.  ಚಾಮರಾಜನಗರದ ಗುಂಡ್ಲುಪೇಟೆ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸುರೇಶ್ ಎಂಬುವವರೇ ಕೊರೊನೊ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ.

ಕಳೆದ ತಿಂಗಳಿನಲ್ಲಿ ಕೊವೆಡ್ ತಪಾಸಣೆಗೆ ಒಳಪಟ್ಟು ಜಿಲ್ಲಾಸ್ಪತ್ರೆಗೆ ಸುರೇಶ್ ದಾಖಲಾಗಿದ್ದರು. ಆ.14ರಂದು ಸುರೇಶ್ ಅವರ ಇಚ್ಚೆಯಂತೆ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೂ ಕೂಡ ಎಸ್ಪಿ ದಿವ್ಯ ಅವರು ದಾಖಲಿಸಿದ್ದರು.  ಖಾಸಗೀ ಆಸ್ಪತ್ರೆಯಲ್ಲಿನ ಚಿಕಿತ್ಸೆ ಧನಾತ್ಮಕವಾಗಿ ಸ್ಪಂದಿಸಿ ಇನ್ನೆನು ಗುಣಮುಖರಾಗುತ್ತಿದ್ದಾರೆ ಎಂಬುದನ್ನು ಕೇಳಿ ಸಂತತಸ ಪಡುತ್ತಿದ್ದ ಕೆಲವರಿಗೆ ರಾತ್ರೋ ರಾತ್ರಿ ಸಾವಿನ ಸುದ್ದಿ ಕೇಳಿ ಶಾಕ್ ಮೂಡಿಸಿದೆ.

ಮೃತ ಸುರೇಶ್ ಅವರು 1999ರಲ್ಲಿ ಇಲಾಖೆಗೆ ಸೇರಿ ಮಾಂಬಳ್ಳಿ, ತೆರಕಣಾಂಬಿ, ಬೇಗೂರು ಗುಂಡ್ಲುಪೇಟೆಯಲ್ಲಿ ಸೇವೆ ಸಲ್ಲಿಸಿದ್ದರು.  ಚಾಮರಾಜನಗರ ಜಿಲ್ಲಾಯಲ್ಲಿ ಇದುವರೆಗೆ ಮೂರು ಜನ ಆರಕ್ಷಕ ಸಿಬ್ಬಂದಿಗಳು ಕೋವಿಡ್‍ಗೆ ಬಲಿಯಾಗಿದ್ದು, ಚಾಮರಾಜನಗರ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಇದು ಎರಡನೇ ಪ್ರಕರಣವಾಗಿದೆ.

ಗ್ರಾಮಾಂತರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಎಸ್‍ಐ ಪರಮೇಶ್ವರಪ್ಪ ಅವರು ಕೋವಿಡ್‍ಗೆ ಪ್ರಥಮ ಬಲಿಯಾದರೆ, ಗುಂಡ್ಲುಪೇಟೆ ಠಾಣೆಯ ಕಿಲಗೆರೆಯ ಸುರೇಶ್ ಸಾವು ಎರಡನೇ ಪ್ರಕರಣವಾಗಿದೆ.

Facebook Comments