ಆಷಾಡ ಶುಕ್ರವಾರದ ವಿಶೇಷ : ಚಾಮುಂಡೇಶ್ವರಿ ಭಕ್ತರಿಗೆ 35ಸಾವಿರ ಡ್ರೈಫ್ರೂಟ್ ಲಡ್ಡು..!

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಜು.4-ಸಾಂಸ್ಕøತಿಕ ನಗರಿ ಆಷಾಡ ಶುಕ್ರವಾರಕ್ಕೆ ವಿಶಿಷ್ಟ ರೀತಿಯಲ್ಲಿ ಸಜ್ಜಾಗುತ್ತಿದ್ದು, ನಾಡದೇವಿ ಚಾಮುಂಡೇಶ್ವರಿ ಆರಾಧನೆಗೆ 35 ಸಾವಿರ ಡ್ರೈಫ್ರೂಟ್ಸ್ ಲಡ್ಡು ಸಿದ್ದಗೊಳ್ಳುತ್ತಿದೆ.

ಆಷಾಡ ಶುಕ್ರವಾರದಂದು ಚಾಮುಂಡೇಶ್ವರಿಯ ದರ್ಶನ ಪಡೆಯುವ ಭಕ್ತರಿಗೆ ವಿತರಿಸಲು ಈ ಬಾರಿ ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿ ಲಡ್ಡು ತಯಾರಿಕೆಗೆ ಮುಂದಾಗಿದ್ದು, ಮೊದಲ ಶುಕ್ರವಾರವಾದ ನಾಳೆ ಬೆಳಗ್ಗೆ ಚಾಮುಂಡಿ ಬೆಟ್ಟದಲ್ಲಿ 10 ಗಂಟೆಯಿಂದ ಸಂಜೆ 7ರವರೆಗೆ ಲಡ್ಡು ವಿತರಿಸಲಾಗುವುದು.

ನಗರದ ಖಾಸಗಿ ಕಲ್ಯಾಣಮಂಟಪದಲ್ಲಿ ಲಡ್ಡು ತಯಾರಿಕೆಗಾಗಿ ಭರದ ಸಿದ್ಧತೆ ಕೈಗೊಂಡಿದ್ದು, 40 ಬಾಣಸಿಗರು ಕಳೆದ ಐದು ದಿನಗಳಿಂದ ಕಾರ್ಯ ನಿರತರಾಗಿದ್ದಾರೆ. 350 ಕೆಜಿ ಸಕ್ಕರೆ, 450 ಕೆಜಿ ಕಡ್ಲೆಹಿಟ್ಟು , 25 ಟಿನ್ ರೀಫೈಂಡ್ ಆಯಿಲ್, 60 ಕೆಜಿ ಗೋಡಂಬಿ, 30 ಕೆಜಿ ಖರ್ಜೂರ, 30 ಕೆಜಿ ಬೂರ ಸಕ್ಕರೆ, 10 ಕೆಜಿ ಬಾದಾಮಿ, 10 ಕೆಜಿ ಪಿಸ್ತ ಬಳಸಿ ಬರುವ ಭಕ್ತರಿಗೆ 35 ಸಾವಿರ ಲಡ್ಡು ತಯಾರಿಸಲು ಮುಂದಾಗಿದ್ದಾರೆ.

ನಾಳೆ ಚಾಮುಂಡಿ ಬೆಟ್ಟದಲ್ಲಿ 25 ಸಾವಿರ ಭಕ್ತರಿಗೆ ಅನ್ನಸಂತರ್ಪಣೆಯೂ ನಡೆಯಲಿದೆ. ಜೊತೆಗೆ ಭಕ್ತರಿಗೆ ಈ ಲಡ್ಡುಗಳನ್ನು ವಿತರಿಸಲಾಗುತ್ತಿದೆ.

Facebook Comments

Sri Raghav

Admin