ಚಾಮುಂಡೇಶ್ವರಿ ದರ್ಶನಕ್ಕೂ ಕೊರೊನಾ ಭಯ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಮಾ.20- ನಾಡ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಿ ದರ್ಶನ ಭಾಗ್ಯಕ್ಕೂ ಕೊರೊನಾ ಭೀತಿ ಎದುರಾಗಿದೆ. ಚಾಮುಂಡಿ ಬಿಟ್ಟದಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದ್ದು , ದರ್ಶನಕ್ಕೆ ಕೇವಲ ನಾಲ್ಕೈದು ಮಂದಿಗೆ ಅವಕಾಶ ನೀಡಲಾಗುತ್ತಿದೆ. ಶುಕ್ರವಾರದಂದು ಬೇರೆ ಬೇರೆ ಊರುಗಳಿಂದ ನೂರಾರು ಮಂದಿ ಚಾಮುಂಡೇಶ್ವರಿ ದರ್ಶನಕ್ಕೆ ಆಗಮಿಸುತ್ತಾರೆ.

ಆದರೆ ಈಗ ದೇಶಾದ್ಯಂತ ಕೊರೊನಾ ಭೀತಿ ಇರುವುದರಿಂದ ಚಾಮುಂಡಿ ಬೆಟ್ಟದಲ್ಲೂ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಜಿಲ್ಲಾಡಳಿತ ಬೆಟ್ಟಕ್ಕೆ ನಗರ ಸಾರಿಗೆಯನ್ನು ರದ್ದುಪಡಿಸಿದೆ. ಆದರೆ ಜನರು ಸ್ವಂತ ವಾಹನಗಳಲ್ಲಿ ಬೆಟ್ಟಕ್ಕೆ ಆಗಮಿಸಿದ್ದಾರೆ. ದೇವಾಲಯದ ಆಡಳಿತ ಮಂಡಳಿ ಕೇವಲ ನಾಲ್ಕೈದು ಮಂದಿಗೆ ದೇವಾಲಯದ ಒಳ ಪ್ರವೇಶಕ್ಕೆ ಬಿಟ್ಟು ಅವರು ದರ್ಶನ ಪಡೆದು ಹೊರ ಬಂದ ನಂತರ ಮತ್ತೆ ನಾಲ್ಕೈದು ಜನರನ್ನು ಬಿಡುತ್ತಿದೆ.

ಒಟ್ಟಾರೆ ಅತಿಯಾಗಿ ತುಂಬಿರುತ್ತಿದ್ದ ಭಕ್ತರು ಕಡಿಮೆ ಸಂಖ್ಯೆಯಲ್ಲಿದ್ದರೂ ದೇವಿಯ ದರ್ಶನ ಭಾಗ್ಯ ಮಾತ್ರ ಬಹಳ ನಿಧಾನವಾಗಿತ್ತು. ಅರಮನೆಗೆ ನಿಷೇಧ: ಕೊರೊನಾ ಹಿನ್ನೆಲೆಯಲ್ಲಿ ಮೈಸೂರು ಅರಮನೆಗೆ ಮಾ.22ರವರೆಗೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದ್ದುದನ್ನು ಮಾ.31ರವರೆಗೆ ವಿಸ್ತರಿಸಲಾಗಿದೆ.
ಪ್ರವಾಸಿಗರು ಸಹಕರಿಸಬೇಕೆಂದು ಅರಮನೆ ಆಡಳಿತ ಮಂಡಳಿ ಮನವಿ ಮಾಡಿದೆ.

Facebook Comments