ಕ್ಷಮೆ ಯಾಚಿಸಿದ ಚಂದನ್‍ಶೆಟ್ಟಿ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಆ.25- ಕೋಲುಮಂಡೆ ಜಂಗಮ ದೇವ ಹಾಡನ್ನು ತಮ್ಮದೇ ರ್ಯಾಪ್ ಸಂಗೀತದಲ್ಲಿ ಹಾಡಿ ವಿವಾದ ಮೈಮೇಲೆ ಹೇರಿಕೊಂಡಿದ್ದ ಕನ್ನಡದ ರ್ಯಾಪಿಂಗ್ ಸ್ಟಾರ್ ಚಂದನ್ ಶೆಟ್ಟಿ ಕ್ಷಮೆ ಯಾಚಿಸಿದ್ದಾರೆ.

ಮಲೆ ಮಹದೇಶ್ವರ ಸ್ವಾಮಿಯನ್ನು ಉದ್ದೇಶಿಸಿ ಸುಶ್ರಾವ್ಯವಾಗಿ ಹಾಡಲಾಗಿದ್ದ ಕೋಲುಮಂಡೆ ಜಂಗಮದೇವ ಹಾಡನ್ನು ರ್ಯಾಪರ್ ಶೈಲಿಯಲ್ಲಿ ಹಾಡಿರುವ ಚಂದನ್‍ಶೆಟ್ಟಿ ಸಂಗೀತ ಸಂಯೋಜಿಸಿದ್ದರು.

ಆದರೆ ಮೈಸೂರು ಭಾಗದ ಜನರ ಧಾರ್ಮಿಕ ಭಾವನೆಗೆ ಧಕ್ಕೆ ತರುವ ರೀತಿಯಲ್ಲಿ ಹಾಡನ್ನು ಚಿತ್ರೀಕರಿಸಲಾಗಿದೆ ಎಂದು ಬಿಜೆಪಿ ಮುಖಂಡ ಜೋಗಿ ಮಂಜು ಅವರು ಆರೋಪಿಸಿದ್ದರು.

ಈ ಕೂಡಲೇ ಚಂದನ್‍ಶೆಟ್ಟಿ ಹಾಡಿರುವ ಕೋಲುಮಂಡೆ ಜಂಗಮದೇವ ಹಾಡನ್ನು ಯು ಟ್ಯೂಬ್‍ನಿಂದ ತೆಗೆಯಬೇಕು ಎಂದು ಒತ್ತಾಯಿಸಿದ್ದರು. ಇದರಿಂದ ಎಚ್ಚೆತ್ತ ಚಂದನ್ ಶೆಟ್ಟಿ ಯಾರ ಮನಸಿಗೂ ನೋವಾಗುವಂತೆ ಮಾಡಿಲ್ಲ.

ದೇವರ ಬಗ್ಗೆ ನನಗೆ ಅಪಾರ ಭಕ್ತಿ ಇದೆ. ಏನಾದರೂ ತಪ್ಪಾಗಿದ್ದರೆ ದಯಮಾಡಿ ಕ್ಷಮಿಸಿಬಿಡಿ ಎಂದು ಮಾಧ್ಯಮಗಳ ಮೂಲಕ ಕ್ಷಮೆ ಕೇಳಿದ್ದಾರೆ.

Facebook Comments

Sri Raghav

Admin