ಸಪ್ತಪದಿ ತುಳಿದ ಚಂದನ್‍-ನಿವೇದಿತಾ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಫೆ.26- ರ್ಯಾಂಪ್‍ಸ್ಟಾರ್ ಹಾಗೂ ಬಿಗ್‍ಬಾಸ್-5 ವಿಜೇತ ಚಂದನ್‍ಶೆಟ್ಟಿ ಮತ್ತು ಗೊಂಬೆ ನಿವೇದಿತಾ ಗೌಡ ಅವರು ಅರಮನೆ ನಗರಿ ಮೈಸೂರಿನಲ್ಲಿಂದು ಸಪ್ತಪದಿ ತುಳಿದರು. ನಗರದ ಹಿನಕಲ್‍ನ ಹುಣಸೂರು ರಸ್ತೆಯಲ್ಲಿರುವ ನ್ಯೂ ಸ್ಪೆಟ್ರ ಕನ್ವೆನ್ಷನ್ ಹಾಲ್‍ನಲ್ಲಿ ಇಂದು ಬೆಳಗ್ಗೆ 8.15 ರಿಂದ 9 ಗಂಟೆಯೊಳಗೆ ಸಲ್ಲುವ ಶುಭ ಮುಹೂರ್ತದಲ್ಲಿ ವಿವಾಹ ಬಂಧನಕ್ಕೆ ಒಳಗಾದರು.

ಬಿಗ್‍ಬಾಸ್-5ನ ಫೈನಲಿಸ್ಟ್‍ನಲ್ಲಿ ಒಬ್ಬರಾಗಿದ್ದ ನಿವೇದಿತಾ ಗೌಡ ಹಾಗೂ ಇದೇ ಸೀಜನ್‍ನ ವಿನ್ನರ್ ಆದ ಚಂದನ್‍ಶೆಟ್ಟಿ ಅವರು ಒಬ್ಬರನ್ನೊಬ್ಬರು ಸೀಜನ್‍ನಲ್ಲಿದ್ದಾಗಲೇ ಪ್ರೀತಿಸಿದ್ದರು. ನಂತರ ಮೈಸೂರು ದಸರಾ ಪ್ರದರ್ಶನದ ಸಂದರ್ಭದಲ್ಲಿ ಕಾರ್ಯಕ್ರಮದ ಮಧ್ಯದಲ್ಲೇ ಚಂದನ್‍ಶೆಟ್ಟಿ ನಿವೇದಿತಾ ಗೌಡ ಅವರಿಗೆ ಪ್ರೇಮ ನಿವೇದನೆ ಮಾಡಿದ್ದುದು ಸಾಕಷ್ಟು ವೈರಲ್ ಆಗಿತ್ತು.

ಇದಾದ ನಂತರ ಇವರಿಬ್ಬರ ನಿಶ್ಚಿತಾರ್ಥವನ್ನು ಎರಡೂ ಮನೆಯವರು ನೆರವೇರಿಸಿದ್ದರು. ಇಂದು ಗುರು-ಹಿರಿಯರು, ಸಂಬಂಧಿಕರು, ಸ್ನೇಹಿತರ ಸಮ್ಮುಖದಲ್ಲಿ ಈ ಜೋಡಿ ಹಸೆಮಣೆ ಏರಿತು. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಸೇರಿದಂತೆ ಚಿತ್ರೋದ್ಯಮದ ಹಲವಾರು ಗಣ್ಯರು ವಧು-ವರರಿಗೆ ಶುಭ ಹಾರೈಸಿದರು.

Facebook Comments