ನಾಳೆ ಚಂದನ್‍ಶೆಟ್ಟಿ-ನಿವೇದಿತಾ ಗೌಡ ವಿವಾಹ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.25- ರ್ಯಾಂಪ್‍ಸ್ಟಾರ್ ಹಾಗೂ ಬಿಗ್‍ಬಾಸ್-5 ವಿಜೇತ ಚಂದನ್‍ಶೆಟ್ಟಿ ಹಾಗೂ ನಿವೇದಿತಾ ಗೌಡ ನಾಳೆ ಸಪ್ತಪದಿ ತುಳಿಯಲಿದ್ದಾರೆ. ಬಿಗ್‍ಬಾಸ್-5ನ ಫೈನಲಿಸ್ಟ್‍ನಲ್ಲಿದ್ದ ಮೈಸೂರಿನ ಹುಡುಗಿ ನಿವೇದಿತಾ ಗೌಡ ಅವರೊಂದಿಗೆ ಚಂದನ್‍ಶೆಟ್ಟಿ ವಿವಾಹವು ಮೈಸೂರಿನ ಹಿನಕಲ್‍ನ ಹುಣಸೂರು ರಸ್ತೆಯಲ್ಲಿರುವ ನ್ಯೂ ಸ್ಪೆಟ್ರ ಕನ್ವೆನ್ಷನ್ ಹಾಲ್‍ನಲ್ಲಿ ನೆರವೇರಲಿದ್ದು, ಇಂದು ಸಂಜೆ ಆರತಕ್ಷತೆ ನಡೆಯಲಿದೆ.

ನಾಳೆ ಬೆಳಗ್ಗೆ 8.15 ರಿಂದ 9 ಗಂಟೆಯೊಳಗೆ ಸಲ್ಲುವ ಶುಭ ಮುಹೂರ್ತದಲ್ಲಿ ವಿವಾಹ ಬಂಧನಕ್ಕೆ ಒಳಗಾಗಲಿದ್ದಾರೆ. ಗಾಯಕ, ಸಂಗೀತ ನಿರ್ದೇಶಕರಾದ ಚಂದನ್‍ಶೆಟ್ಟಿ ಬಿಗ್‍ಬಾಸ್-5ನಲ್ಲಿ ಪಾಲ್ಗೊಂಡಿದ್ದ ವೇಳೆ ನಿವೇದಿತಾ ಗೌಡ ಅವರ ಪರಿಚಯವಾಗಿತ್ತು. ನಂತರ ಪರಸ್ಪರ ಪ್ರೀತಿಸುತ್ತಿದ್ದ ಇವರು ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

Facebook Comments