ಚಾಮುಂಡೇಶ್ವರಿ ಬೆಟ್ಟಕ್ಕೆ ಹರಿದು ಬಂದ ಭಕ್ತಸಾಗರ

ಈ ಸುದ್ದಿಯನ್ನು ಶೇರ್ ಮಾಡಿ

Chamundi-Hill
ಮೈಸೂರು, ಆ.3- ಮೂರನೇ ಆಷಾಢ ಶುಕ್ರವಾರ ಹಾಗೂ ದೇವಿ ಚಾಮುಂಡೇಶ್ವರಿ ವರ್ಧಂತೋತ್ಸವ ಒಂದೇ ದಿನ ಇರುವುದರಿಂದ ಭಕ್ತಾದಿಗಳ ಸಾಗರವೇ ಹರಿದು ಬರುತ್ತಿದೆ. ಚಾಮುಂಡೇಶ್ವರಿ ವರ್ಧಂತೋತ್ಸವ ಪ್ರಯುಕ್ತ ದೇವಿಗೆ ಇಂದು ವಿವಿಧ ಪೂರ್ಜಾ ಕೈಕಂರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ 5.30ಕ್ಕೆ ಮಹಾರುದ್ರಾಭಿಷೇಕ, ನಂತರ ಪಂಚಾಮೃತಾಭಿಷೇಕ, ಅಲಂಕಾರ ಆನಂತರ ಸಹಸ್ರನಾಮ ಅರ್ಚನೆಯನ್ನು ನೆರವೇರಿಸಲಾಯಿತು.

IMG-20180803-WA0066

ಬೆಳಗ್ಗೆ 9.30ರ ನಂತರ ದೇವಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು. 10.25ಕ್ಕೆ ದೇವಿಯ ಉತ್ಸವ ಮೂರ್ತಿಯನ್ನು ಚಿನ್ನದ ಪಲ್ಲಕ್ಕಿಯಲ್ಲಿರಿಸಿ ವರ್ಣರಂಜಿತ ಅಲಂಕಾರ ಮಾಡಲಾಗಿತ್ತು. ನಂತರ ದೇವಾಲಯದ ಸುತ್ತಲೂ ಉತ್ಸವ ನಡೆಯಿತು. ಇಂದಿನ ಪೂಜೆಯಲ್ಲಿ ರಾಜಮಾತೆ ಪ್ರಮೋದಾದೇವಿಯವರು ದೇವಿಗೆ ಮೊದಲ ಪೂಜೆ ಸಲ್ಲಿಸಿದರು. ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ಪತ್ನಿ ರಿಷಿಕಾ, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ದಂಪತಿ, ಅರಣ್ಯ ಸಚಿವ ಆರ್.ಶಂಕರ್ ಪೂಜೆ ವೇಳೆ ಪಾಲ್ಗೊಂಡಿದ್ದರು.

IMG-20180803-WA0067

ಆಷಾಢ ಶುಕ್ರವಾರ ಮತ್ತು ವರ್ಧಂತೋತ್ಸವ ಒಂದೇ ದಿನ ಬಂದಿರುವುದರಿಂದ ಕಳೆದ ಶುಕ್ರವಾರಕ್ಕಿಂತ ಇಂದು ದರ್ಶನಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸಾಲುಗಟ್ಟಿ ನಿಂತಿದ್ದರು. ಬೆಟ್ಟದಲ್ಲಿ ಎಲ್ಲಿ ನೋಡಿದರೂ ಜನ ಸಾಗರವೇ ಕಂಡು ಬಂತು. ಬೆಟ್ಟಕ್ಕೆ ಆಗಮಿಸಿದ ಭಕ್ತಾಧಿಗಳಿಗೆ ಹಲವಾರು ಮಂದಿ ವಿವಿಧ ಪ್ರಸಾದಗಳನ್ನು ತಂದು ವಿತರಿಸುತ್ತಿದ್ದದ್ದು ಸರ್ವೆ ಸಾಮಾನ್ಯವಾಗಿತ್ತು. ಹಲವಾರು ಮಹಿಳೆಯರು ಚಾಮುಂಡಿ ಬೆಟ್ಟದ ಪ್ರತಿ ಮೆಟ್ಟಿಲಿಗೂ ಪೂಜೆ ಮಾಡಿ ಬೆಟ್ಟ ಹತ್ತಿದರು. ಇನ್ನು ಕೆಲವು ಮಹಿಳೆಯರು ಬೆಟ್ಟಕ್ಕೆ ಆಗಮಿಸಿದ ಮಹಿಳೆಯರಿಗೆ ಹಸಿರು ಬಣ್ಣದ ಬಳೆಗಳು, ಹರಿಶಿಣ, ಕುಂಕುಮ, ಹೂ ನೀಡುತ್ತಿದ್ದದ್ದು ಅಲ್ಲಲ್ಲಿ ಕಂಡು ಬಂತು. ಮುಂಜಾಗ್ರತಾ ಕ್ರಮವಾಗಿ ಬೆಟ್ಟದಲ್ಲಿ ಹಾಗೂ ಮೆಟ್ಟಿಲುಗಳ ಬಳಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಇಂದು ರಾತ್ರಿ 8.30ಕ್ಕೆ ಚಾಮುಂಡೇಶ್ವರಿ ದೇವಿಯ ಉತ್ಸವ ನಂತರ ಫಲಪೂಜೆ, ಆನಂತರ ದರ್ಬಾರ್ ಉತ್ಸವ ಸಹ ನಡೆಯಲಿದೆ.

IMG-20180803-WA0070 IMG-20180803-WA0071 IMG-20180803-WA0072 IMG-20180803-WA0073 IMG-20180803-WA0074 IMG-20180803-WA0075 IMG-20180803-WA0076 IMG-20180803-WA0077

 

Facebook Comments

Sri Raghav

Admin