ಚಾಮರಾಜಪೇಟೆಯಲ್ಲಿ ಕನ್ನಡ ಕಲರವ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.1- ಚಾಮರಾಜ ಪೇಟೆಯಲ್ಲಿ ಕನ್ನಡದ ಕಲರವ. ಎಲ್ಲೆಲ್ಲೂ ರಾರಾಜಿಸಿದ ಕನ್ನಡದ ಬಾವುಟ. ನಾಡಿನ ಸಂಸ್ಕøತಿಯನ್ನು ಬಿಂಬಿಸುವಂತಹ ಜಾನಪದ ಕಲಾ ತಂಡಗಳ ಪ್ರದರ್ಶನದ ಮೂಲಕ ನಾಡತಾಯಿ ಭುವನೇಶ್ವರಿಯ ವೈಭವದ ಮೆರವಣಿಗೆ. ಕಳೆದ 63 ವರ್ಷಗಳಿಂದಲೂ ನಡೆದುಕೊಂಡು ಬರುತ್ತಿರುವ ಅದ್ಧೂರಿ ಕನ್ನಡ ರಾಜ್ಯೋತ್ಸವ ಸಮಾರಂಭ ಇಂದು 64ನೇ ಕನ್ನಡ ರಾಜ್ಯೋತ್ಸವವೂ ಕೂಡ ವಿಜೃಂಭಣೆಯಿಂದ ಜರುಗಿತು.

ಮಾಜಿ ಸಚಿವರಾದ ರಾಮಲಿಂಗಾ ರೆಡ್ಡಿ, ಮಾಜಿ ಶಾಸಕರಾದ ಆರ್.ವಿ. ದೇವರಾಜ್ ಮುಂತಾದವರು ನಾಡ ಧ್ವಜವನ್ನು ಹಾರಿಸುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಮಲಿಂಗಾರೆಡ್ಡಿ ಅವರು, ಕನ್ನಡ ರಾಜ್ಯೋತ್ಸವ ಆಚರಣೆಗೆ ಚಾಮರಾಜಪೇಟೆ ತವರೂರು. ಕಳೆದ 63 ವರ್ಷಗಳಿಂದ ಈ ಸಮಿತಿ ಯಶಸ್ವಿಯಾಗಿ ರಾಜ್ಯೋತ್ಸವವನ್ನು ಆಚರಿಸುತ್ತಾ ಬಂದಿದೆ. ನಾಡು, ನುಡಿ, ಸಂಸ್ಕøತಿ ಹಾಗೂ ಕೀರ್ತಿ ಪತಾಕೆಯನ್ನು ಹಾರಿಸಿದೆ. ಈ ಸಮಿತಿಯ ಕನ್ನಡದ ಕಾರ್ಯ ಶ್ಲಾಘನೀಯ ಎಂದರು.

ಶ್ರೀ ರಾಜೇಶ್ವರಿ ಅಮ್ಮನವರು, ಶ್ರೀ ಮಲೈಮಹದೇಶ್ವರ ಸ್ವಾಮಿ, ಶ್ರೀ ಆದಿಪರಾಶಕ್ತಿ, ಆದಿಶಕ್ತಿ ಚಿಕ್ಕಣ್ಣಮ್ಮ ದೇವಿಯ ಬೆಳ್ಳಿ ರಥೋತ್ಸವ ಕಾರ್ಯ ಕ್ರಮವನ್ನು ಇದೇ ಸಂದರ್ಭದಲ್ಲಿ ನೆರವೇರಿಸಲಾಯಿತು. ಶಾಲಾ ಮಕ್ಕಳು, ಸಾಹಿತಿಗಳು, ಸ್ಥಳೀಯರು, ಕನ್ನಡ ಪರ ಹೋರಾಟ ಗಾರರು ಸಮಾರಂಭದಲ್ಲಿ ಪಾಲ್ಗೊಂಡು ಕನ್ನಡತನವನ್ನು ವಿಜೃಂಭಿಸಿದರು.

ಸ್ಥಳೀಯ ಪಾಲಿಕೆ ಸದಸ್ಯರಾದ ಕೋಕಿಲಾ ಚಂದ್ರಶೇಖರ್, ಮಾಜಿ ಸದಸ್ಯರಾದ ಚಂದ್ರಶೇಖರ್ ಚಾಮರಾಜಪೇಟೆ ನಾಡಹಬ್ಬ ಕನ್ನಡ ರಾಜ್ಯೋತ್ಸವ ಸಮಿತಿ ಪದಾಧಿಕಾರಿಗಳಾದ ಚನ್ನಕೇಶವ, ಎಂ.ಮುದ್ದಯ್ಯ, ಬಿ.ಗೋವಿಂದ, ಜಯಶಂಕರ್, ಶಂಕರ್.ಎಚ್, ಚನ್ನೇಗೌಡ, ಟಿ.ಉದಯ್ ಕುಮಾರ್, ನಟರಾಜ್, ಸಿ.ರಾಜು ಮುಂತಾದವರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಇಂದು ಸಂಜೆ 6.30ಕ್ಕೆ ಲಹರಿ ಇವೆಂಟ್ಸ್ ಹಿನ್ನೆಲೆ ಗಾಯಕ ಸಚಿನ್‍ರವರ ಗಾಯನ, ಜೀ ಕನ್ನಡ ಸರಿಗಮಪ, ಕನ್ನಡ ಕೋಗಿಲೆ ಮತ್ತು ಉದಯ ಸಿಂಗರ್ ಖ್ಯಾತ ತನುಷ್‍ರಾಜ್, ಸಿಂಚನ ಮತ್ತು ಹಾಸ್ಯ ಕಲಾವಿದ ರಮೇಶ್‍ಬಾಬು ಅವರಿಂದ ಮಿಮಿಕ್ರಿ ಕಾರ್ಯಕ್ರಮದ ಜೊತೆಗೆ ಹೆಸರಾಂತ ಗಾಯಕ- ಗಾಯಕಿ ಯರಿಂದ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಸಂಸದ ಪಿ.ಸಿ.ಮೋಹನ್, ಪಾಲಿಕೆ ಸದಸ್ಯರಾದ ಸುಜಾತ ಡಿ.ಸಿ.ರಮೇಶ್, ಬಿ.ವಿ.ಗಣೇಶ್, ಮಾಜಿ ಸದಸ್ಯರಾದ ಗೌರಮ್ಮ ಗೋವಿಂದರಾಜ್, ಉದ್ಯಮಿಗಳಾದ ರಾಧಾಕೃಷ್ಣ ರಾಜೀವ್, ಸೋಮ ಶೇಖರ್, ಮುಖಂಡರಾದ ಮಹದೇವ್, ಜಿ.ಕೆ.ಲೋಕೇಶ್, ಬೇರುಮಾಲ್ ಎಚ್.ಭಂಡಾರಿ, ವಿನೋದ್ ಜೈನ್ ಮುಂತಾದವರು ಭಾಗವಹಿಸಲಿದ್ದಾರೆ.

Facebook Comments